25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿಯಲ್ಲಿ Vakrangee ಯುಪಿಐ ಮಿನಿ ಎಟಿಎಂ ಕೇಂದ್ರ ಶುಭಾರಂಭ

ಅಳದಂಗಡಿ: ಮುಂಬೈ ಮೂಲದ Vakrangee ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ ಯುಪಿಐ ಮಿನಿ ಎಟಿಎಂ ಕೇಂದ್ರವು ಸ್ವರಾಜ್ ಬಂಗೇರರವರ ಮಾಲಕತ್ವದಲ್ಲಿ ಅಳದಂಗಡಿಯ ಸ್ವರಾಜ್ ಟವರ್ಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ನೂತನ ಎ.ಟಿ.ಎಂ ಕೇಂದ್ರವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರವರು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಳದಂಗಡಿ ಸಂತ ಪೀಟರ್ ಕ್ಲೇವರ್ ಚರ್ಚ್ ನ ಧರ್ಮ ಗುರುಗಳಾದ ರೆ| ಫಾ| ಎಲೈಯಸ್ ಡಿಸೋಜ, ಡಾ.ಎಮ್.ಎನ್ ತುಳುಪುಲೆ, ಸುಲ್ಕೇರಿ ಶ್ರೀ ರಾಮ ಶಾಲೆಯ ಅಧ್ಯಕ್ಷ ರಾಜು , ಕಾಶಿಪಟ್ಣ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಖ್ಯಾತ ನಾಟಿ ವೈದ್ಯರಾದ ಬೇಬಿ ಪೂಜಾರಿ, ಪದ್ಯೋಡಿ ಅಶೋಕ್ ಕೋಟ್ಯಾನ್, ಶಶಿಧರ್ ಶೆಟ್ಟಿ ಅಳದಂಗಡಿ, ನಾರಾವಿ ಹೆಗ್ಡೆ ಫರ್ನಿಚರ್ಸ್ ನ ಮಾಲಕರಾದ ರೋಶನ್ ಹೆಗ್ಡೆ, ದಿ ಕ್ಯಾಪ್ಸಿ ಸಮೂಹ ಸಂಸ್ಥೆಯ ದಕ್ಷಿಣ್ ಭವನ್ ಹೋಟೆಲ್ ನ ಮಾಲಕರಾದ ಅನಿಲ್ ಅಂಚನ್, ಶರತ್ ಚಂದ್ರ, VAKRANGEE ATM ಕೇಂದ್ರದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಖ್ಯಸ್ಥರಾದ ಅಭಿಜಿತ್ ಜೈನ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾದ ಪ್ರವೀಣ್ ರವರು ಭಾಗವಹಿಸಿ ನೂತನ ಯುಪಿಐ ಎಟಿಎಂ ಕೇಂದ್ರಕ್ಕೆ ಶುಭಾಶಂಸನೆಗೈದರು.ಈ ಸಂದರ್ಭದಲ್ಲಿ ಸ್ವರಾಜ್ ಟವರ್ಸ್ ನ ಮಾಲಕರಾದ ಸೋಮನಾಥ ಬಂಗೇರ, ಸ್ವರಾಜ್ ಬಂಗೇರ ಸಹಿತ ಊರ-ಪರ ಊರ ಗ್ರಾಹಕ ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.

ಅಳದಂಗಡಿಯಲ್ಲಿ Vakrangee ಸಂಸ್ಥೆಯ ಪ್ರಪ್ರಥಮ ಯುಪಿಐ ಮಿನಿ ಎಟಿಎಂ ಕೇಂದ್ರವು ಇದಾಗಿದ್ದು ನೂತನ ಎ.ಟಿ.ಎಂ ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡ್ ಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್ ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವಿನೂತನ ವ್ಯವಸ್ಥೆಯು ಇರಲಿದ್ದು ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಅಳದಂಗಡಿ ಮತ್ತು ಆಸುಪಾಸಿನ ಗ್ರಾಮಗಳ ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎ.ಟಿ.ಎಂ ಕೇಂದ್ರದ ಮಾಲಕರಾದ ಸ್ವರಾಜ್ ಬಂಗೇರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Related posts

ಕಳೆಂಜ ಗ್ರಾ,ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಭೆ

Suddi Udaya

ಮಾವಿನಕಟ್ಟೆ ಸಾಂತಾ ಆನ್ನಾ ಮಾತೆಯ ಚಚ್೯ ನಲ್ಲಿ ಸಂಭ್ರಮದ ತೆನೆ ಹಬ್ಬ

Suddi Udaya

103 ವರ್ಷದ ಪಾರ್ವತಮ್ಮ ರಿಂದ ಧಮ೯ಸ್ಥಳಕ್ಕೆ ಪಾದಯಾತ್ರೆ: ಅಜ್ಜಿಯ ದೈವಭಕ್ತಿ ಮತ್ತು ದೇಶಭಕ್ತಿಗೆ ‌ಸಾವ೯ಜನಿಕರ ಮೆಚ್ಚುಗೆ

Suddi Udaya

ಲಾಯಿಲದಲ್ಲಿ ಎಸ್.ಎಂ.ಇ.ಗ್ರೂಪ್ಸ್ ನ ಸಹ ಸಂಸ್ಥೆ “ಯುನಿಕ್ ಎಂಟರ್‌ಪ್ರೈಸಸ್” ಶುಭಾರಂಭ

Suddi Udaya

ಮಾಚಾರು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ  ವರ್ಷಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಬಿಡುಗಡೆ   

Suddi Udaya

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡಿಲು ರವರಿಗೆ ಸನ್ಮಾನ ಮತ್ತು ಪಿಡಿಒ ಸವಿತಾ ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!