25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಭಿನಂದನೆವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪ.ಪೂ. ಕಾಲೇಜುಗಳ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ಇಂದುಮತಿ ಮತ್ತು ಪಂಚಮಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ವಾಣಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ಇಂದುಮತಿ ಮತ್ತು ಪಂಚಮಿ ಶಾಲಾ ಶಿಕ್ಷಣ ಇಲಾಖೆಯ ( ಪದವಿಪೂರ್ವ) ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.

ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಇಂದುಮತಿ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪಂಚಮಿ, ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಗೌರವ ತಂದ ಈ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

Related posts

ಶಿಬಾಜೆ: ಕಾಡಾನೆ ದಾಳಿಗೆ ಹಸು ಬಲಿ

Suddi Udaya

ದ.ಕ.ಜಿಲ್ಲಾ ಗೊಲ್ಲ(ಯಾದವ)ಸಮಾಜ ಸೇವಾ ಸಂಘದ ವತಿಯಿಂದ ಅಶ್ವತ್ ಎಸ್ ರವರಿಗೆ ಸನ್ಮಾನ

Suddi Udaya

ಟೀಮ್ ದೇವನಾರಿ ತಂಡದ ವತಿಯಿಂದ ಆರ್‌ಸಿಬಿ ವಿಜಯೋತ್ಸವ ವಿಶಿಷ್ಟ ರೀತಿಯಲ್ಲಿ ಆಚರಣೆ – ಅಂಗನವಾಡಿ ಮತ್ತು ದೇವನಾರಿ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಪೆನ್ ಪೆನ್ಸಿಲ್ ಹಾಗೂ ಸಿಹಿ ತಿಂಡಿ ವಿತರಣೆ

Suddi Udaya

ಮೂರು ಜನ ವಿಶೇಷ ಚೇತನರನ್ನು ಒಳಗೊಂಡ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

Suddi Udaya

ಭಾರತೀಯ ಮಜ್ದೂರ್ ಸಂಘದಿಂದ ಪ್ರತಿಭಟನೆ ಮತ್ತು ಪ್ರಧಾನಮಂತ್ರಿಗೆ ಮನವಿ

Suddi Udaya

ಯುವ ಉದ್ಯಮಿ ಕಿರಣ್ ಕುಮಾರ್ ಮಂಜಿಲರವರಿಂದ ಮಾನವೀಯ ಕಾರ್ಯ: ಆರಂಬೋಡಿ ಗ್ರಾಮದ ಬಡ ಕುಟುಂಬಕ್ಕೆ ಸುಮಾರು ರೂ 70 ಸಾವಿರದಲ್ಲಿ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya
error: Content is protected !!