September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಗ್ರಾಮಸಭೆ

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಗ್ರಾಮ ಸಭೆಯು ಅಧ್ಯಕ್ಷೆ ಜಯಂತಿ ಎಂ.ಕೆ ರವರ ಅಧ್ಯಕ್ಷತೆಯಲ್ಲಿ ಭಾರತ್ ಮಾತಾ ಸಭಾಭವನದಲ್ಲಿ ನಡೆಯಿತು.

ಮಕ್ಕಳ ಗ್ರಾಮ ಸಭೆಯ ಪೂರ್ವಾಭಾವಿಯಾಗಿ ಮಕ್ಕಳಿಗೆ ಚಿತ್ರಕಲೆ, ದೇಶಭಕ್ತಿ ಗೀತೆ ಸ್ಪರ್ಧೆ ಆಯೋಜಿಸಿದ್ದು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ. ಪ್ರಾಸ್ತಾವಿಕವಾಗಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳು ಹಾಗೂ ಮಾನವ ಹಕ್ಕುಗಳ ಬಗ್ಗೆ ಉಷಾ ಕಾಮತ್ ಇವರು ಮಾಹಿತಿ ನೀಡಿದರು. ಲಲಿತಾ ಇವರು ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಕುರಿತು ಮಾಹಿತಿ ನೀಡಿದರು.

ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ ಕರ್ನೋಡಿ ಶಾಲಾ ವಿದ್ಯಾರ್ಥಿ ಮಹಮ್ಮದ್ ಮುರ್ಷಿದ್ ಇವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಗ್ರಾಮಸಭೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಬೇಡಿಕೆಗಳನ್ನು ಸ್ವೀಕರಿಸಲಾಯಿತು.

ಗ್ರಾ.ಪಂ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ, ಸದಸ್ಯರಾದ ಪ್ರಸಾದ್ ಶೆಟ್ಟಿ, ರೇವತಿ, ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ., ಮುಖ್ಯ ಅತಿಥಿಗಳಾಗಿ ಆರ್ಥಿಕ ಸಮಾಲೋಚನಕಾರರಾದ ಉಷಾ ಕಾಮತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಲಲಿತಾ, ಶಾಲಾ ಶಿಕ್ಷಕರು, ಪಂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖವಾಗಿ ಸಭೆಯ ಕೇಂದ್ರ ಬಿಂದುಗಳಾದ ಮಕ್ಕಳು ಉಪಸ್ಥಿತರಿದ್ದರು.


ಪಂಚಾಯತ್ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಬಿಲ್ ಕಲೆಕ್ಟರ್ ಮೋಹನ್ ವಂದಿಸಿದರು.

Related posts

ವೇಣೂರು: ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ-ನಿಟ್ಟಡೆ ವತಿಯಿಂದ ಗುರು ನಮನ ಕಾರ್ಯಕ್ರಮ

Suddi Udaya

ಬಂದಾರು: ಮೈರೊಳ್ತಡ್ಕ ವಾರ್ಡ್ ನ ನಿನ್ನಿಕಲ್ಲು- ಪುಯಿಲ ಕಾಂಕ್ರಿಟ್ ರಸ್ತೆ ಉದ್ಘಾಟನೆ

Suddi Udaya

ಆಟಿ ಅಮಾವಾಸ್ಯೆಯ ಪ್ರಯುಕ್ತ ಮುಗುಳಿ ಸವಣಾಲು ಮತ್ತು ಶ್ರವಣಗುಂಡ ಅತಿಶಯ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ

Suddi Udaya

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಎಂ. ಗಂಗಾಧರ ಮಿತ್ತಮಾರ್, ಪ್ರಧಾನ ಸಂಚಾಲಕರಾಗಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೇಮಕ

Suddi Udaya

ಮೇ .17, 18, 19: ಬೆಳ್ತಂಗಡಿ ಸ್ಪಂದನ ಪಾಲಿಕ್ಲಿನಿಕ್ & ಲ್ಯಾಬೋರೇಟರಿ ಹಾಗೂ ಸ್ಪಂದನ ಕ್ಲಿನಿಕ್ ನಲ್ಲಿ ಉಚಿತ ಹಾಗೂ ವಿಶೇಷ ರಿಯಾಯಿತಿ

Suddi Udaya

ಧರ್ಮಸ್ಥಳ ಶತಾಯಿಷಿ ಮತದಾರರಿಗೆ ಚುನಾವಣಾ ಆಯೋಗದಿಂದ ಗೌರವಪೂರ್ವಕ ಸನ್ಮಾನ ಹಾಗೂ ಪ್ರಮಾಣ ಪತ್ರ ವಿತರಣೆ

Suddi Udaya
error: Content is protected !!