23.5 C
ಪುತ್ತೂರು, ಬೆಳ್ತಂಗಡಿ
March 7, 2026
ಬೆಳ್ತಂಗಡಿವರದಿ

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿ ಕಾಲಾವಕಾಶ ವಿಸ್ತರಣೆ

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿಯಲ್ಲಿ ತಾಂತ್ರಿಕ ಹಾಗೂ ಇತರ ಸಮಸ್ಯೆಗಳು ಬರುತ್ತಿದ್ದು ಕಳೆದ ಅ. 30ರಂದು ವಿದ್ಯಾರ್ಥಿವೇತನ ಅರ್ಜಿಯನ್ನು ಕೊನೆಯ ದಿನಾಂಕ ಎಂದು ಮಂಡಳಿಯು ಘೋಷಿಸಿತ್ತು. ಈ ವಿಚಾರವನ್ನು ಭಾರತೀಯ ಮಜ್ದೂರ್ ಸಂಘದ ಕಟ್ಟಡ ಕಾರ್ಮಿಕ ವಿಭಾಗವು ಕಾರ್ಮಿಕ ಸಚಿವರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಈ ತಾಂತ್ರಿಕ ಸಮಸ್ಯೆಗಳು ಹಾಗೂ ಇತರ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ವಿದ್ಯಾರ್ಥಿ ವೇತನದ ಅರ್ಜಿಯನ್ನು ಕಾಲಾವಕಾಶ ವಿಸ್ತರಿಸುವಂತೆ ವಿನಂತಿಸಲಾಗಿತ್ತು. ಇದಕ್ಕೆ ಪೂರಕವಾಗಿ ವಿಧಾನ ಪರಿಷತ್ತಿನ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಈ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿಯ ಕಾಲಾವಕಾಶವನ್ನು ವಿಸ್ತರಿಸುವಂತೆ ಆಗ್ರಹಿಸಿದ್ದರು.

ಇದೀಗ ಡಿಸೆಂಬರ್ 30ರವರೆಗೆ ವಿದ್ಯಾರ್ಥಿ ವೇತನದ ಅರ್ಜಿಯ ಕಾಲಾವಕಾಶವನ್ನು ವಿಸ್ತರಿಸಿರುತ್ತಾರೆ. ಈ ಪ್ರಯೋಜನವನ್ನು ಕಾರ್ಮಿಕರು ಪಡೆದುಕೊಳ್ಳುವಂತೆ ಬಿ ಎಂ ಎಸ್ ನ ರಾಜ್ಯ ಕಾರ್ಯದರ್ಶಿ ಎ ಜೈ ರಾಜ್ ಸಾಲಿಯಾನ್ ಕಾನರ್ಪ ಅವರು ವಿನಂತಿಸಿದ್ದಾರೆ

Related posts

ಅ.29: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ನಾಳ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ಪೂಜೆ, ರಾತ್ರಿ ಭಜನೆ, ರಂಗಪೂಜೆ

Suddi Udaya

ಬೆಳ್ತಂಗಡಿ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಚ್ಚಿನ ಘಟಕ ಹಾಗೂ ವಿವಿಧ ಸಂಘಗಳಿಂದ ರಾಮ ದೀಪೋತ್ಸವ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya

ಸೆ.22 -ಅ.2 : ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ನವರಾತ್ರಿ ಪೂಜಾ ಮಹೋತ್ಸವ

Suddi Udaya
error: Content is protected !!