July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ; ಧ್ವಜಾರೋಹಣ-ಗ್ರಂಥಾಲಯ ಉದ್ಘಾಟನೆ- ಸಭಾ ಕಾರ್ಯಕ್ರಮ

ಬೆಳ್ತಂಗಡಿ: ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಹಿರಿಯ ವಿದ್ಯಾರ್ಥಿ ಚಿದಾನಂದ ರಾವ್ ಕೊಲ್ಲಾಜೆ ಡಿ. 13ರಂದು ನೆರವೇರಿಸಿದರು. ಬೆಂಗಳೂರು ಹೈಕೋರ್ಟ್ ವಕೀಲರಾದ ಗೋಪಾಲಕೃಷ್ಣ ಭಟ್ ಪಿ ರವರು ಗ್ರಂಥಾಲಯದ ಕೊಠಡಿ ಹಾಗೂ ಗ್ರಂಥಾಲಯವನ್ನು ಉದ್ಘಾಟಿಸಿದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ಗೌಡ ಪಾಂಬೇಲು ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಯಿತು.ಸಕಲೇಶಪುರ ಸೆಲೆಕ್ಷನ್ ಗ್ರೇಡ್ ಅಂಚೆಯ ನಿವೃತ್ತ ಅಧೀಕ್ಷಕ ಉಮೇಶ್ ನೀರಾರಿ ದೀಪ ಪ್ರಜ್ವಲನೆಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್ ಪೂಂಜ ಹಾಗೂ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲರಾದ ಪಿ. ಕರುಣಾಕರ ಪಾಂಬೇಲು ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ವಿಜಯಕುಮಾರ್ ಎಂ. ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬೆಂಗಳೂರು ನಗರ ಸಹಕಾರ ಸಂಘಗಳ ಉಪನಿಬಂಧಕ ಸಲೀಂ ಬಿ.ಕೆ., ಹೈಕೋರ್ಟ್ ವಕೀಲ ಕರುಣಾಕರ ಪಾಂಬೇಲು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಎಸ್.ಕೆ.ಡಿ.ಆರ್.ಡಿ.ಪಿ. ಕರಾವಳಿ ವಿಭಾಗ ಪ್ರಾದೇಶಿಕ ನಿರ್ದೇಶಕ ಮಹಾಬಲ ಕುಲಾಲ್, ನಿವೃತ್ತ ಶಿಕ್ಷಕ ಧರ್ಣಪ್ಪ ಗೌಡ ಹಲೆಕ್ಕಿ, ಬೆಳ್ತಂಗಡಿ ನಿವೃತ್ತ ಉಪತಹಶೀಲ್ದಾರ್ ಜಿ. ಸೋಮೇ ಗೌಡ,
ನಂದ ಕುಮಾರ್ ತಂತ್ರಿಗಳು ಗೇರುಕಟ್ಟೆ, ಮ೦ಗಳೂರು ಲೆಕ್ಕಪರಿಶೋಧಕ ಮೋಹನ್ ಆಚಾರ್ಯ, ಕೊಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ, ಕೊಯ್ಯೂರು ಪ್ರಾ.ಕೃ.ಪ.ಸ. ಸಂಘ ಅಧ್ಯಕ್ಷ ರವೀಂದ್ರನಾಥ ಗೌಡ ಪಿ., ಆದೂರುಪೆರಾಲ್ ಶ್ರೀ ಕೃಷ್ಣ ಭಜನಾ ಮ೦ಡಳಿ ರೋಹಿತಾಶ್ವ, ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರು ಪ್ರೊ. ಶೈಲೇಶ್ ಕುಮಾರ್ ಡಿ. ಹೆಚ್., ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷ ವೆಂಕಣ್ಣ ಕೊಯ್ಯೂರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಕಸ್ತೂರಿ, ಆದೂರುಪೆರಾಲ್‌ ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ, ಕೊಯ್ಯೂರು ಪ್ಯಾಕ್ಸ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್, ಆದೂರು ಪೆರಾಲ್ ಸ್ವಾ. ಶ್ರೀ ಗ. ಸಮಿತಿ 2025 ಇದರ ಅಧ್ಯಕ್ಷ ಯಶವಂತ ಗೌಡ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷರುಗಳಾದ ಅಶೋಕ್ ಭಟ್ ಅಗ್ರಸಾಲೆ, ಬಿ. ಬಾಲಕೃಷ್ಣ ಪೂಜಾರಿ ಬಜೆ, ಪ್ರಚಂಡಭಾನು ಭಟ್‌ ಪಾ೦ಬೇಲು, ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ದಯಾಮಣಿ, ಶಾಲಾ ನಾಯಕಿ ಪ್ರಣಿತಾ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಅಮೃತ ಮಹೋತ್ಸವ ಕಾರ್ಯಾಧ್ಯಕ್ಷರು ಮಹಮ್ಮದ್ ಹಾರೂನ್ ಬಜಿಲ, ಪ್ರಧಾನ ಸಂಚಾಲಕರು ದಾಮೋದರ ಗೌಡ ಬೆರ್ಕೆ, ಗೌರವ ಸಲಹೆಗಾರರಾದ ಅನಂತರಾಮ ಶಬರಾಯ, ನಿವೃತ್ತ ಮುಖ್ಯಶಿಕ್ಷಕರು, ಜಾಹ್ನವಿ ಪೂರ್ಯಾಳ, ನಿವೃತ್ತ ಮುಖ್ಯಶಿಕ್ಷಕರು, ಗುಣಕರ ರೈ, ಹರ್ಮಾಡಿಶ್ರೀಮತಿ ಗೀತಾ ರಾಮಣ್ಣ ಗೌಡ ಕೋಡಿಯೇಲು, ಕೋಶಾಧಿಕಾರಿ ಚೇತನ್ ಚಂದಪ್ಪ ಗೌಡ, ಬೆರ್ಕೆ, ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ ಕಡಮ್ಮಾಜೆ, ಕೇಶವ ಗೌಡ ಕೋಂಗುಜೆ, ಇಸುಬು ಉಣ್ಣಾಲು, ವೆಂಕಣ್ಣ ಕೊಯ್ಯೂರು, ಲಕ್ಷ್ಮಣ ಗೌಡ ಮೇಗಿನ ಬಜಿಲ, ಸಂಚಾಲಕರಾದ ಮೋಹನ್ ಗೌಡ, ಪ್ರಾಂಶುಪಾಲರು, ಕೊಯ್ಯರು, ವಿಜಯ ಕುಮಾರ್ ಎಂ., ಶಿಕ್ಷಕರು, ವಿಶ್ವನಾಥ ಎಂ. ಶಿಕ್ಷಕರು,ಡಾ. ದಿವ ಕೊಕ್ಕಡ ಕೊಯ್ಯೂರು, ಜತೆ ಕಾರ್ಯದರ್ಶಿ ಶ್ರೀಮತಿ ದಿವ್ಯಾ ಪಾ೦ಬೇಲು, ಸಲಹೆಗಾರರಾದ ರಮೇಶ್ ಗೌಡ ಮೈಂದಕೋಡಿ, ತಿಮ್ಮಯ್ಯ ಗೌಡ ಸಾದೂರು ಹಾಗೂ ಸರ್ವ ಸದಸ್ಯರುಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಣ ವೃಂದ, ಪೋಷಕರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಬಳಿರಾಮ ಲಮಾಣಿ ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಚಂಡಭಾನು ಪ್ರಸ್ತಾವಿಸಿದರು. ಶಿಕ್ಷಕಿಯರಾದ ವಾಣಿಶ್ರೀ ಎ, ಅನುಷಾ ಕೆ ನಿರೂಪಿಸಿದರು. ಸಹ ಶಿಕ್ಷಕರಾದ ರಮೇಶ್ ವಿ.ಎಸ್ ವರದಿ ವಾಚಿಸಿ, ದೇವಪ್ಪ ವಂದಿಸಿದರು.

Related posts

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಮಾಣ ವಚನ ಸ್ವೀಕಾರ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಶಾಲಾ ಸಂಸತ್ತು ಚುನಾವಣೆ

Suddi Udaya

ಹದಗೆಟ್ಟ ಬಳ್ಳಮಂಜ ರಸ್ತೆ: ದುರಸ್ತಿಗೊಳಿಸುವಂತೆ ಮಡಂತ್ಯಾರು ಆಟೋ ಚಾಲಕ ಮಾಲಕರ ಸಂಘದಿಂದ ಒತ್ತಾಯ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ಸಮಿತಿ ವತಿಯಿಂದ ಬೂತ್ ಲೆವೆಲ್ ಏಜೆಂಟ್‌ಗಳ ಸಮ್ಮಿಲನ

Suddi Udaya

ಬಳಂಜ ಗ್ರಾಮ ಪಂಚಾಯತ್ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya
error: Content is protected !!