25.7 C
ಪುತ್ತೂರು, ಬೆಳ್ತಂಗಡಿ
March 7, 2026
ವರದಿಶಾಲಾ ಕಾಲೇಜು

ಕೊಯ್ಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ 75ನೇ ವರ್ಷದ ಅಮೃತ ಮಹೋತ್ಸವದ‌ “ಅಮೃತ ಕೊಯ್ಲು” ಆಮಂತ್ರಣ

ಬೆಳ್ತಂಗಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಇಲ್ಲಿನ 75ನೇ ವರ್ಷದ ಅಮೃತ ಮಹೋತ್ಸವದ‌ “ಅಮೃತ ಕೊಯ್ಲು” ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ನ.28ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ಊರವರ ಸಹಕಾರದಿಂದ ಅಧ್ಬುತವಾಗಿ ಅಭಿವೃದ್ಧಿಗೊಂಡಿರುವ ಈ ಸರಕಾರಿ ಶಾಲೆಯೂ ಅದೆಷ್ಟೋ ಮುಚ್ಚುವ ಪರಿಸ್ಥಿತಿಯಲ್ಲಿರುವ ಸರಕಾರಿ ಶಾಲೆಗಳಿಗೆ ಪ್ರೇರಣೆಯಾಗಿದೆ ಎಂದರಲ್ಲದೇ, ಈ ಶಾಲೆಯ ಅಭಿವೃದ್ಧಿಯ ವಿಚಾರದಲ್ಲಿ “ಬದುಕು ಕಟ್ಟೋಣ ಬನ್ನಿ” ತಂಡದ ಸಂಚಾಲಕರು ಮತ್ತು ಲಕ್ಷ್ಮಿ ಗ್ರೂಪ್ ನ ಮಾಲಕ ಕೆ ಮೋಹನ್ ಕುಮಾರ ಅವರ ಕೊಡುಗೆಯನ್ನು ಸ್ಮರಿಸಿ ಶ್ಲಾಘಿಸಿದರು. ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕಾರ್ಯಕ್ರಮದ ಯಶಸ್ಸಿಗೆ ತಮ್ಮಿಂದಾದಗುವ ಸಹಕಾರವನ್ನು ನೀಡುವ ಭರವಸೆಯಿತ್ತರು.

ಅಮೃತ ಮಹೋತ್ಸವದ‌ ಗೌರವಾಧ್ಯಕ್ಷ ಬಜೆ ಬಾಲಕೃಷ್ಣ ಪೂಜಾರಿ ರಂಗಮಂದಿರ ನಿರ್ಮಾಣದ ಈ ವರೆಗಿನ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದರು, ಮುಂದುವರೆದು ಉಳಿದ 14 ದಿನಗಳನ್ನು ರಾತ್ರಿ ಹಗಲು ದುಡಿದಾಗ 28 ದಿನಗಳಷ್ಟು ಸಮಯ ಸಿಗುವುದರಿಂದ ಈ ನಿಟ್ಟಿನಲ್ಲಿ ನಾವೆಲ್ಲರೂ ರಾತ್ರಿ ಹಗಲು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಅಶೋಕ್ ಕುಮಾರ್ ಅಗ್ರಸಾಲೆ ಮುಂಬರುವ ಕಾರ್ಯಕ್ರಮಕ್ಕೆ ಶುಭ ಹಾರೈಕೆಯ ಮಾತುಗಳನ್ನಾಡಿದರೆ, ಅಮೃತ ಮಹೋತ್ಸವ ಅಧ್ಯಕ್ಷರಾದ ಲೋಕೇಶ್.ಪಿ ಇವರು ಅಮೃತ ಮಹೋತ್ಸವ ಕಾರ್ಯಕ್ರಮದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಣೆಯಿತ್ತರು.ಗೌರವಾಧ್ಯಕ್ಷ ಪ್ರಚಂಢಭಾನು ಭಟ್ ಪಾಂಬೇಲು, ಕಾರ್ಯಾಧ್ಯಕ್ಷರಾದ ಮಹಮ್ಮದ್ ಹಾರೂನ್ ಬಜಿಲ, ಹ.ವಿ.ಸಂಘದ ಅಧ್ಯಕ್ಷ ಕೇಶವ ಗೌಡ ಕಂಗಿತ್ತಿಲು, ಎಸ್ ಡಿ ಎಂ ಸಿ ಅಧ್ಯಕ್ಷ ವಿನಯ್ ಕೆ ಕೋಡಿಯೇಲು, ಉಪಾಧ್ಯಕ್ಷೆ ಕಸ್ತೂರಿ ಕಳೆಂಜಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಭಂಡಾರಿಕೋಡಿ, ಸ.ಪ್ರೌಢ. ಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ, ಹ.ವಿ. ಸಂಘದ ಪ್ರ ಕಾರ್ಯದರ್ಶಿ ಪಿ. ಚಂದ್ರಶೇಖರ ಸಾಲ್ಯಾನ್, ಹ.ವಿ.ಸಂಘದ ಕೋಶಾಧಿಕಾರಿ ಲೋಕೇಶ್ ಕೋರ್ಯಾರು, ಪ್ರಧಾನ ಸಂಚಾಲಕ ದಾಮೋದರ ಗೌಡ ಬೆರ್ಕೆ, ಶ್ರೀ ಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಖಾಸು, ಡಾ.ದಿವಾ ಕೊಕ್ಕಡ, ಶಾಲಾ ಶಿಕ್ಷಕ ವೃಂದದವರು, ಎಸ್ ಡಿ ಎಂ ಸಿ ಸದಸ್ಯರುಗಳು ಹಾಗೂ ಇನ್ನಿತರರು ಹಾಜರಿದ್ದರು.ಶಿಕ್ಷಕರಾದ ದೀಪಿಕಾ ಹಾಗೂ ವೀಣಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಿಕ್ಷಕರಾದ ರಮೇಶ್ ವಿ ಸ್ವಾಗತಿಸಿ, ದೇವಪ್ಪ ಧನ್ಯವಾದ ಅರ್ಪಿಸಿದರು, ವಾಣಿಶ್ರೀ ನಿರೂಪಿಸಿದರು.

Related posts

ಕುಣಿತ ಭಜನಾ ಸ್ಪರ್ಧೆ: ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿ ಪ್ರಥಮ

Suddi Udaya

ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ನಿಗಮ್ ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ: ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಹಾಗೂ ವಿವಿಧ ಗಣ್ಯರಿಂದ ಶುಭಾಶಯ

Suddi Udaya

ಲಾಯಿಲ: ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜೆ, ನೂರಾರು ವೃತಧಾರಿಗಳು ಪೂಜೆಯಲ್ಲಿ ಭಾಗಿ

Suddi Udaya

ಮಿತ್ತಬಾಗಿಲು: ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ಅಪಾರ ಹಾನಿ

Suddi Udaya
error: Content is protected !!