ಕೊಲ್ಲಿ: ಇಲ್ಲಿಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ದುರ್ಗಾ ಬ್ಯೂಟಿ ಪಾರ್ಲರ್ ಡಿ.5 ರಂದು ಶುಭಾರಂಭಗೊಂಡಿತು.
ಮಾಲಕರ ಪೋಷಕರಾದ ಅಕ್ಕಮ್ಮ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ಕಟ್ಟಡದ ಮಾಲಕರಾದ ಗೋಪಾಲ ಪೂಜಾರಿ ಮತ್ತು ಶ್ರೀಮತಿ ಶಾಲಿನಿ, ಮಾಲಕರ ತಂದೆ ಜನಾರ್ಧನ ಗೌಡ ಮತ್ತು ತಾಯಿ ಶ್ರೀಮತಿ ಪುಷ್ಪಾವತಿ, ಪ್ರೀತೇಶ್, ಸ್ವಾತಿ, ಶಾರದಾ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬ್ಯೂಟಿ ಪಾರ್ಲರ್‌ನ ಮಾಲಕಿ ದೀಕ್ಷಾ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.











