32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶತಮಾನೋತ್ಸವದ ಸಂಭ್ರಮದ ಪೂರ್ವ ಭಾವಿ ಸಭೆಯು ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಕಾರ್ಯಕ್ರಮ ಸಂಯೋಜಕ ಬಿ.ಸೋಮಶೇಖರ್ ಶೆಟ್ಟಿಯವರು ಪೋಷಕರನ್ನು ಕುರಿತು, ಶತಮಾನೋತ್ಸವ ಕಾರ್ಯಕ್ರಮಕ್ಕೆ ನಡೆಸಬೇಕಾದ ಪೂರ್ವತಯಾರಿಯ ಬಗ್ಗೆ ವಿವರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪೋಷಕರ ಸಹಕಾರವನ್ನು ಡಿ.19 ,20 ರಂದು ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮದ ರೂಪುರೇಷೆಯನ್ನು ಪೋಷಕರಿಗೆ ತಿಳಿಸಿದರು.

ಶ್ರೀ.ಧಮಂ ಶಿಕ್ಷಣ ಸಂಸ್ಥೆಯ ಕ್ಷೇಮಪಾಲನಾ ಅಧಿಕಾರಿಯಾಗಿರುವ ಧನ್ಯಕುಮಾರ್ ಮತ್ತು ಶಾಲಾ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಅಬೂಬಕ್ಕರ್ ಸಭೆಯನ್ನು ಉದ್ದೇಶಿಸಿ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಸ್ಮರಣೀಯಗೊಳಿಸಲು ಪೋಷಕರ ಪಾತ್ರ ಮಹತ್ತರವಾದದು ಶತಮಾನೋತ್ಸವ ಸಂಭ್ರಮವನ್ನು ಯಶಸ್ವಿಯಾಗಿ ನಡೆಸಲು ಪೋಷಕರ ಸಹಕಾರ ಕೋರಿದರು.

ವೇದಿಕೆಯಲ್ಲಿ ಮೋಹನ್ ಶೆಟ್ಟಿಗಾರ್, ಕೋಶಾಧಿಕಾರಿ ಶಾಲಾ ಶತಮಾನೋತ್ಸವ ಸಮಿತಿ, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಯಶೋಧರ್, ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ನಾಯ್ಕ ಪಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರುಗಳಾದ ಕೃಷ್ಣಪ್ರಸಾದ್ ಮತ್ತು ಶ್ರೀಮತಿ ಪ್ರತಿಮಾ ಉಪಸ್ಥಿತರಿದ್ದರು.
ಸಭೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಶಾಲಾ ಶತಮಾನೋತ್ಸವ ಸಂಭ್ರಮಕ್ಕೆ ಪೋಷಕರೆಲ್ಲಾ
ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕೇಳಿಕೊಂಡರು.


ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಕಾರ್ಯಕ್ರಮವು ಸುಜಾತ ನಿರೂಪಿಸಿ, ಗಿರೀಶ್ ಸ್ವಾಗತಿಸಿದರು. ಅಶ್ವಿನಿ ಧನ್ಯವಾದವಿತ್ತರು.

Related posts

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ಮತ್ತು ಮಹಿಳಾ ಬಿಲ್ಲವ ವೇದಿಕೆಯಿಂದ ಗುರುಗಳ 169 ನೇ ಜಯಂತಿ ಆಚರಣೆ, ನೂತನ ಆಡಳಿತ ಮಂಡಳಿಯ ಪದ ಪ್ರಧಾನ ಸಮಾರಂಭ

Suddi Udaya

ಹುಣ್ಸೆಕಟ್ಟೆ : ಆಟೋ ಚಾಲಕ ಪಿ.ಹರೀಶ್ಚಂದ್ರ ನಿಧನ

Suddi Udaya

ಗಾಳಿ- ಮಳೆಗೆ ಕೋಳಿ ಸಾಕಾಣಿಕೆಯ ಶೆಡ್ ಕುಸಿದು ಬಿದ್ದು ಸಾವಿರಾರು ಕೋಳಿಗಳ ಸಾವು,ಲಕ್ಷಾಂತರ ರೂ ನಷ್ಟ

Suddi Udaya

ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು, ಇದರ ನಡುವೆ ಒಡಂಬಡಿಕೆ ಒಪ್ಪಂದ

Suddi Udaya

ಕೆಪಿಎಸ್ ಪುಂಜಾಲಕಟ್ಟೆ ಪದವಿಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವ

Suddi Udaya

ಉಜಿರೆ: ವರ್ತಕರ ಸಂಘದ ನೂತನ ಅಧ್ಯಕ್ಷ ಪ್ರಸಾದ್ ಬಿಎಸ್ ಮತ್ತು ತಂಡದ ಪದಪ್ರದಾನ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ

Suddi Udaya
error: Content is protected !!