ಬೆಳ್ತಂಗಡಿ: ವೇಣೂರು ಸೊಸೈಟಿ ಅಧ್ಯಕ್ಷ, ಉದ್ಯಮಿ,ಕಲಾವಿದ, ಕಲಾ ಪೋಷಕ ಸುಂದರ ಹೆಗ್ಡೆ ಬಿಇ ಇವರಿಗೆ
ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಜೆಸಿ ಉತ್ಸವ ಕಾರ್ಯಕ್ರಮದಲ್ಲಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರೋಹಿಣಿ, ತಹಶಿಲ್ದಾರ್ ಪೃಥ್ವಿ ಸಾನಿಕಮ್, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಎಸ್.ಡಿ.ಎಂ ಪೂರನ್ ವರ್ಮ,
ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷೆ ಆಶಾ ಪ್ರಶಾಂತ್ ಪ್ರಮಯಖರಾದ ರಂಜಿತ್ ಹೆಚ್.ಡಿ, ಸಂತೋಷ್ ಕುಮಾರ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಹಲವಾರು ವರ್ಷಗಳಿಂದ ತಾಲೂಕಿನ ಸಾಧಕರನ್ನು ಜೆಸಿಐ ಸಂಸ್ಥೆ ಗುರುತಿಸಿ ಪ್ರಶಸ್ತಿ ನೀಡುತ್ತಾ ಬರುತ್ತಿದೆ.











