25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಗಾವಿ ಅಧಿವೇಶನದ ನಡುವೆ ಕೆಸಿಎ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಶಾಸಕರುಗಳು: ಗಮನ ಸೆಳೆದ ಶಾಸಕ ಹರೀಶ್ ಪೂಂಜರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ

ಬೆಳಗಾವಿ: ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಸಮಸ್ಯೆಗಳು, ಹೊಸ ಮಸೂದೆಗಳು ಸೇರಿದಂತೆ ವಿವಿಧ ಚರ್ಚೆಗಳು, ವಾಕ್ಸಮರಗಳು ಅಧಿವೇಶನದಲ್ಲಿ ಕಂಡು ಬರುತ್ತಿದೆ. ಈ ಮಧ್ಯೆ, ಡಿ.12ರಂದು ಅಧಿವೇಶನ ಆರಂಭಕ್ಕೂ ಮುನ್ನ ಮುಂಜಾನೆಯ ಸಮಯದಲ್ಲಿ ಕೆಸಿಎ ಕ್ರೀಡಾಂಗಣದಲ್ಲಿ ಮಾಧ್ಯಮ ಮಿತ್ರರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಬಿಜೆಪಿ ಶಾಸಕರು, ಪಕ್ಷದ ಮುಖಂಡರು ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನವು ಜನರ ಗಮನ ಸೆಳೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡ ಶಾಸಕರು “ಬೆಳಗಾವಿಯ ಅಧಿವೇಶನದ ನಡುವೆ ಬೆಳಗ್ಗೆ ಮಾಧ್ಯಮ ಸ್ನೇಹಿತರ ಜೊತೆ ಬೆಳಗಾವಿಯ ಕೆಸಿಎ ಕ್ರೀಡಾಂಗಣದಲ್ಲಿ ಬಿಜೆಪಿ ರಾಜ್ಯಧ್ಯಕ್ಷರಾದ ಬಿವೈ ವಿಜಯೇಂದ್ರ, ಶಾಸಕ ಮಿತ್ರರು, ಪಕ್ಷದ ಮುಖಂಡರು ಮತ್ತಿತರರೊಂದಿಗೆ ಕ್ರಿಕೆಟ್ ಆಡಿದರು, ಹಲವಾರು ಒತ್ತಡದ ಮಧ್ಯೆ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಹಕ್ಕೆ ಉಲ್ಲಾಸ ಮತ್ತು ಮನಸ್ಸಿಗೆ ಸಂತೋಷವನ್ನು ನೀಡಿ ನಮ್ಮ ದೈಹಿಕ ಸಧೃಡತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.” ಎಂದಿದ್ದಾರೆ.

Related posts

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಪ್ರಾರಂಭ

Suddi Udaya

ಜೂ 1: ಪುತ್ತೂರಿನಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸರ್ವಸದಸ್ಯರುಗಳ ಮಹಾಅಧಿವೇಶನ ಮತ್ತು ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಬೆಳ್ತಂಗಡಿಯ ರಾಮ ಕ್ಷತ್ರಿಯ ಸಂಘದಿಂದ ರಾಮೋತ್ಸವ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸದಸ್ಯರಿಗೆ 15 ಶೇ. ಡಿವಿಡೆಂಟ್

Suddi Udaya

ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದ ಬಳಂಜ ಶಾಲಾ ಅಮೃತ ಮಹೋತ್ಸವ ಆಚರಣಾ ಸಮಿತಿ

Suddi Udaya

ಧರ್ಮಸ್ಥಳ ನೇತ್ರಾವತಿ ಸೇತುವೆಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ : ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!