26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಡಿ.17: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ. ಕಾಶಿಪಟ್ಣರಿಗೆ ಹುಟ್ಟೂರ ಅಭಿನಂದನೆ

ಬೆಳ್ತಂಗಡಿ: ರಾಜ್ಯದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹಾಗೂ ಕಾಶಿಪಟ್ಣ ಗ್ರಾಮ ಪಂಚಾಯತಿಗೆ ‘ಗಾಂಧಿಗ್ರಾಮ’ ಪುರಸ್ಕಾರ ಲಭಿಸಲು ಪ್ರಮುಖ ಪಾತ್ರ ವಹಿಸಿದ ಸಹಕಾರಿ ಧುರೀಣ ಸತೀಶ್ ಕೆ. ಕಾಶಿಪಟ್ಣರಿಗೆ ಡಿ.17 ರಂದು ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಕಾಶಿಪಟ್ಣ ಗರಡಿ ಮೈದಾನದಲ್ಲಿ ನಡೆಯಲಿದೆ.

ಇದೇ ಸಮಾರಂಭದಲ್ಲಿ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರು ಮತ್ತು ಬೆಳುವಾಯಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರು ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಸಹಕಾರಿ ಧುರೀಣ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್‌ರಿಗೆ ಗೌರವ ಸನ್ಮಾನ ಜರುಗಲಿದೆ. ಕಾಶಿಪಟ್ಣ ಪೆರಾಡಿ, ಮರೋಡಿ, ಹೊಸಂಗಡಿ, ಬಡಕೋಡಿ ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಕೆಯಾಗಲಿದೆ.

ಅಭಿನಂದನಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಅನಂತಪದ್ಮನಾಭ ಅಸ್ರಣ್ಣರು ಆಶೀರ್ವಚನಾ ನೀಡಲಿರುವರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಲಿರುವರು. ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರು ಸನ್ಮಾನಿಸುವವರು, ಮುಖ್ಯ ಅತಿಥಿಗಳಾಗಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಕಾಶಿಪಟ್ಣ ದಾರುನ್ನೂರು ಎಜ್ಯುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಮೂಡಬಿದ್ರೆ ನಿಶ್ಮಿತಾ ಟವರ್ಸ್, ನಾರಾಯಣ ಪಿ. ಎಂ., ಕಾಶಿಪಟ್ಣ ಗ್ರಾ.ಪಂ.ಉಪಾಧ್ಯಕ್ಷೆ ಶುಭವಿ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ವೃಂದಾ ಪಿ.ಎಸ್., ಶಿರ್ತಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಚಿಂತನ್ ಲೋಬೋ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಕುವೈಟ್ ಉದ್ಯಮಿ ರಿಚಾರ್ಡ್ ಜಾರ್ಜ್ ಪಿಂಟೋ, ಪೆರಾಡಿ ಪ್ಯಾಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ, ಬೆಳ್ತಂಗಡಿ ಕೃಷಿಕ ಸಮಾಜ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ, ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಭಾಗವಹಿಸುವರು. ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯ ಪ್ರಾಧ್ಯಾಪಕ ದೇವುದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸುವರು ಎಂದು ಅಭಿನಂದನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಕ್ರಮಗಳು: ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಭವ್ಯ ಮೆರವಣಿಗೆ, ಕಾಶಿಪಟ್ಣ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಅಭಿನಂದನಾ ಕಾರ್ಯಕ್ರಮ, ಮೂಡಬಿದ್ರೆ ‘ಪಿಂಗಾರ ಕಲಾವಿದರಿಂದ ‘ಓಂಕಾರ’ ನಾಟಕ, ಆಗಮಿಸುವ ಅಥಿತಿ ಅಭ್ಯಾಗತರಿಗೆ ಉಪಹಾರದ ವ್ಯವಸ್ಥೆ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆ.

Related posts

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ಬಿ.ಕಾ೦ ವಿದ್ಯಾರ್ಥಿಗಳಿಗೆ ಪ್ರಾಡಕ್ಟ್ ಲಾಂಚ್ ಸ್ಪರ್ಧೆ

Suddi Udaya

ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಕೊಕ್ರಾಡಿ ಅತ್ರಿಜಾಲ್ ಕುತ್ಲೂರು ರಸ್ತೆಯ ಸೇತುವೆ ಕುಸಿತ

Suddi Udaya

ವಿದ್ಯಾ ವಾಹಿನಿ ವಾಟ್ಸಪ್ ಬಳಗದ ವತಿಯಿಂದ ನಾರಾವಿ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಕ್ರೆಯಾನ್ಸ್ , ಜಾಮಿಟ್ರಿ ಬಾಕ್ಸ್ ಗಳ ವಿತರಣೆ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಎನ್.ಎ.ಬಿ.ಹೆಚ್ ರಾಷ್ಟ್ರೀಯ ಮಾನ್ಯತೆ ಘೋಷಣೆ: ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಸೆಂಟರ್ ಉದ್ಘಾಟನೆ, ನವೀಕೃತ ಸುಧಾರಿತ ಪ್ರಯೋಗಾಲಯ ಉದ್ಘಾಟನೆ

Suddi Udaya
error: Content is protected !!