ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರು ಸಮೀಪ ಡಿ.14 ರಂದು ನಡೆದಿದೆ.
ಮೃತ ವ್ಯಕ್ತಿ ನೋಯೆಲ್ ಜೋಸೆಫ್ ಪಿಂಟೋ (38ವ) ಮೆಸ್ಕಾಂ ವೇಣೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ತಮ್ಮ ಮನೆಯಲ್ಲಿ ಕೆಲಸದವರಿಗೆ ತಿಂಡಿ ತರಲೆಂದು ಮಡಂತ್ಯಾರಿಗೆ ಬರುತ್ತಿದ್ದ ವೇಳೆ ಕೆ.ಎಸ್.ಆರ್.ಟಿ. ಸಿ ಬಸ್, ಆಟೋ ರಿಕ್ಷಾ ಓವರ್ ಟೇಕ್ ಮಾಡುವ ವೇಳೆಗೆ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ನೋಯೆಲ್ ರವರ ಹೃದಯ ಭಾಗಕ್ಕೆ ಬಲವಾದ ಗಾಯವಾಗಿ ಅವರು ಮೃತಪಟ್ಟಿದ್ದಾರೆ.
ಮೃತರು ತಾಯಿ ಫ್ಲೋರಿನ ಪಿಂಟೋ, ಇಬ್ಬರು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.











