ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರು ಒದಗಿಸಿದ ರೂ. 5.00 ಲಕ್ಷ ಅನುದಾನದಲ್ಲಿ ವಿಸ್ತರಣೆಗೊಂಡ ಕಲ್ಮoಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನ, ಶಾಲಾ ಮಕ್ಕಳಿಗೆ ಉಪಯೋಗವಾಗಲು ಮೈದಾನ ವಿಸ್ತರಣೆಗೊಳಿಸಲು ಅನುದಾನ ಒದಗಿಸಿದ ಶಾಸಕರಿಗೆ ಶಾಲಾ ಮಕ್ಕಳ, ಶಿಕ್ಷಕ ವೃಂದ, ಪೋಷಕರ,ಶಾಲಾಭಿವೃದ್ದಿ ಸಮಿತಿ, ಹಳೆವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸಿದರು.
ಇನ್ನೂ ಕೆಲವೇ ದಿನಗಳಲ್ಲಿ ಶಾಲೆಯ ಶತಮಾನೋತ್ಸವ ಆಚರಣೆ ನಡೆಯಲಿದ್ದು. ಇದು ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಉಪಯೋಗವಾಗಲಿದೆ.











