37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳದಲ್ಲಿ ನೂತನ ಶಿಲಾಮಯ ಧ್ವಜಸ್ತಂಭಕ್ಕೆ ಭವ್ಯ ಸ್ವಾಗತ

ಧರ್ಮಸ್ಥಳ: ಪಜಿರಡ್ಕದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಡಿ.5ರಂದು ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಶಿಲಾಮಯ ಧ್ವಜಸ್ತಂಭ ಡಿ.4 ರಂದು ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದಾಗ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ, ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ತರಲಾಯಿತು.

ಮುಖ್ಯ ಪ್ರವೇಶದ್ವಾರದ ಬಳಿ ದೇವಸ್ಥಾನದ ಪಾರುಪತ್ಯಗಾರರಾದ ಲಕ್ಷ್ಮೀ ನಾರಾಯಣ ರಾವ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ಪುರಂದರ ಭಟ್, ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ, ದೇವಳ ನೌಕರರು ಹಾಗೂ ಊರಿನ ನಾಗರಿಕರು ಭವ್ಯ ಸ್ವಾಗತ ಕೋರಿದರು.


ಶಾಸಕ ಹರೀಶ್ ಪೂಂಜ ಮತ್ತು ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.
ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ, ದೇವಸ್ಥಾನದ ಪ್ರಧಾನ ಅರ್ಚಕರುಗಳು ವಿಶೇಷ ಪ್ರಾರ್ಥನೆ ಮಾಡಿ, ಫಲಪುಷ್ಪ ಹಾಗೂ ಹಾರವನ್ನು ಸಮರ್ಪಿಸಿದರು.
ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಶಿಲಾಮಯ ಧ್ವಜಸ್ತಂಭದ ಪ್ರತಿಷ್ಠಾಪನಾ ಕಾರ್ಯ ಯಶಸ್ವಿಯಾಗಲಿ  ಎಂದು ಪೂಜ್ಯ ಹೆಗ್ಗಡೆಯವರ ಸಂದೇಶದೊಂದಿಗೆ ಮುಂದೆ ಪಜಿರಡ್ಕ ಕ್ಷೇತ್ರವು ಅತಿಶಯ ಕ್ಷೇತ್ರವಾಗಿ ಬೆಳೆಯಲಿ ಹಾಗೂ ಬೆಳಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಭಕ್ತರೆಲ್ಲರೂ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಶಿಲಾಮಯ ಧ್ವಜಸ್ತಂಭ ಪಜಿರಡ್ಕ ದೇವಸ್ಥಾನದ ಕಡೆಗೆ ಯಾನ ಮುಂದುವರಿಸಿತು.

Related posts

ಏಪ್ರಿಲ್ 29: ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ : ಶ್ರೀ ಗುರುದೇವ ಕಾಲೇಜಿನ ಕ್ರೀಡಾಕೂಟ ಉದ್ಘಾಟನೆ

Suddi Udaya

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಹಾಸಭೆ

Suddi Udaya

ದೆಹಲಿಯಲ್ಲಿ ನಿರ್ಮಾಣಗೊಳ್ಳಲಿರುವ ಯೋಧರ ಉದ್ಯಾನವನಕ್ಕೆ ಬೆಳ್ತಂಗಡಿಯಿಂದ ಮಣ್ಣು ಸಮರ್ಪಣೆ

Suddi Udaya

ಉಜಿರೆ ಧ.ಮಂ. ಕಾಲೇಜಿನಲ್ಲಿ ಬದುಕು ಮತ್ತು ದುರದೃಷ್ಟಿತ್ವದ ಪರಿಕಲ್ಪನೆಯಲ್ಲಿ ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ ಬಂಗೇರ ಕಾಶಿಪಟ್ಣ, ಉಪಾಧ್ಯಕ್ಷರಾಗಿ ಶ್ರೀಪತಿ ಉಪಾಧ್ಯಯ ಆಯ್ಕೆ

Suddi Udaya
error: Content is protected !!