ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ದ.ಕ. ಜಿಲ್ಲಾ ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗ

ಗುರುವಾಯನಕೆರೆ: ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ಜಿಲ್ಲಾ ಮಹಿಳಾ ಅಭ್ಯಾಸ ವರ್ಗವು ಡಿ.2 ರಂದು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಜರುಗಿತು.

ಉಜಿರೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪುಪ್ಪಾವತಿ ಆರ್. ಶೆಟ್ಟಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಹಕಾರಿ ಭಾರತೀಯ ಸಹಕಾರದಿಂದ ಮಹಿಳೆಯರು ಸಾಧನೆ ಮಾಡಲು ಸಹಕಾರಿಯಾಗಿದೆ. ಅಭ್ಯಾಸ ವರ್ಗದಲ್ಲಿ ದೊರೆಯುವ ಮಾಹಿತಿಯನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖ್ ವಿದ್ಯಾ ಪೈ ರವರು ಗೌರವವನ್ನು ಸ್ವೀಕರಿಸಿ ಮಾತನಾಡಿ, ಮಹಿಳೆಯರ ಸಾಧನೆಗೆ ಸಹಕಾರ ಭಾರತಿ ಪ್ರೇರಣೆಯಾಗಿದ್ದು, ಉತ್ತಮ ವೇದಿಕೆಗಳನ್ನು ಸಹಕಾರ ಭಾರತಿ ಕಲ್ಪಿಸಿಕೊಡುತ್ತಿದೆ ಎಂದರು.

ವೇದಿಕೆಯಲ್ಲಿ ಸಹಕಾರ ಭಾರತಿ ಮಂಗಳೂರು ತಾಲೂಕು ಮಹಿಳಾ ಪ್ರಮುಖ್ ಲತಾ ಹೆಗ್ಡೆ, ಪುತ್ತೂರು ತಾಲೂಕು ಮಹಿಳಾ ಪ್ರಮುಖ್ ಮೀರಾ ಭಾಸ್ಕರ್ ರೈ, ಕಡಬ ತಾಲೂಕು ಮಹಿಳಾ ಪ್ರಮುಖ್‌ ಭಾರತಿ ದಿನೇಶ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರ ಭಾರತಿ ರಾಷ್ಟ್ರೀಯ ಗ್ರಾಹಕ ಪ್ರಕೋಷ್ಠ ಸಂಚಾಲಕರು ಭಾರತಿ ಭಟ್, ಮಂಗಳೂರು ಶ್ರೀನಿವಾಸ ಮಹಾ ವಿದ್ಯಾಲಯ ಸಂಶೋಧನಾ ಪ್ರಾಧ್ಯಾಪಕರಾದ ಡಾ| ಸುಧಾ ಕೆ. ಭಾಗವಹಿಸಿ ಸಹಕಾರ ಭಾರತೀಯ ಪರಿಚಯ, ಆಡಳಿತ ಮಂಡಳಿಯ ಜವಾಬ್ದಾರಿ ಮತ್ತು ಕರ್ತವ್ಯ ಹಾಗೂ ಮಹಿಳೆಯರ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಕಾರ ಭಾರತಿ ಬಂಟ್ವಾಳ ತಾಲೂಕು ಮಹಿಳಾ ಪ್ರಮುಖ್ ಶಾಂತಾ ಡಿ. ಚೌಟ, ಬೆಳ್ತಂಗಡಿ ತಾಲೂಕು ಪ್ರಮುಖ್ ಭಾರತಿ ಕೆ. ಕಣಿಯೂರು , ದ.ಕ ಜಿಲ್ಲಾ ಸಹಕಾರ ಭಾರತಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಸಹಕಾರ ಭಾರತಿ ಮಹಿಳಾ ಪ್ರಮುಖ್ ಸುಭದ್ರಾ ಎನ್. ರಾವ್ ಪೆರ್ಮಂಕಿ ಸ್ವಾಗತಿಸಿದರು. ಸಹ ಪ್ರಮುಖ್ ಅಮೂಲ್ಯಾ ಶೆಟ್ಟಿ ಕಟೀಲು ವಂದಿಸಿದರು. ಧನ್ಯಾ ಕುಲಾಲ್ ನಿರೂಪಿಸಿದರು.

Related posts

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ: ದೇವರಿಗೆ ಬೆಳ್ಳಿ ಕವಚ ಸಮರ್ಪಣೆ

Suddi Udaya

ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆ: ಜು.25: ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಕೆ ಎನ್ ಆಯ್ಕೆ

Suddi Udaya

ದಿಡುಪೆ: ಮರದಿಂದ ಬಿದ್ದು ವ್ಯಕ್ತಿ ಸಾವು

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ 48ನೇ ವರ್ಷದ ಭಜನಾ ಸಪ್ತಾಹ : ಧಾರ್ಮಿಕ ಸಭೆ

Suddi Udaya

ಮಾಲಾಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya
error: Content is protected !!