25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರ್ಲ-ಬೈಪಾಡಿ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಎಂ. ಸೇಸಮ್ಮರವರಿಗೆ ಗೌರವಾರ್ಪಣೆ

ಬಂದಾರು: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಗೌರವಾರ್ಪಣಾ ಸಮಿತಿ, ಪೆರ್ಲ ಬೈಪಾಡಿ, ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರ, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘಗಳು, ಅಂಗನವಾಡಿ ಕೇಂದ್ರ ಪೆರ್ಲ-ಬೈಪಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಊರವರ ಆಶ್ರಯದಲ್ಲಿ ಬಂದಾರು ಪೆರ್ಲಬೈಪಾಡಿ ಅಂಗನವಾಡಿಯಲ್ಲಿ ಸುಮಾರು 30ವರ್ಷ ಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿದ ಎಂ ಸೇಸಮ್ಮ ರವರಿಗೆ ಡಿ. 06 ರಂದು ಅಂಗನವಾಡಿ ಕೇಂದ್ರ ಪೆರ್ಲ ಬೈಪಾಡಿ ವಠಾರದಲ್ಲಿ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಬಾಲವಿಕಾಸ ಸಮಿತಿ ಅಧ್ಯಕ್ಷೆ ಹೇಮಾವತಿ ದೀಪ ಬೆಳಗಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಗೌಡ, ಹರೀಶ್ ಗೌಡ ಪರಪ್ಪಜೆ, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತಾ ಉದಯ ಕುರುಡoಗೆ, ಶ್ರೀಮತಿ ಭಾರತಿ,ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ, ಆಶಾ ಕಾರ್ಯಕರ್ತೆ ರಾಜೀವಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾಪ್ರತಿನಿಧಿ ಶ್ರೀಮತಿ ಪ್ರಮೀಳಾ ಉಪಸ್ಥಿತರಿದ್ದರು. ರೇಷ್ಮಾ, ಚೇತನ, ವಾಣಿ ವಿ ಇವರುಗಳು ಪ್ರಾರ್ಥನೆಗೈದರು. ಬಂದಾರು ಶಾಲೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಶಾರದಾ ವೈ ಸ್ವಾಗತಿಸಿ, ವಿಠಲ ಗೌಡ ಒಳಗುಡ್ಡೆ ನಿರೂಪಣೆಗೈದು, ಪೆರ್ಲ -ಬೈಪಾಡಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಾಣಿ. ವಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಶೀನಪ್ಪ ಗೌಡ ಪರ್ಲಾರು ಮತ್ತು ಬಾಲಕೃಷ್ಣ ಗೌಡ ಪಾರೋಟ್ಟು ಇವರುಗಳು ಬೋಜನದ ವ್ಯವಸ್ಥೆ ಮಾಡಿದರು. ಕಾರ್ಯಕ್ರಮದ ಯಶಸ್ವಿಗೆ ಬಾಲವಿಕಾಸ ಸಮಿತಿ, ಪೋಷಕ ವೃಂದ ಊರದಾನಿಗಳು, ಸಂಘ ಸಂಸ್ಥೆಗಳ ಸಹಕರಿಸಿದರು.

Related posts

ಭಗವದ್ಗೀತಾ ಭಾಷಣ ಸ್ಪರ್ಧೆ: ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಹಂಸಿನಿ ಭಿಡೆ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ದ.ಕ. ಎಸ್ಪಿ, ಕಮೀಷನರ್ ವರ್ಗಾವಣೆ-ಪವರ್‌’ಫುಲ್ ಅಧಿಕಾರಿಗಳ ಎಂಟ್ರಿ ಎಸ್ಪಿಯಾಗಿ ಅರುಣ್ ಕುಮಾ‌ರ್, ಕಮೀಷನ‌ರ್ ಆಗಿ ಸುಧೀರ್ ಕುಮಾ‌ರ್ ರೆಡ್ಡಿ

Suddi Udaya

ಜ.4: ಸುಲ್ಕೇರಿ ನೂತನ ಶ್ರೀ ನೇಮಿನಾಥ ಸಭಾಭವನ ಉದ್ಘಾಟನೆ

Suddi Udaya

ಮಚ್ಚಿನ :ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಗೆ ರೂ.4 ಕೋಟಿ ಅನುದಾನ ಮಂಜೂರು

Suddi Udaya

ಬೆಳ್ತಂಗಡಿ ತ್ರಿ ಸ್ಟಾರ್ ವೈನ್ಸ್ ಶಾಪ್ ಮತ್ತು ಉಜಿರೆಯ ಮೊಬೈಲ್ ಶಾಪ್ ಕಳ್ಳತನ ಪ್ರಕರಣ: ಅಪ್ರಾಪ್ತ ಬಾಲಕ ಸೇರಿ ಇಬ್ಬರು ಕುಂದಾಪುರದಲ್ಲಿ ವಶಕ್ಕೆ

Suddi Udaya

ರಾಜ್ಯ ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶಕ್ಕೆ ಬೆಳ್ತಂಗಡಿಯಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸುವಿಕೆ: ರಕ್ಷಿತ್ ಶಿವರಾಮ್

Suddi Udaya
error: Content is protected !!