25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್‌.ಡಿ‌.ಎಂ. ನ್ಯಾಚುರೋಪಥಿ ಮತ್ತು ಯೋಗ ಸೈನ್ಸ್‌ ಕಾಲೇಜಿನಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಉಜಿರೆ: ಎಸ್‌.ಡಿ‌.ಎಂ. ನ್ಯಾಚುರೋಪಥಿ ಮತ್ತು ಯೋಗ ಸೈನ್ಸ್‌ ಕಾಲೇಜಿನಲ್ಲಿ ವಿಶ್ವ ಏಡ್ಸ್‌ ದಿನಾಚರಣೆಯ ಅಂಗವಾಗಿ ವಿಶೇಷವಾಗಿ ಜಾಗೃತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನೀತಾ MBBS, MD ಅವರು ಆಗಮಿಸಿದರು. ಸಮಾರಂಭಕ್ಕೆ ಅಧ್ಯಕ್ಷತೆಯನ್ನು ಎಸ್‌.ಡಿ‌.ಎಂ. ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಶೆಟ್ಟಿ ವಹಿಸಿದರು.

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ವಿಶ್ವ ಏಡ್ಸ್‌ ದಿನದ ಸಂಕೇತವಾದ ಕೆಂಪು ರಿಬನ್‌ ಧರಿಸಿ, ರೋಗಿ–ಸ್ನೇಹಿ ಸಮಾಜ ನಿರ್ಮಾಣದ ಬದ್ಧತೆಯನ್ನು ತೋರಿಸಿದರು. ಅವರು ಮಾನವ ಸರಪಳಿ ರೂಪಿಸಿ, ಏಡ್ಸ್‌ ಜಾಗೃತಿಯ ಸಂಕೇತವಾದ ಬೋ ಆಕಾರದ ರಚನೆಯನ್ನು ಕೂಡ ಮಾಡಿದರು. ಈ ವಿಶೇಷ ಆಕೃತಿ ಕಾರ್ಯಕ್ರಮಕ್ಕೆ ಮತ್ತಷ್ಟು ಸಂದೇಶಾತ್ಮಕತೆ ಮತ್ತು ಗಂಭೀರತೆಯನ್ನು ನೀಡಿತು.

ಏಡ್ಸ್‌ ಕುರಿತು ಅರಿವು ಮೂಡಿಸಲು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕವು ಪ್ರೇಕ್ಷಕರ ಮನ ಸೆಳೆಯಿತು. ಸಮಾಜದಲ್ಲಿ ಏಡ್ಸ್‌ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ ಜಾಗೃತಿ ಹರಡುವಲ್ಲಿ ಈ ನಾಟಕ ಪರಿಣಾಮಕಾರಿ ಸಂದೇಶ ನೀಡಿತು.

ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿ ಡಾ. ಶಾಲ್ಮಲಿ ಸುನಿಲ್ ಸ್ವಾಗತಿಸಿದರು. ಗುರುಚರಣ್ ಧನ್ಯವಾದವಿತ್ತರು. ಸಂಸ್ಕೃತಿ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ

Suddi Udaya

ಗರ್ಡಾಡಿ ಯುವಕ ಮಂಡಲ ವತಿಯಿಂದ 34ನೇ ವರ್ಷದ ಮೊಸರು ಕುಡಿಕೆ ಉತ್ಸವ: ಅಧ್ಯಕ್ಷರಾಗಿ ಹರೀಶ್ ಪೂಜಾರಿ ಬರಮೇಲು

Suddi Udaya

ಕಲ್ಮಂಜ ಗ್ರಾಮದ ಮಿಯ ನಿವಾಸಿ ಉಜಿರೆ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ: ರೂ.8.42 ಲಕ್ಷ ನಗದು ಸಹಿತ ಚಿನ್ನಾಭರಣ ವಶ: ನಾಲ್ಕು ವರ್ಷಗಳ ಹಿಂದೆ ಮನೆಯವರನ್ನು ಕಟ್ಟಿ ಹಾಕಿ ನಡೆದ ದರೋಡೆ

Suddi Udaya

ಆರಂಬೋಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕ ಉದ್ಘಾಟನೆ

Suddi Udaya

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಬೆಳ್ತಂಗಡಿ ಕುಂಬಾರರ ಸೇವಾ ಸಂಘದಿಂದ ರಾಜೀವ್ ಬಿ.ಎಚ್ ರವರಿಗೆ “ಕಲಾರತ್ನ” ಪ್ರಶಸ್ತಿ

Suddi Udaya
error: Content is protected !!