26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡೋತ್ಸವ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ವಾರ್ಷಿಕ ಕ್ರೀಡೋತ್ಸವವು ನಡೆಯಿತು. ಮುಖ್ಯ ಅತಿಥಿಯಾಗಿ ವಿಶ್ವನಾಥ್ ಪಿ ಪ್ರಾಂಶುಪಾಲರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಉಜಿರೆ, ಶ್ರೀಮತಿ ಸುಜಯ ಬಿ ದೈಹಿಕ ಶಿಕ್ಷಣ ಪರಿವೀಕ್ಷಕರು ಶಿಕ್ಷಣ ಇಲಾಖೆ ಬೆಳ್ತಂಗಡಿ, ರಮೇಶ್ ಎಚ್ ಕಾರ್ಯದರ್ಶಿಗಳು ಸ್ಪೋರ್ಸ್ ಕ್ಲಬ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ವಿಭಾಗ ಉಜಿರೆ, ಆಧ್ಯಾತ್ಮಿಕ ಜೀವನ ತರಬೇತುದಾರರಾದ ಶ್ರೀಮತಿ ರೇಷ್ಮಾ ರಾಜಿತ್, ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್, ದೈಹಿಕ ಶಿಕ್ಷಕರಾದ ಪ್ರವೀಣ್ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳಿಂದ ಪಥ ಸಂಚಲನವು ನಡೆಯಿತು . ಆಯ್ಕೆಯಾದ ತಂಡವು ಪಶಸ್ತಿಯನ್ನು ಪಡೆದುಕೊಂಡಿತು. ತೀರ್ಪುಗಾರರಾಗಿ ವಿವೇಕ್ ಸಹ ಶಿಕ್ಷಕರು ಎಸ್ ಡಿಎಮ್ ರಾಜ್ಯ ಪಠ್ಯಕ್ರಮ ಉಜಿರೆ, ಶ್ರೀಮತಿ ಗೀತಾ ಸಹ ಶಿಕ್ಷಕರು ಎಸ್ ಡಿ ಎಂ ಧರ್ಮಸ್ಥಳ ಆಗಮಿಸಿದ್ದರು.

ಕ್ರೀಡಾ ಜ್ಯೋತಿಯನ್ನು ಉದ್ಧಾಟಿಸಿದ ವಿಶ್ವನಾಥ್ ಪಿ ಮಾತನಾಡಿ ಕ್ರೀಡೆಯು ನಿಂತ ನೀರಾಗದೆ ಹರಿವ ನದಿಯಾಗಬೇಕು ಒಳ್ಳೆಯ ಆಟಗಾರರನ್ನು ಸಮಾಜಕ್ಕೆ ಪರಿಚಯಿಸುವುದು ನಮ್ಮ ಸಂಸ್ಥೆಯ ಉದ್ದೇಶ ಎಂಬುದನ್ನು ತಿಳಿಸಿದರು.

ಕ್ರೀಡಾ ದ್ವಜವನ್ನು ಅರಳಿಸಿದ ಸುಜಯ ಬಿ ದೈಹಿಕ ಶಿಕ್ಷಣ ಪರಿವೀಕ್ಷಕರು ಶಿಕ್ಷಣ ಇಲಾಖೆ ಬೆಳ್ತಂಗಡಿ ಇವರು ಮಕ್ಕಳಿಗೆ ಶುಭವನ್ನು ಹಾರೈಸಿದರು.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಎಲ್ಲಾ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು ಅಲ್ಲದೆ ಎಸ್ ಡಿ ಎಂ ಹಾಸ್ಪಿಟಲ್ ನ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


ದೈಹಿಕ ಶಿಕ್ಷಣಕರಾದ ಪ್ರವೀಣ್ ಎನ್ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಮೇನಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಸಹ ಶಿಕ್ಷಕರಾದ ಮುರಳಿ ಪಿ ನಿರೂಪಣೆ ಹಾಗೂ ಸ್ವಾಗತಿಸಿದರು.

Related posts

ಸೌತಡ್ಕ ದೇವಳದ ಸಮೀಪದಿಂದ ದನ ಕಳವು

Suddi Udaya

ವೇಣೂರು ಶ್ರೀ ಧ. ಮಂ. ಐಟಿಐಯ ತರಬೇತಿ ಉದ್ಘಾಟನೆ

Suddi Udaya

ಉಜಿರೆ: ರಾಜ್ಯಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ

Suddi Udaya

ಭೀಕರ ಗಾಳಿ ಮಳೆ: ಕುವೆಟ್ಟು ವರಕಬೆ ಬಳಿ ರಸ್ತೆಗೆ ಬಿದ್ದ ಮರ: ಸಂಚಾರಕ್ಕೆ ಅಡಚಣೆ

Suddi Udaya

ನಾರಾವಿ: ಎನ್ಎಸ್ಎಸ್ ನಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಉಜಿರೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

Suddi Udaya
error: Content is protected !!