37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.13: ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದ ಬಲಿ ಉತ್ಸವ

ಗುರುವಾಯನಕೆರೆ: ಕುವೆಟ್ಟು ಗ್ರಾಮ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನಲ್ಲಿ ದೊಂಪದಬಲಿ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವವು ಡಿ.13 ರಂದು ಸಂಜೆ 6ರಿಂದ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಶಿವಾಜಿರಾವ್ ಗದ್ದೆಮನೆ ಅವರು ತಿಳಿಸಿದ್ದಾರೆ.


ಅಂದು ಸಂಜೆ 5ಕ್ಕೆ ಪಾಡ್ಯಾರುಬೀಡು ಮನೆಯಿಂದ ಭವ್ಯವಾದ ಮೆರವಣಿಗೆಯಲ್ಲಿ ದೈವದ ಭಂಡಾರವನ್ನು ಪಿಲಿಚಾಮುಂಡಿ ಕಲ್ಲಿಗೆ ತರಲಾಗುವುದು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಯ ಬಳಿಕ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದಬಲಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಸಮಿತಿಯ ಗೌರವಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಅಜ್ರಿ ಅನುವಂಶೀಯ ಆಡಳಿತದಾರರು ಪಾಡ್ಯಾರುಬೀಡು, ಶ್ರೀನಿವಾಸ ಅಸ್ರಣ್ಣರು ಮೂಡುಮನೆ, ಎ. ರಾಜಶೇಖರ ಶೆಟ್ಟಿ ಚಾವಡಿ ನಾಯಕರು ಅಳದಂಗಡಿ ಅರಮನೆ, ವಿತೇಶ್ ಬಂಗೇರ ಪ್ರಧಾನ ಕಾರ್ಯದರ್ಶಿ, ದೀಕ್ಷಿತ್ ವರಕಬೆ ಕಾರ್ಯದರ್ಶಿ, ನಾರಾಯಣ ಆಚಾರ್ಯ ಬರಾಯ ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರು ದೊಂಪದಬಲಿ ಉತ್ಸವ ಸಮಿತಿ ಮತ್ತು ಊರಿನ ನಾಗರಿಕರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಅನ್ನಸಂತರ್ಪಣೆ ಇರುವುದರಿಂದ ಭಕ್ತರು ಅಕ್ಕಿ, ತೆಂಗಿನಕಾಯಿ, ತರಕಾರಿಗಳನ್ನು ನೀಡಬಹುದು. ಪ್ರತಿಮನೆಯವರು ಕನಿಷ್ಠ2 ತೆಂಗಿನಕಾಯಿ, 2 ಎಳನೀರು, 1ಸೇರು ಅಕ್ಕಿ, ಎಳ್ಳೆಣ್ಣೆ ಹಾಗೂ ಹೆಚ್ಚಿನ ಧನ ಸಹಾಯವನ್ನು ನೀಡಿ, ಸಹಕರಿಸುವಂತೆ ವಿನಂತಿಸಲಾಗಿದೆ.

Related posts

ಬೆಳ್ತಂಗಡಿ ಮಾದರಿ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ

Suddi Udaya

ಹುಣ್ಸೆಕಟ್ಟೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ 26ನೇ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಧರ್ಮ ಸಂರಕ್ಷಣ ರಥಯಾತ್ರೆಯ ಆಗಮನ, ಉಜಿರೆಯಲ್ಲಿ ಅದ್ದೂರಿ ಸ್ವಾಗತ

Suddi Udaya

ಭಾರೀ ಮಳೆ: ಮುಂಡೂರುನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ: ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ; ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ

Suddi Udaya

ಸುದ್ದಿ ಉದಯ ವಾರ ಪತ್ರಿಕೆ ದೀಪಾವಳಿ ವಿಶೇಷಾಂಕ ಹಾಗೂ ‘ಹೇ ಶಾರದೆ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಜು.13: ಉಜಿರೆಯಲ್ಲಿ ನ್ಯೂ ತ್ರಿಲೋಖ್ ನೃತ್ಯ ಸಂಸ್ಥೆ ಶುಭಾರಂಭ

Suddi Udaya
error: Content is protected !!