25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿವರದಿಸಂಘ-ಸಂಸ್ಥೆಗಳು

ಸುಮಂತ್ ಕುಮಾರ್ ಜೈನ್ ರಿಂದ ದಿ ರೋಟರೀ ಇಂಟರ್ ನ್ಯಾಷನಲ್ ಫಂಡ್ ಗೆ ರೂ.90,000 ಕೊಡುಗೆ

ಬೆಳ್ತಂಗಡಿ: ರೋಟರಿ ಸಂಸ್ಥೆಯಲ್ಲಿ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ರೋಟರಿ ಫೌಂಡೇಶನ್‌ಗೆ ಕನಿಷ್ಠ ರೂ.1,000 ದೇಣಿಗೆ ನೀಡಿದ ವ್ಯಕ್ತಿಗಳಿಗೆ PHF ಅಥವ ಪೌಲ್ ಹ್ಯಾರಿಸ್ ಫೆಲೋ (Paul Harris Fellow) ಎಂಬ ಗೌರವ ನೀಡಿ ಗೌರವಿಸಲಾಗುತ್ತದೆ.

ರೋಟರೀ ಕ್ಲಬ್ಬಿನ ಜನಕ ಪೌಲ್ ಹ್ಯಾರಿಸ್ ಹೆಸರಿನಲ್ಲಿ ಕೊಡಲ್ಪಡುವ ಈ ಪ್ರತಿಷ್ಠೆಯ ಗೌರವ, ಸರ್ಟಿಫಿಕೇಟ್ ಮತ್ತು ಚಿನ್ನದ ಬಣ್ಣದ ಪಿನ್ ಒಳಗೊಂಡಿರುತ್ತದೆ. ಬೆಳ್ತಂಗಡಿ ಕ್ಲಬ್ಬಿನ ಹೆಮ್ಮೆಯ ಸದಸ್ಯ, ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷರೂ ಆಗಿರುವ ಸುಮಂತ ಕುಮಾರ್ ಜೈನ್ ಇದೀಗ ಆ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ರೋಟರೀ ಕ್ಲಬ್ ಅಧ್ಯಕ್ಷ ರೋ. ಪ್ರೊ. ಪ್ರಕಾಶ ಪ್ರಭು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅದೇ ರೀತಿ ರೂ.2,000 ಮತ್ತು ರೂ.10,000 ನೀಡಿ ಕ್ರಮವಾಗಿ ಮಲ್ಟಿಪಲ್ ಪೌಲ್ ಹ್ಯಾರಿಸ್ ಫೆಲೊ (MPHF) ಮತ್ತು ಮೇಜರ್ ಡೋನರ್ ಗೌರವವನ್ನು ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿರುತ್ತಾರೆ.

Related posts

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ , ಮುಂಡಾಜೆಯಲ್ಲಿ ಟಯರ್ ಹೊತ್ತಿಸಿ ಆಕ್ರೋಶ

Suddi Udaya

ಸಂತೆಕಟ್ಟೆ ರಿಕ್ಷಾ ಚಾಲಕ ಮತ್ತು ಮಾಲಕರಿಂದ ನಿಧನರಾದ ಶೇಖರ್ ರವರಿಗೆ ಸಂತಾಪ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಪೊಲೀಯೋ ಲಸಿಕಾ ಅಭಿಯಾನಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ

Suddi Udaya

ನೂರುಲ್ ಹುಧಾ ದರ್ಸ್ ವಾರ್ಷಿಕ ಹಾಗೂ ಬುರ್ದಾ ಮಜಲಿಸ್ ಸಮಾರಂಭದಲ್ಲಿ ಭೂನ್ಯಾಯ ಮಂಡಳಿಗೆ ನಾಮ ನಿರ್ದೇಶನ ಹೊಂದಿದ ಇಸ್ಮಾಯಿಲ್ ಕೆ ಪೆರಿಂಜೆ ರವರಿಗೆ ಗೌರವಾರ್ಪಣೆ

Suddi Udaya

ಆರಂಬೋಡಿ ಬಂಟ್ಸ್ ಸಂಘದ ಗ್ರಾಮ ಸಮಿತಿ ಸಭೆ

Suddi Udaya

ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್: ಉಜಿರೆ ಶ್ರೀ ಧ.ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿ ದೀಕ್ಷಿತಾ. ಕೆ ರವರಿಗೆ ಬೆಳ್ಳಿ ಪದಕ

Suddi Udaya
error: Content is protected !!