32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅರುವ ಯಕ್ಷಗಾನ ತರಬೇತಿ ಕೇಂದ್ರದ ಅಧ್ಯಕ್ಷರಾಗಿ ಸದಾಶಿವ ಕರಂಬಾರು

ಅಳದಂಗಡಿ : ಆಮಂತ್ರಣ ಸೇವಾ ಪ್ರತಿಷ್ಠಾನ ರಿ. ಅಳದಂಗಡಿ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಅರುವ ಯಕ್ಷಗಾನ ತರಬೇತಿ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ನ.30 ನಡೆಯಿತು.

ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ನಲ್ಲಿ ನಡೆದ ಹೆತ್ತವರ ಮತ್ತು ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಸಭೆಯ ಅಧ್ಯಕ್ಷತೆಯನ್ನು ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್ ವಹಿಸಿದ್ದರು.
ವೇದಿಕೆಯಲ್ಲಿ ಟ್ರಸ್ಟಿಗಳಾದ ಅರುಣ್ ಅರುವ, ಸದಾನಂದ ಬಿ.ಕುದ್ಯಾಡಿ ಹಾಗೂ ಯಕ್ಷಗಾನ ಗುರುಗಳಾದ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದು ಕೆಲವು ಮಾಹಿತಿಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ 2026-2027 ನೇ ಸಾಲಿಗೆ ಕೇಂದ್ರಕ್ಕೆ ಪ್ರಥಮ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಶಿಕ್ಷಕರಾದ ಸದಾಶಿವ ಕರಂಬಾರು, ಉಪಾಧ್ಯಕ್ಷರಾಗಿ ಪವಿತ್ರ ಅಳದಂಗಡಿ , ನೂತನ ಕಾರ್ಯದರ್ಶಿಯಾಗಿ ಸುಲ್ಕೇರಿ ಶ್ರೀರಾಮ ಶಾಲೆಯ ಶಿಕ್ಷಕಿ ಶಶಿಕಲಾ ಅಳದಂಗಡಿ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಪಿಲ್ಯ ಮತ್ತು ಕೋಶಾಧಿಕಾರಿಯಾಗಿ
ಜಯಪ್ರಕಾಶ್ ದೇವಾಡಿಗ ಗೋಳಿಕಟ್ಟೆ ಆಯ್ಕೆಯಾದರು.

ಜನವರಿ 17 ರಂದು ಯಕ್ಷಗಾನ ತರಗತಿ ವಿದ್ಯಾರ್ಥಿಗಳ ಪ್ರಥಮ ರಂಗಪ್ರವೇಶ ನಡೆಯಲಿದ್ದು ಈ ಬಗ್ಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ಕಡೆ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ
ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಟ್ರಸ್ಟಿ ಅರುಣ್ ಜೈನ್ ಧನ್ಯವಾದ ಸಲ್ಲಿಸಿದರು.

Related posts

ಪ್ರೋ| ನಾ ವುಜಿರೆ ನಿಧನಕ್ಕೆ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಸಂತಾಪ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವಿದ್ಯಾರ್ಥಿಗಳಿಗೆ ರೂ. 25.5 ಲಕ್ಷ ಸ್ಕಾಲರ್ ಶಿಫ್ ನೀಡಿ ರೋಟರಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ: ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಗವರ್ನರ್ ರೋ| ವಿಕ್ರಂ ದತ್ತಾ ಪ್ರಶಂಸೆ

Suddi Udaya

ಎ.22: ಸಾವ್ಯದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ಶನಿಪೂಜೆ

Suddi Udaya

ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಗೆ ಕೊಡುಗೆಗಳ ಹಸ್ತಾಂತರ

Suddi Udaya

ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಮುಂಡೂರು: ಮಳೆಗೆ ಮನೆ ಬಳಿ ಮಣ್ಣು ಕುಸಿತ, ಅಪಾಯದಂಚಿನಲ್ಲಿ ಮನೆ

Suddi Udaya
error: Content is protected !!