ಪಡಂಗಡಿ: ಇಲ್ಲಿಯ ದೇಜಪ್ಪ ಎಂಬವರ ಮನೆಯ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕರುವಿನ ಹೊಟ್ಟೆಯ ಭಾಗವನ್ನು ತಿಂದು ಹಾಕಿದ ಘಟನೆ ನಡೆದಿದೆ.
ಫಾರೆಸ್ಟ್ ಇಲಾಖೆ ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ಕೊಟ್ಟು ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಚಿರತೆಯನ್ನು ಆದಷ್ಟು ಶೀಘ್ರವಾಗಿ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.











