September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಡಿ.18: ಬೆಳ್ತಂಗಡಿ ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಭೇಟಿ : ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ- ಸೇವಾ ಯೋಜನೆಗಳ ಹಸ್ತಾಂತರ

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ 55 ವಷ೯ಗಳಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು, ಬೆಳ್ತಂಗಡಿ ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಕಾರ್ಯಕ್ರಮ ಡಿ.18 ರಂದು ಜರುಗಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಸೌಲಭ್ಯಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರೊ.ಪ್ರೊ. ಪ್ರಕಾಶ್ ಪ್ರಭು ಹೇಳಿದರು.


ಅವರು ಡಿ.8 ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿ ರೋಟರಿ ಸಂಸ್ಥೆ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆ ಯಾಗಿ ಬೆಳೆದು 78 ಸಾಧಕರನ್ನು, ಸದಸ್ಯರನ್ನಾಗಿ ಹೊಂದಿದೆ. ರೋಟರಿ ಸಹ ಸಂಸ್ಥೆಗಳಾಗಿ 4 ರೋಟರಿ ಸಮುದಾಯ ದಳಗಳು, 7 ಇಂಟರಾಕ್ಟ್ ಕ್ಲಬ್ ಹಾಗೂ ಆನ್ಸ್, ಸೇವಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿದ್ದಾರೆ.


ಬೆಳ್ತಂಗಡಿ ರೋಟರಿಯು ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಸರ ಸಂವರ್ಧನಾ ಅಭಿಯಾನ, ಆರೋಗ್ಯ ಜಾಗೃತಿ ಶಿಬಿರ, ಮಹಿಳಾ ಸಬಲೀಕರಣ, ಹೀಗೆ ವಿವಿಧ ಆಯಾಮ ಗಳಲ್ಲಿ ಈವರೆಗೆ ೧.೪೦ ಕೋಟಿ ಮೌಲ್ಯದ ವಿವಿಧ ಕಾಮಗಾರಿ, ಸಹಾಯಹಸ್ತ ನೀಡುವುದರ ಮೂಲಕ ಇಡೀ ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಸಂಸ್ಥೆಯೆಂದು ಪರಿಗಣಿಸಲ್ಪಟ್ಟಿದೆ ಎಂದರು.


