25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಿ.13-14: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಕೊಯ್ಯೂರು ಶಾಲೆ: ಮೋಹನ್ ಕುಮಾರ್ ನೇತೃತ್ವದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದಿಂದ ಕೊಡುಗೆಗಳ ಹಸ್ತಾಂತರ

ಬೆಳ್ತಂಗಡಿ: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಡಿ.13, 14ರಂದು ವಿಜೃಂಭಣೆಯಿಂದ ನಡೆಯಲಿದೆ. ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಮೋಹನ್ ಕುಮಾರ್ ಕೆ. ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡವು ಶಾಲೆಗೆ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಜರುಗಲಿದೆ.

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಹಿರಿಯ ವಿದ್ಯಾರ್ಥಿ ಚಿದಾನಂದ ರಾವ್ ಕೊಲ್ಲಾಜೆ ಧ್ವಜಾರೋಹಣ ನೆರವೇರಿಸುವರು. ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಗ್ರಂಥಾಲಯ ಕೊಠಡಿ ಉದ್ಘಾಟಿಸುವರು. ಹೈಕೋರ್ಟ್ ವಕೀಲ ಗೋಪಾಲಕೃಷ್ಣ ಭಟ್ ಗ್ರಂಥಾಲಯ ಉದ್ಘಾಟಿಸುವರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ಗೌಡ ಪಾಂಬೇಲು ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಕಲೇಶಪುರ ಸೆಲೆಕ್ಷನ್ ಗ್ರೇಡ್ ಅಂಚೆಯ ನಿವೃತ್ತ ಅಧೀಕ್ಷಕ ಉಮೇಶ್ ನೀರಾರಿ ದೀಪ ಪ್ರಜ್ವಲನೆ ಮಾಡಲಿರುವರು. ನೋಟರಿ ವಕೀಲ ಬಿ.ಕೆ. ಧನಂಜಯ ರಾವ್ ಆಶಯ ನುಡಿಯಲಿರುವರು. ಬೆಂಗಳೂರು ನಗರ ಸಹಕಾರ ಸಂಘಗಳ ಉಪನಿಬಂಧಕ ಸಲೀಂ ಬಿ.ಕೆ., ಹೈಕೋರ್ಟ್ ವಕೀಲ ಕರುಣಾಕರ ಪಾಂಬೇಲು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ವಕೀಲ ಕೆ. ಇಸ್ಮಾಯಿಲ್ ಉಣ್ಣಾಲು, ಎಸ್.ಕೆ.ಡಿ.ಆರ್.ಡಿ.ಪಿ. ಕರಾವಳಿ ವಿಭಾಗ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಭಾಗವಹಿಸುವರು.

ರಾತ್ರಿ ಸಭಾ ಕಾರ್ಯಕ್ರಮ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಘನ ಉಪಸ್ಥಿತಿಯಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿರುವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಸ್. ಗೌರವ ಉಪಸ್ಥಿತರಿರುವರು, ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿರುವರು. ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ, ಸಂಸದ ಕ್ಯಾ| ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕೊಯ್ಯೂರು ಗ್ರಾ.ಪಂ.ಅಧ್ಯಕ್ಷ ದಯಾಮಾಣಿ ಭಾಗವಹಿಸುವರು. ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ. ಮೋಹನ್ ಕುಮಾರ್, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ: ಡಿ.೧೩ರಂದು ಅಮೃತ ಕೊಯ್ಲು ಸಾಂಸ್ಕೃತಿಕ ವೈವಿಧ್ಯವನ್ನು ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ ಉದ್ಘಾಟಿಸುವರು.ಮಧ್ಯಾಹ್ನ ಯಕ್ಷಗಾನ ಬಯಲಾಟ ಕೃಷ್ಣಲೀಲೆ-ಕಂಸವಧೆ, ಎರುಕಡಪು, ಕೊಯ್ಯೂರು ಮತ್ತು ಬಲ್ಯರೊಟ್ಟು ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಕಲರವ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ. ಡಿ.14 ರಂದು ಹಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ, ಕರಾಟೆ ಪ್ರದರ್ಶನ ಜಾನಪದ ನೃತ್ಯ, ಗಾನ ವೈಭವ – ಸಾಂಸ್ಕೃತಿಕ ವೈವಿಧ್ಯ ಹಾಗೂ ಎಸ್‌ಡಿಎಂ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕೊಡುಗೆಗಳ ಹಸ್ತಾಂತರ:
ಡಿ.೧೩: ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಕೆ. ಮೋಹನ್ ಕುಮಾರ್ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡದ ಕೊಯ್ಯೂರು ಶಾಲೆಗೆ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಹಾಗೂ ಗೌರವಾರ್ಪಣೆ ಜರುಗಲಿದೆ. ರಂಗಮಂದಿರ ನಿರ್ಮಾಣ, ಟೈಲ್ಸ್ ಅಳವಡಿಕೆ, ಗೋಡೆಗಳಿಗೆ ಚಿತ್ರ, ಇಂಟರ್‌ಲಾಕ್ ಅಳವಡಿಕೆ ಹಾಗೂ ವಿವಿಧ ಕೊಡುಗೆಗಳು ಇವೆ.

Related posts

ಜೆಸಿಐ ಮಡಂತ್ಯಾರಿಗೆ ಜೆಸಿಐ ಭಾರತದ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಸಂಜೀವಿನಿ ಒಕ್ಕೂಟ: ಎಂಐಎಸ್‌ನಲ್ಲಿ ಅತ್ಯುತ್ತಮ ಸಾಧನೆ ನಿತೀಶ್ ಕುಲಾಲ್ ರಿಗೆ ರಾಜ್ಯಮಟ್ಟದ ಉತ್ತಮ ಸಾಧನಾ ಪ್ರಶಸ್ತಿ

Suddi Udaya

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಿಗೆ ‘ವೃತ್ತಿ-ವ್ಯಕ್ತಿತ್ವ ವಿಕಸನ’ ತರಬೇತಿ ಕಾರ್ಯಾಗಾರ

Suddi Udaya

ಅಯೋಧ್ಯೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ವಿಶೇಷ ಪೂಜೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

Suddi Udaya

ಬ್ರೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

Suddi Udaya
error: Content is protected !!