September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಮರ್ಹೂಮ್ ಅಝ್ರಿನ್ ಸಿದ್ದೀಕ್ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

ಬೆಳ್ತಂಗಡಿ: ಮರ್ಹೂಮ್ ಅಝ್ರಿನ್ ಸಿದ್ದೀಕ್ ಇವರ ಸ್ಮರಣಾರ್ಥದ ಭಾಗವಾಗಿ ಹಯಾತುಲ್ ಇಸ್ಲಾಂ ಮದರಸ ಬೀಟಿಗೆ ಹಾಗೂ ಮರ್ಹೂಂ ಹೈದರ್ ನಿರ್ಸಾಲ್ ಬ್ಲಡ್ ಡೋನರ್ಸ್ ಫಾರಂ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಯೇನಪೋಯ ಆಸ್ಪತ್ರೆ ಇವರ ಸಹಯೋಗದದೊಂದಿಗೆ ಬೃಹತ್ ರಕ್ತದಾನ ಶಿಬಿರ ಕಕ್ಕಿಂಜೆಯ ಮದರಸ ವಠಾರದಲ್ಲಿ ನಡೆಯಿತು.

ಅಹ್ಮದ್ ಕುಂಞಿ ಮುಸ್ಲಿಯಾರ್ ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ (ಪುತ್ತು) ವಹಿಸಿದ್ದರು. ರಫೀಕ್ ಫೈಝಿ ಖತೀಬರು ಜಲಾಲಿಯನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ತೌಸೀಫ್ ಫೈಝಿ ಖತೀಬರು ಇಸ್ಲಾಂಬಾದ್ ಹಾಗೂ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷರು ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ರಕ್ತದಾನ ಮಹತ್ವದ ಕುರಿತು ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಸ್ವದಕತ್ ದಾರಿಮಿ ಕತ್ತರಿಗುಡ್ಡೆ, ಅಬೂಬಕ್ಕರ್ ಮುಸ್ಲಿಯಾರ್, ಉಮರ್ ಮುಸ್ಲಿಯಾರ್, ಹಾರಿಸ್ ಹನೀಫಿ, ಮುಸ್ತಫಾ ಜಿ. ಕೆ ಎಸ್‌ಡಿಪಿಐ ಬೆಂಬಲಿತ ಪಂಚಾಯತ್ ಸದಸ್ಯರು ಕುವೆಟ್ಟು, ಹಕೀಮ್ ಜಿಕೆ ಎಸ್.ವೈ.ಎಸ್ ಕಕ್ಕಿಂಜೆ, ಉಸ್ಮಾನ್ ಕಲ್ಲಡ್ಕ ಅಧ್ಯಕ್ಷರು ಎಸ್‌ಡಿಪಿಐ ಚಾರ್ಮಾಡಿ, ಇಸ್ಮಾಯಿಲ್ ಅಧ್ಯಕ್ಷರು ಮುಹಿಯುದ್ದೀನ್ ಜುಮಾ ಮಸೀದಿ ಕಕ್ಕಿಂಜೆ, ಇಸ್ಮಾಯಿಲ್ ಕೆ. ಗೌರವಾಧ್ಯಕ್ಷರು ಹಯಾತುಲ್ ಇಸ್ಲಾಂ ಮದರಸ ಬೀಟಿಗೆ, ಸಿದ್ದೀಕ್ ಯು. ಪಿ. ಸದಸ್ಯರು ಗ್ರಾಮ ಪಂಚಾಯತ್ ಚಾರ್ಮಾಡಿ, ಹಾಜಿ ಸುಲೈಮಾನ್ ಹೋಟೆಲ್ ಚಾರ್ಮಾಡಿ ಅಧ್ಯಕ್ಷರು ಓಎಒ ಇಸ್ಲಾಂಬಾಂದ್ ಚಾರ್ಮಾಡಿ, ಅಬ್ದುಲ್ ಖಾದರ್ (ಮೋನಾಕ) ಮಾಜಿ ಅಧ್ಯಕ್ಷರು MJM ಜಲಾಲಿಯ ನಗರ ಚಾರ್ಮಾಡಿ, ಡಾಕ್ಟರ್ಸ್ ಮತ್ತು ಸಿಬ್ಬಂದಿಗಳು ಯೆನೋಪೊಯಾ ಆಸ್ಪತ್ರೆ ಮಂಗಳೂರು, ಅಹಮ್ಮದ್ ಕುಂಞ ಮುಸ್ಲಿಯಾರ್ ಬೀಟಿಗೆ, ಪಕೀರಬ್ಬ ಯು.ಪಿ, ರಫೀಕ್ ಯು. ಪಿ. ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಅಶ್ರಫ್ ಚಾರ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು ಎಪ್ಪತ್ತೈದು ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Related posts

ಅರಸಿನಮಕ್ಕಿ: ಕಾಪಿನಡ್ಕ ನಿವಾಸಿ ತಿಮ್ಮಪ್ಪ ಶೆಟ್ಟಿಗಾರ್ ನಿಧನ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಪದಗ್ರಹಣ

Suddi Udaya

ಎಕ್ಸೆಲ್ ಪ.ಪೂ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಪ್ರಥಮ ಇಂಟಗ್ರೇಟೆಡ್ ಪದವಿಪೂರ್ವ ಶಿಕ್ಷಣ

Suddi Udaya

ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಾಮಾನ್ಯ ಸಭೆ: ರೂ. 6.74 ಲಕ್ಷ ಲಾಭ, ಶೇ.20 ಡಿವಿಡೆಂಟ್

Suddi Udaya

ಬೆಳಾಲು ಶ್ರೀ ಧ. ಮಂ.ಪ್ರೌಢಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕ ಶಂಕರ ಲಿಂಗ ಸ್ವಾಮೀಜಿ ಸಮಾಜ ಸೇವಕ ಡಾ.ರವಿರವರ ಕಚೇರಿಗೆ ಬೇಟಿ

Suddi Udaya
error: Content is protected !!