ಸೇವಾ ಯೋಜನೆಗಳು:
ರೋಟರಿ ಕ್ಲಬ್ ಕ್ಯಾನ್ ಫಿನ್ ಹೋಮ್ಸ್ ಸಹಭಾಗಿತ್ವದಲ್ಲಿ ಈಗಾಗಲೇ ೫ ಸರಕಾರಿ ಶಾಲೆಗಳಿಗೆ ೬೦ ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಶೌಚಾಲಯ, ಮುಂಡಾಜೆ ಅನುದಾನಿತ ಹಿ. ಪ್ರಾ. ಶಾಲೆಗೆ ೧೬.೫ ಲಕ್ಷ ವೆಚ್ಚದಲ್ಲಿ, ೩೩ ಕಂಪ್ಯೂಟರ್, ಯುಎಸ್‌ಬಿ ಹಾಗೂ ಅತ್ಯಾಧುನಿಕ ಟೆಕ್ನೋಲಾಜಿ ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬ್‌ನ್ನು ಹಸ್ತಾಂತರಿಸಿದ್ದೇವೆ.ಬೆಂಗಳೂರು ಇಂದಿರಾನಗರ ಸಂಸ್ಥೆಯೊಡನೆ ಈ ವರ್ಷ, ೧೦.೮ ಲಕ್ಷ ರೂ.ನಷ್ಟು ಸ್ಕಾಲರ್ ಶಿಪ್ ನ್ನು ಸರಕಾರಿ ಪಿಯುಸಿ ಮಕ್ಕಳಿಗೆ ನೀಡಿದ್ದೇವೆ. ಈ ವರೇಗೆ ೭ ರಕ್ತದಾನ ಶಿಬಿರ ನಡೆಸಿ, ಸುಮಾರು ೭೦೦ ಯುನಿಟ್ ನಷ್ಟು ರಕ್ತ ಸಂಗ್ರಹಿಸಿ ಕೊಟ್ಟಿದ್ದೇವೆ. ೪ ಆರೋಗ್ಯ ಶಿಬಿರ, ೩ ನೇತ್ರದಾನ ಶಿಬಿರ ನಡೆಸಿದ್ದೇವೆ ಎಂದರು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಎನ್.ಎನ್.ಎಸ್ ಘಟಕದ ಜತೆ ಸೇರಿ ಪರಿಸರ ಜಾಗೃತಿ, ಆರ್.ಸಿ.ಸಿ. ಮುಂಡಾಜೆ ಮತ್ತು ಗ್ರಾಮ ಪಂಚಾಯತ್ ಸಹಕಾರದಲ್ಲಿ ೨೦೦ಕ್ಕೂ ಹೆಚ್ಚು ನಾಯಿಗಳಿಗೆ ರಾಬೀಸ್ ಚುಚ್ಚುಮದ್ದು, ಮಂಗಳೂರಿನ ಎನಿಮಲ್ ಕೇರ್ ಸೆಂಟರ್ ಸಹಯೋಗದಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ನಡೆಸಿದ್ದೇವೆ. ದೀಪಾವಳಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ದಂಪತಿ ಪಾಕ ಸ್ಪರ್ಧೆ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಮಕ್ಕಳಿಗೆ “ರೋಟಾಲಯ ಸಂಗೀತ ಸ್ಪರ್ಧೆ”, ಮುಗುಳಿಯ ಸುಭಾಸ್ ಚಂದ್ರ ಬೋಸ್ ವಸತಿ ನಿಲಯದ ಮಕ್ಕಳಿಗೆ ಯೋಗ, ಗಣಿತದಲ್ಲಿ ಮೋಜು ಮುಂತಾದ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಮಹಿಳೆಯೊಬ್ಬಳಿಗೆ ಕೃತಕ ಕಾಲು ಜೋಡಣೆ, ವೀಲ್ ಚೆಯರ್ ವಿತರಣೆ, ಅಶಕ್ತರಿಗೆ 10 ಸಾವಿರ ರೂ. ಪ್ರೋಟಿನ್ ಯುಕ್ತ ಆಹಾರ ವಿತರಣೆ, ಅಶಕ್ತ ಮಗುವೊಂದಕ್ಕೆ ಬೆಡ್ ವ್ಯವಸ್ಥೆ, ಶಾಲಾ ಕಾಲೇಜುಗಳಲ್ಲಿ ಮ್ಯಾಥ್ಸ್ ಪನ್ & ಮ್ಯೂಸಿಕ್ ಎಂಬ ಉಪನ್ಯಾಸ, ದಂತ ಆರೋಗ್ಯದ ಮಾಹಿತಿ ನಡೆಸಲಾಗಿದೆ ಎಂದು ತಿಳಿಸಿದರು.
ಡಿ.18 ರಂದು ಜಿಲ್ಲಾ ಗವರ್ನರ್ ಬೆಳಾಲು ರಸ್ತೆಯಲ್ಲಿ ಪಿಲಿಗೂಡಿನ ಪರಂಗಜೆ ಎಂಬಲ್ಲಿ, ರೂ. ೩೫,೦೦೦ ವೆಚ್ಚದಲ್ಲಿ ಬಸ್ ನಿಲ್ದಾಣದ ಉದ್ಘಾಟನೆ, ಸ.ಹಿ.ಪ್ರಾ ಶಾಲೆಯ ೧೫೦ ಮಕ್ಕಳಿಗೆ ಟೀ ಶರ್ಟ್ ಮತ್ತು ಪ್ಯಾಂಟ್ ವಿತರಣೆ, ನಂದಗೋಕುಲ ಗೋ ಶಾಲೆಯಲ್ಲಿ ರೂ.೧೮ ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಶಿಶಿಲ ಶಾಲಾ ನೂತನ ಕಟ್ಟಡ ಹಾಗೂ ಶೌಚಾಲಯ, ಮುಂಡಾಜೆ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ವೀಕ್ಷಣೆ ಮಾಡಲಿದ್ದಾರೆ. ರೋಟರಿ ಕ್ಲಬ್‌ನ ೯ ಸದಸ್ಯರಿಗೆ ಗೋಲ್ಡನ್ ಮೆಂಬರ್, ೧೮ ಮಂದಿಗೆ ಪ್ಲಾಟಿನಂ ಮೆಂಬರ್ ಎಂದು ಗೌರವಿಸಲಿದ್ದಾರೆ.


ಶ್ರೀ ಕೃಷ್ಣ ಭಜನಾ ಮಂದಿರ ಚಾರ್ಮಾಡಿಗೆ ೯ ಸಾವಿರ ಬೆಲೆಯ ಕುಡಿಯುವ ನೀರಿನ ಫಿಲ್ಟರ್ ಹಾಗೂ ಬೆಳ್ತಂಗಡಿಯ ಆರೋಗ್ಯ ಇಲಾಖೆಗೆ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ರೂ.10 ಸಾವಿರ ಮೊತ್ತದ, ಪ್ರೋಟಿನ್ ಭರಿತ ಆಹಾರ ಪದಾರ್ಥ ಗಳನ್ನು ತಲಾ ರೂ. 500ರ 20 ಕಿಟ್‌ಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರೊ.ಡಾ.ಎಂ.ಎಂ ದಯಾಕರ್, ನಿಯೋಜಿತ ಅಧ್ಯಕ್ಷ ಶ್ರೀಧರ ಕೆ.ವಿ ಉಪಸ್ಥಿತರಿದ್ದರು.

Related posts

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ರವರಿಂದ ಮತ ಚಲಾವಣೆ

Suddi Udaya

ಮಡಂತ್ಯಾರು ಉಪ್ಪಿನಂಗಡಿ ರಸ್ತೆಯ ಮಾರಿಗುಡಿ ಸಮೀಪ ಅಪಾಯಕಾರಿ ಮರ: ಸಂಬಂಧಪಟ್ಟ ಇಲಾಖೆಯವರು ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಬೆಳ್ತಂಗಡಿ: ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

Suddi Udaya

ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಮನವಿ

Suddi Udaya

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ: ಶ್ರೀ ಧ.ಮಂ. ಆಂ.ಮಾ. ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya
error: Content is protected !!