ಕೊಲ್ಲಿ: ಗೋಪಾಲ ಪೂಜಾರಿ ಕೊಲ್ಲಿ ಮಾಲಕತ್ವದ ಶ್ರೀ ದುರ್ಗಾ ಕಾಂಪ್ಲೆಕ್ಸ್ ಇದರ ಉದ್ಘಾಟನಾ ಸಮಾರಂಭವು ಹಾಗೂ ಶ್ರೀ ದುರ್ಗಾ ಜನರಲ್ ಸ್ಟೋರ್‌ನ ಶುಭಾರಂಭವು ಡಿ.5ರಂದು ಜರುಗಿತು.
ಕಾಂಪ್ಲೆಕ್ಸ್‌ನ ಉದ್ಘಾಟನೆಯನ್ನು ಉಜಿರೆ ಸಂಧ್ಯಾ ಟ್ರೇಡರ್‍ಸ್ ಮಾಲಕ ರಾಜೇಶ್ ಪೈ ದೀಪ ಬೆಳಗಿಸಿ ನೆರವೇರಿಸಿದರು. ತಾ.ಪಂ. ಮಾಜಿ ಅಧ್ಯಕ್ಷ ಮುಕುಂದ ಸುವರ್ಣ, ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕಾಂಜಾನು, ಸದಸ್ಯ ಕೃಷ್ಣಪ್ಪ ಪೂಜಾರಿ, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಕೇಶವ ಫಡಕೆ, ಲಿಂಗಪ್ಪ ಪೂಜಾರಿ ಪಾಲ್ತ್ಯಾರು ಉಪಸ್ಥಿತರಿದ್ದು, ಶುಭ ಕೋರಿದರು.

ಈ ಸಂದರ್ಭದಲ್ಲಿ ಧರ್ಣಪ್ಪ ಶೆಟ್ಟಿ ಹಾಗೂ ಅರುಣ ಡಿ. ಶೆಟ್ಟಿ ಕೊಲ್ಲಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಗೋಪಾಲ ಪೂಜಾರಿ ಸ್ವಾಗತಿಸಿ, ವಿನಯಚಂದ್ರ ನಡುಬೈಲು ಕಾರ್ಯಕ್ರಮ ನಿರೂಪಿಸಿ, ಶ್ರೀಧರ ಕೆದ್ದು ವಂದಿಸಿದರು. ಶುಭಾರಂಭಕ್ಕೆ ಆಗಮಿಸಿದ ಗಣ್ಯರನ್ನು ಮಾಲಕರಾದ ಶ್ರೀಮತಿ ಶಾಲಿನಿ ಗೋಪಾಲ ಪೂಜಾರಿ ಮತ್ತು ಮಕ್ಕಳು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.












