25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

ಪಟ್ರಮೆ: ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘ ಅನಾರು ಪಟ್ರಮೆ ಇದರ ನೂತನ ಕಟ್ಟಡ ‘ಕ್ಷೀರ ವಾರಿಧಿ’ಯ ಉದ್ಘಾಟನಾ ಸಮಾರಂಭವು ಡಿ.14 ರಂದು ನಡೆಯಿತು.

ನೂತನ ಕಟ್ಟಡವನ್ನು ಮಂಗಳೂರು ದ.ಕ.ಜಿ.ಸ.ಹಾ. ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಉದ್ಘಾಟಿಸಿದರು.ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ನಿತೇಶ್ ಬಲ್ಲಾಳ್ ದೀಪ ಪ್ರಜ್ವಲನೆಗೈದರು. ನಾಮಫಲಕವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಮಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಪ್ರಭಾಕರ ಆರಂಭೋಡಿ, ವಾಣಿಜ್ಯ ಕೊಠಡಿ, ಹಾಲು ಒಕ್ಕೂಟ ದ ನಿರ್ದೇಶಕ ಚಂದ್ರಶೇಖರ ರಾವ್ ಕಾರ್ಯಾಲಯ, ಹಾಲು ಒಕ್ಕೂಟದ ನಿರ್ದೇಶಕ ಜಯರಾಮ ರೈ ಬಳ್ಳಜ್ಜ ಆಡಳಿತ ಮಂಡಳಿ ಕೊಠಡಿ, ಮಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಶ್ರೀಮತಿ ಸವಿತಾ ಎನ್. ಶೆಟ್ಟಿ ದಾಸ್ತಾನು ಕೊಠಡಿ, ಮಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭರತ್ ನೆಕ್ರಾಜೆ ಹಾಲು ಸಂಗ್ರಹ ಕೊಠಡಿ ಉದ್ಘಾಟಿಸಿದರು.

ನಂತರ ಅನಾರು ದೇವಸ್ಥಾನದ ಸಮರ್ಪಣಾ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದೇವಪಾಲ ಅಜ್ರಿ ಉಳಿಯಬೀಡು ವಹಿಸಿದರು.

ಮುಖ್ಯ ಅತಿಥಿಗಳಾಗಿ ಅನಾರು ದೇವಸ್ಥಾನದ ಮೊಕ್ತೇಸರ ನಿತೇಶ್ ಬಲ್ಲಾಳ್, ಮಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಶಾಸಕ ಹರೀಶ್ ಪೂಂಜ, ಸವಿತಾ ಎನ್. ಶೆಟ್ಟಿ, ಪ್ರಭಾಕರ ಆರಂಬೋಡಿ, ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ರವಿರಾಜ ಉಡುಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಪಟ್ರಮೆ ಗ್ರಾ. ಪಂ. ಅಧ್ಯಕ್ಷ ಮನೋಜ್, ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಉಪಸ್ಥಿತರಿದ್ದರು. ಮಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಸತೀಶ್ ರಾವ್, ಮಂಗಳೂರು ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಜಿತೇಂದ್ರ ಪ್ರಸಾದ್, ಮಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ, ಎಸ್‌ಕೆಡಿಆರ್‌ಡಿಪಿಯ ಯಶೋಧರ ಕುಮಾರ್ ,ಅನಾರು ಸಂಘದ ಉಪಾಧ್ಯಕ್ಷ ಡೀಗಯ್ಯ ಗೌಡ ಉಪಸ್ಥಿತರಿದ್ದರು.

ಒಕ್ಕೂಟದ ವತಿಯಿಂದ ರೂ. 3ಲಕ್ಷದ ಚೆಕ್ ನ್ನು ಒಕ್ಕೂಟದ ಅಧ್ಯಕ್ಷರು ಅನಾರು ಸಂಘದ ಅಧ್ಯಕ್ಷ ದೇವಪಾಲ ಅಜ್ರಿ ಯವರಿಗೆ ನೀಡಿದರು. ಉತ್ತಮ ಕಟ್ಟಡ ನಿರ್ಮಿಸಿ ಕೊಟ್ಟ ಬೆನಕ ಕಂಟ್ರಾಕ್ಟರ್ ಗಣೇಶ್ ಗೌಡ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ನಿರೂಪಕ ಉಪನ್ಯಾಸಕ ಡಾ. ಮಹಾವೀರ ಜೈನ್ ಗೌರವಿಸಲಾಯಿತು. ಹಾಗೂ ಅತೀ ಹೆಚ್ಚು ಹಾಲು ಹಾಕಿದ ಆನಂದ ಗೌಡರನ್ನು ಗೌರವಿಸಲಾಯಿತು.

ಭವ್ಯ ನಿಡ್ವಣ್ಣಾಯ ಹಾಗೂ ಭವ್ಯ ಕಾಯಿಲ ಪ್ರಾರ್ಥಿಸಿದರು. ನಿರ್ದೇಶಕ ರುಕ್ಮಯ್ಯ ಪದಳ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪುರಂದರ ಎಸ್. ಸೂರ್ಯತಾವು ವರದಿ ಮಂಡಿಸಿದರು. ಉಪನ್ಯಾಸಕ ಡಾ. ಮಹಾವೀರ ಜೈನ್ ಮತ್ತು ಶ್ರೀಮತಿ ಸುಧಾಶ್ರೀ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ಮಾತ್ರಡ್ಕ ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ವಿಗೆ ನಿರ್ದೇಶಕರು, ಸದಸ್ಯರು, ಸಿಬ್ಬಂದಿಗಳು ಸಹಕರಿಸಿದರು.

Related posts

ಮಚ್ಚಿನ: ಕಲ್ಲೇರಿ ವಿದ್ಯುತ್ ಸರ್ವಿಸ್ ಸ್ಟೇಷನ್ ನಿoದ ಪಾರೆಂಕಿ ಗ್ರಾಮದ ಮಾರಿಗುಡಿ ವರೆಗೆ ಹೊಸ ಫೀಡರ್‌ ಗೆ ಚಾಲನೆ

Suddi Udaya

ಬೆಳ್ತಂಗಡಿ : ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್ & ಫರ್ನಿಚರ್‍ಸ್‌ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

Suddi Udaya

ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೇಷ ಜಾತ್ರೆಗೆ ಚಾಲನೆ

Suddi Udaya

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ

Suddi Udaya

ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್

Suddi Udaya

ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಸಿಗೆ ಶಿಬಿರ

Suddi Udaya
error: Content is protected !!