September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರವು ನಡೆಯಿತು. ಕಾರ್ಯಕ್ರಮವನ್ನು ಶ್ರೀ ಅಗರ್ತ ವೆಂಕಟರಮಣ ಭಟ್ ಸಿ ಇ ಒ ವೆಂಕ್ಚರ್ ಸಾಫ್ಟ್ವೇರ್ ಧ್ವಜಾರೋಹಣವನ್ನು ನೆರವೇರಿಸಿ ಶಾಲೆಯ ನವೀಕೃತ ರಂಗ ಮಂದಿರವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸೇವಾ ಸಮಿತಿಯ ದಿಗ್ದರ್ಶಕ ಈಶ್ವರ ಭಟ್ ಮಾಯಿಲ್ತೋಡಿ ವಹಿಸಿದರು. ಶಾಲಾ ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ ಭಟ್, ಖಜಾಂಚಿ ಶಿವಪ್ರಸಾದ್ ಸರಳಿ ಹಾಗೂ ಶಾಲಾ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಮಹಮ್ಮದ್ ಪೀರ್ಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಮಾಡಲಾಯಿತು. ಶ್ರೀ ಭಾರತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶೋಭಿತ ಕೆ ಆರ್ ಸ್ವಾಗತಿಸಿದರು. ಸಹ ಶಿಕ್ಷಕಿ ಅಂಜಲಿ ವಂದಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಕುಮಾರಿ ಶಿಲ್ಪ ನೆರವೇರಿಸಿದರು.

Related posts

ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ಟ್ಯೂಷನ್ ತರಬೇತಿ ಸಮಾರೋಪ

Suddi Udaya

ಮುಂಡಾಜೆ: ಕಂದಕಕ್ಕೆ ಉರುಳಿದ ಕಾರು

Suddi Udaya

ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ ಮಾಲಕ ಶಶಿಧರ್ ರಾವ್ ನಿಧನ

Suddi Udaya

ಪಟ್ರಮೆ ಶಕ್ತಿಕೇಂದ್ರದ ಬಿಜೆಪಿ ಕಾರ್ಯಕರ್ತರಿಂದ ಮತ ಪ್ರಚಾರ

Suddi Udaya

ಧರ್ಮಸ್ಥಳ : ಬೋಳಿಯರ್ ನಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ: ಅಪಾರ ಕೃಷಿ ಹಾನಿ

Suddi Udaya

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ನವಜೀವನೋತ್ಸವ ಕಾರ್ಯಕ್ರಮ: ಪಾನ ಮುಕ್ತ ಗ್ರಾಮ ಸಾಧಕರಿಗೆ ಗೌರವ-ಜಾಗೃತಿ ಅಣ್ಣ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ

Suddi Udaya
error: Content is protected !!