ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೇವಾಭಾರತಿಗೆ 21ರ ಸಂಭ್ರಮ: ಡಿ.4 ನೂತನ ಕಾರ್ಯಾಲಯ ಸೇವಾನಿಕೇತನ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ಸೇವಾಭಾರತಿಗೆ ೨೧ನೇ ವರ್ಷದ ಸಂಭ್ರಮದಲ್ಲಿದ್ದು ಸಂಸ್ಥೆಯ ನೂತನ ಕಟ್ಟಡ ನಿರ್ಮಾಣ ಕಾರ್ಯ ಸುಮಾರು ೮ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಎಂಆರ್‌ಪಿಎಲ್‌ನ ಸಿಎಸ್‌ಆರ್ ಅಡಿಯಲ್ಲಿ ನಿರ್ಮಾಣಗೊಂಡ ಸೇವಾಭಾರತಿಯ ಪ್ರಧಾನ ಕಾರ್ಯಾಲಯ ಸೇವಾನಿಕೇತನ ಉದ್ಘಾಟನಾ ಸಮಾರಂಭ ಡಿ.4 ರಂದು ಕನ್ಯಾಡಿಯ ಸೇವಾನಿಕೇತನದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ ಸೇವಾಧಾಮದ ಸಂಸ್ಥಾಪಕ ಕೆ. ವಿನಾಯಕ ರಾವ್ ತಿಳಿಸಿದರು.

ಅವರು ಧರ್ಮಸ್ಥಳದ ಕನ್ಯಾಡಿ || ಸೇವಾನಿಕೇತನದಲ್ಲಿ ಡಿ.2 ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆರ್ ಎಸ್ ಎಸ್ ಸಹ ಸರಕಾರ್ಯವಾಹ ಮುಕುಂದ್ ಸಿ.ಆರ್. ಉದ್ಘಾಟನಾ ಕಾರ್ಯಕ್ರಮ ನೆರವೇರಿಸುವರು.ಸೇವಾ ಭಾರತಿಯ ಅಧ್ಯಕ್ಷೆ ಸ್ವರ್ಣಗೌರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ನ ಪ್ರಾಂತ ಸಹಸಯೋಜಕ ಸುಬ್ರಾಯ ನಂದೋಡಿ ವಾರ್ಷಿಕ ವರದಿ,ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪೋಸ್ಟರ್ ಬಿಡುಗಡೆಗೊಳಿಸುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಎಂಎಲ್ ಸಿಗಳಾದ ಪ್ರತಾಪಸಿಂಹ ನಾಯಕ್, ಡಾ.ಧನಂಜಯ ಸರ್ಜಿ, ಎಂ ಆರ್ ಪಿ ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ಪುತ್ತೂರು ಜಿಲ್ಲೆ ಜಿಲ್ಲಾ ಸಂಘಚಾಲಕ ಕೆ.ವಿನಯ ಚಂದ್ರ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಬೆಂಗಳೂರು ಇದರ ಎಂಡಿ ರಾಜೇಶ್ ಫಡಕೆ, ಉಜಿರೆ ಬೆನಕ ಹೆಲ್ತ್ ಸೆಂಟರ್ ಇದರ ಎಂಡಿ ಡಾ. ಗೋಪಾಲಕೃಷ್ಣ ಕೆ., ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ಅಧ್ಯಕ್ಷ ಕೆ. ಕೃಷ್ಣ ಭಟ್ , ಮುಂಬೈಯ ಕ್ಯಾಪ್ರಿಕಾರ್ನ್ ಅಗ್ರಿಫಾರ್ಮರ್ಸ್ ಡೆವಲಪರ್ಸ್ ನ ಚೀಫ್ ಅಕೌಂಟೆAಟ್ ಕೆ. ವಿಷ್ಣುಮೂರ್ತಿ ರಾವ್, ಸೇವಾಧಾಮದ ಸಂಚಾಲಕ ಕೆ.ಪುರಂದರ ರಾವ್, ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇದರ ಅಧ್ಯಕ್ಷೆ ಮಮತಾ, ಸೇವಾಭಾರತಿ ಆರೋಗ್ಯ ಯೋಜನೆಯ ಸಂಚಾಲಕ ಅಖಿಲೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.

ಸೇವಾ ಭಾರತಿಯ ಅಧ್ಯಕ್ಷೆ ಸ್ವರ್ಣಗೌರಿ, ಟ್ರಸ್ಟಿ ಜಯರಾಜ್ ಸಾಲಿಯಾನ್ ಹಾಗೂ ಸುದರ್ಶನ್ ಉಪಸ್ಥಿತರಿದ್ದರು.

Related posts

ಬಳಂಜ: ನಾರಾವಿ ವಲಯ ಕ್ರೀಡಾ ಕೂಟ ಉದ್ಘಾಟನೆ

Suddi Udaya

ಕೊಯ್ಯೂರು: ಬಜಿಲ ಶ್ರೀ ವಿಷ್ಣುಮೂರ್ತಿ ಪುರುಷರ ಬಳಗದಿಂದ ಪುರುಷ ಪೂಜೆ, ಸನ್ಮಾನ

Suddi Udaya

ಶಿಶಿರ್ ಜಯವಿಕ್ರಮ್ ಗೆ ವಾಲಿಬಾಲ್ ವಲಯದ “ಸರ್ವಾಂಗೀಣ ಆಟಗಾರ “ಪ್ರಶಸ್ತಿ

Suddi Udaya

ವಿಶ್ವ ರಜೋನಿವೃತ್ತಿ (ಮೆನೋಪಾಸ್) ದಿನಾಚರಣೆಯ ಅಂಗವಾಗಿ ಬೆನಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

Suddi Udaya

ರಾಜ್ಯದ ಜನತೆಗೆ ಸಮಸ್ಯೆಗಳು ಎದುರಾಗದ್ದಂತೆ ಆಡಳಿತ ನಡೆಸಬೇಕು: ಕುಶಾಲಪ್ಪ ಗೌಡ ಪೂವಾಜೆ

Suddi Udaya

ಕಬಡ್ಡಿ ಪಂದ್ಯಾಟ: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya
error: Content is protected !!