ಕೊಯ್ಯೂರು:”ಮನುಷ್ಯ ಭೂಮಿಗೆ ಬರುವಾಗ ಉಸಿರು ಇರುತ್ತದೆ. ಭೂಮಿಯಿಂದ ಹೋಗುವಾಗ ಹೆಸರು ಉಳಿಯುತ್ತದೆ” ಎಂಬುದಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಯಾಗಿರುವ ಶ್ರೀ ಹರೀಶ್ ಆರಿಕೋಡಿ ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜ್ ನ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಶುಭಾಶoಸನೆ ಗೈದರು.ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜ್ ನ ಸಹಪ್ರಾಧ್ಯಾಪಕರಾದ ಶ್ರೀ ಮಾಧವ ಎಂ.ಕೆ. ತಮ್ಮ ದಿಕ್ಸೂಚಿ ಭಾಷಣದಲ್ಲಿ

“ಸಾಧನೆ ಮಾಡುವ ಕನಸು ಕಾಣಬೇಕು. ಕನಸು ನನಸಾಗುವ ಪ್ರಯತ್ನ ಮಾಡಬೇಕು. ಜೀವನದ ವಿವಿಧ ಸನ್ನಿವೇಶಗಳು, ನಮ್ಮ ಜೀವನವನ್ನು ರೂಪಿಸುವ ಮೈಲಿಗಲ್ಲುಗಳು. ನಮ್ಮ ಯೋಚನೆ-ಯೋಜನೆಗಳು ನಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತವೆ.” ಎಂಬುದಾಗಿ ಅಭಿಪ್ರಾಯ ಪಟ್ಟರು.ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿದ್ದ “ಬದುಕು ಕಟ್ಟೋಣ ಬನ್ನಿ ತಂಡ (ರಿ.)ಉಜಿರೆ -ಇದರ ಸಂಚಾಲಕರಾದ ಶ್ರೀ ಮೋಹನ್ ಕುಮಾರ್ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಮೆಲುಕು ಹಾಕುತ್ತಾ” ಬಡತನ ಶಾಪವಲ್ಲ, ವರ.ಮನುಷ್ಯ ಸಮಾಜಮುಖಿ ಚಿಂತನೆಗಳ ಮೂಲಕ ಬದುಕು ರೂಪಿಸಿಕೊಳ್ಳಬೇಕು ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಪ್ರಕಾಶ್ ಪ್ರಭುರವರು ತಮ್ಮ ಸುಶ್ರಾವ್ಯ ಗಾಯನದೊಂದಿಗೆ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಯ್ಯೂರು ಪ್ಯಾಕ್ಸ್ ನಿರ್ದೇಶಕರಾದ ಶ್ರೀ ಅಶೋಕ್ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಯಾಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಬಜಿಲ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಹೇಮಾವತಿ, ಶ್ರೀ ಇಸುಬು ಉಣ್ಣಾಲು, ಶ್ರೀ ಯಶವಂತ ಗೌಡ ಉಣ್ಣಾಲು,ಕೊಯ್ಯೂ ರು ಪ್ಯಾಕ್ಸ್ ಅಧ್ಯಕ್ಷರಾದ ಶ್ರೀ ರವೀಂದ್ರನಾಥ, ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಂತಕೃಷ್ಣ ಭಟ್, ಪೆರ್ಲಬೈಪಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ಬಾಲಕೃಷ್ಣ ಕೊರಮೇರು, ಕೊಯ್ಯೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ರಾಧಾಕೃಷ್ಣ ತಚ್ಛಮೆ,ನಡ ಸರಕಾರಿ ಪದವಿಪೂರ್ವ ಕಾಲೇಜ್ ನ ನಿವೃತ್ತ ಪ್ರಾಂಶುಪಾಲ ಶ್ರೀ ಚಂದ್ರಶೇಖರ್, ಹೊಳೆನರಸೀಪುರದ ನಿವೃತ್ತ ಅಂಚೆ ಪಾಲಕರಾದ ಶ್ರೀ ಉಮೇಶ್ ನೀರಾರಿ, ಉದ್ಯಮಿ ಗಳಾದ ಶ್ರೀ ಜಯಣ್ಣ ಮಿನoದೇ ಲು,ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀ ದಾಮೋದರ ಗೌಡ ಬೆರ್ಕೆ, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ವಂಶಿಕ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಐಶ್ವರ್ಯ, ಚಿರಸ್ವಿ, ಸಹಲಾ, ವಂಶಿಕ, ವಿದ್ಯಾ, ವಿನಯ – ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಮೋಹನ ಗೌಡ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರಶ್ಮಿ ದೇವಿ ವರದಿ ವಾಚಿಸಿದರು. ರಾಜ್ಯ ಶಾಸ್ತ್ರ ಉಪನ್ಯಾಸಕ ಸಂತೋಷ್ ಕುಮಾರ್ ವಂದಿಸಿದರು. ಇತಿಹಾಸ ಉಪನ್ಯಾಸಕರಾದ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು.ಲೆಕ್ಕ ಶಾಸ್ತ್ರ ಉಪನ್ಯಾಸಕಿ ಭವ್ಯ, ವ್ಯವಹಾರ ಅಧ್ಯ ಯನ ಉಪನ್ಯಾಸಕರಾದ ಪವಿತ್ರ, ಸಮಾಜಶಾಸ್ತ್ರ ಉಪನ್ಯಾಸಕ ಮಾಯಿಲ, ಅರ್ಥಶಾಸ್ತ್ರ ಉಪನ್ಯಾಸಕಿ ತೃಪ್ತಿ ವಿವಿಧ ಬಹುಮಾನಗಳ ಪಟ್ಟಿ ವಾಚಿಸಿದರು.ಈ ಸಂಧರ್ಭದಲ್ಲಿಕಳೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶದ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಾದ ಭವ್ಯ, ರಂಝಿನ,ಫಾತಿಮಾ ಹಿಸನಾ,ಹಿತಾಕ್ಷಿ ಶೀಲಾವತಿ, ಪ್ರಜ್ಞಾ ಇವರುಗಳನ್ನು ಸನ್ಮಾನಿಸಲಾಯಿತು. ದಾನಿಗಳಾದ ಶ್ರೀ ಮವೀನ್ ಕುಮಾರ್ ಕೊಯ್ಯೂರು, ಶ್ರೀ ಮೋಹನ ಗೌಡ ಕಡಮ್ಮಜೆ, ಶ್ರೀ ವಸಂತಗೌಡ ಬರೆಮೇಲು, ಶ್ರೀ ಸುರೇಶ್ ಕುಕ್ಕೊಟ್ಟು, ಶ್ರೀ ಕೂಸಪ್ಪ ಪೂಜಾರಿ ಬಜಿಲ, ಶ್ರೀ ಜಯಣ್ಣ ಮಿನoದೇಲು, ಶ್ರೀಮತಿ ರಶ್ಮಿದೇವಿ ಉಗ್ರೋಡಿ,ಬೆಳ್ತಂಗಡಿಯ ಮಯೂರ ಜವಳಿ ಮಳಿಗೆ -ಇವರುಗಳನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು.ಅಪರಾಹ್ನ ವಿದ್ಯಾರ್ಥಿಗಳಿoದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.











