September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಶ್ರೀ ಗುರುದೇವ ಕಾಲೇಜಿನ ಕ್ರೀಡಾಕೂಟ ಉದ್ಘಾಟನೆ

ಬೆಳ್ತಂಗಡಿ : ‘ ಕ್ರೀಡಾಕೂಟ ಆರೋಗ್ಯ ವರ್ಧಕ. ಕ್ರೀಡೆಯನ್ನು ಬದುಕಿನ ಭಾಗವಾಗಿಸಿಕೊಂಡರೆ ನಮ್ಮ ಬದುಕಿನ ಕೊನೆಯವರೆಗೆ ಆರೋಗ್ಯ ನೀಡುತ್ತದೆ’ ಎಂದು ವಕೀಲ ಸುದರ್ಶನ್ ರಾವ್ ಗಜಂತೋಡಿ ಹೇಳಿದರು.

ಅವರು ನ.28ರಂದು ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.

‘ಯಾವುದೇ ಕ್ರೀಡೆಯನ್ನು ನಿರ್ಲಕ್ಷಿಸಬಾರದು. ಕೇವಲ ಕ್ರಿಕೆಟ್ ಮಾತ್ರ ಅಲ್ಲದೆ ಬೇರೆ ಎಲ್ಲಾ ಕ್ರೀಡೆಗಳ ಜೊತೆ ಭಾಗವಹಿಸಬೇಕು’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ‘ ಕ್ರೀಡೆಯಲ್ಲಿ ಭಾಗವಹಿಸುವ ಮನಸ್ಸನ್ನು ಎಲ್ಲಾ ವಿದ್ಯಾರ್ಥಿಗಳು ಹೊಂದಬೇಕು. ಕ್ರೀಡಾ ಸ್ಫೂರ್ತಿಯಿಂದ ಪ್ರೋತ್ಸಾಹಿಸಬೇಕು’ ಎಂದರು.

ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿರಾಮ್ ಶೆಟ್ಟಿ ಇದ್ದರು.

ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕಾವ್ಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಪ್ರಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಮೀವುಲ್ಲಾ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಪರಿಚಯಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ಹಾಗೂ ಗಣಕ ವಿಜ್ಞಾನ ಉಪನ್ಯಾಸಕಿ ಶುಭಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Related posts

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕ – ಬಾಲಕಿಯರ ತಂಡ ವಾಲಿಬಾಲ್ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ ಪ್ರಕರಣ: ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲು

Suddi Udaya

‘ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪುರಸ್ಕಾರ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಅವರಿಗೆ ಸನ್ಮಾನ

Suddi Udaya

ಎಂಡೋಸಲ್ಫಾನ್ ವಿರುದ್ಧ ಹೋರಾಟಗಾರರಾದ ಕೊಕ್ಕಡದ ಶ್ರೀಧರ ಗೌಡ ಕೆಂಗುಡೇಲುರವರಿಗೆ “ವಿಕ ಹಿರೋಸ್” ಪ್ರಶಸ್ತಿ

Suddi Udaya

ಧರ್ಮಸ್ಥಳ ಗಣಪತಿ ದೇವಸ್ಥಾನದ ವ್ಯವಸ್ಥಾಪಕರಾಗಿದ್ದ ಎಂ. ಕೃಷ್ಣ ಭಟ್ ನಿಧನ

Suddi Udaya

ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!