ಉಜಿರೆ: ವಿಶ್ವ ಏಡ್ಸ್ ದಿನದ ಅಂಗವಾಗಿ, ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆ ಮತ್ತು ಎಸ್‌ಡಿಎಂ ಕಾಲೇಜು ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಅಂಡ್ ಹಾಸ್ಪಿಟಲ್, ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ‘Overcoming Disruption: Transforming the AIDS Response’ ಎಂಬ ವಿಷಯಾಧಾರಿತ ಜಾಗೃತಿ ಕಾರ್ಯಕ್ರಮವನ್ನು ಡಿ.01 ರಂದು ನಡೆಯಿತು.
ಎಸ್‌ಡಿಎಂ ಕಾಲೇಜು ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಮತ್ತು ಹಾಸ್ಪಿಟಲ್‌ನ ಲೆಕ್ಚರರ್-ಕಮ್ ಮೆಡಿಕಲ್ ಆಫೀಸರ್ ಡಾ. ಯೋಹಿ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಾಗೃತಿ ಉಪನ್ಯಾಸದ ನಂತರ ನ್ಯಾಚುರೋಪತಿ ವಿದ್ಯಾರ್ಥಿಗಳು ಏಡ್ಸ್ ಜಾಗೃತಿಯ ಕುರಿತ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಿಂದ ಎಸ್‌ಡಿಎಮ್‌ಐಟಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದರು. ಕಾರ್ಯಕ್ರಮವನ್ನು ಡಾ. ರಜತ. ಪಿ. ಶೆಟ್ಟಿ, ಗ್ರಂಥಪಾಲಕರು, ಎಸ್‌ಡಿಎಮ್‌ಐಟಿ, ಉಜಿರೆ ಅವರು ಸಂಯೋಜಿಸಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಕು. ರಾಶಿ ಶೆಟ್ಟಿ ಅವರು ನಿರ್ವಹಿಸಿದರು.











