ಬೆಳ್ತಂಗಡಿ: ಸಹಕಾರ, ಕಂಬಳ, ಕೃಷಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಕರಾವಳಿಯ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್‌ರಿಗೆ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಸಹಕಾರಿ ರಂಗದ ಅಪಾರ ಸೇವೆಯನ್ನು ಗುರುತಿಸಿ ಪ್ರಶ್ತಸಿ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತಗೊಂಡ ಅವರಿಗೆ ನಾಗರಿಕ ಪೌರ ಸನ್ಮಾನದ ಭಾಸ್ಕರಾಭಿನಂದನ ಕಾರ್ಯಕ್ರಮ ಡಿ.6 ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ಪುರಭವನ (ಟೌನ್ ಹಾಲ್)ನಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶಾಸಕ ಹರೀಶ್ ಪೂಂಜರವರು ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಉದ್ಯಮಿ ಯೋಗೀಶ್ ಪೂಜಾರಿ ಕಡ್ತಿಲ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಮುಖರಾದ ವಿಷ್ಣು ಸಂಪಿಗೆತ್ತಾಯ, ಸಂತೋಷ್ ಕುಮಾರ್ ಹೆಗ್ಡೆ ತೆಂಕಕಾರಂದೂರು, ಶ್ರೀನಿವಾಸ್ ಕಾರಂದೂರು, ಸಂತೋಷ್ ಪಿ ಕೋಟ್ಯಾನ್ ಬಳಂಜ, ಹೇಮಂತ್ ಕಟ್ಟೆ, ವಿದ್ಯಾನಂದ ಕಟ್ಟೆ, ಶರತ್ ಕುಮಾರ್ ತೆಂಕಕಾರಂದೂರು, ಪ್ರದೀಪ್ ಕಾಪಿನಡ್ಕ ಉಪಸ್ಥಿತರಿದ್ದರು.











