ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಬೃಹತ್ ಹಿಂದೂ ಸಂಗಮ ಆಯೋಜನಾ ಸಮಿತಿ ರಚನೆ

ಉಜಿರೆ: 2026 ಜನವರಿ ಅಂತ್ಯ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ದೇಶಾದ್ಯಂತ ಹಿಂದೂ ಸಂಗಮ ಎನ್ನುವ ಕಾರ್ಯಕ್ರಮ ಜರುಗಲಿದ್ದು ಈ ಬೃಹತ್ ಕಾರ್ಯಕ್ರಮದ ಆಯೋಜನಾ ಸಮಿತಿಯನ್ನು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ರಚಿಸಲಾಯಿತು.
ರಾಷ್ಟಿçÃಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನಲೆ, ರಾಮಮಂದಿರ, ಕುಂಭಮೇಳ ಮೊದಲಾದ ಸಂಗತಿಗಳು ದೇಶದಲ್ಲಿ ಘಟಿಸಿದ ಹಿನ್ನಲೆಯಲ್ಲಿ ದೇಶಾದ್ಯಂತ 60,000 ಸಂಖ್ಯೆಯಲ್ಲಿ ಹಿಂದೂ ಸಂಗಮ ಎನ್ನುವ ಕಾರ್ಯಕ್ರಮ ನಡೆಯಲಿದೆ. ಪ್ರತೀ ಗ್ರಾಮ/ಮಂಡಲ ವ್ಯಾಪ್ತಿಯಲ್ಲಿ ಈ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಲಿದ್ದು ಸಮಿತಿಗಳ ರಚನೆ, ಸ್ಥಳದ ಆಯ್ಕೆ, ಶೋಭಾಯಾತ್ರೆಗಳಿಗಾಗಿ ಭರಪೂರ ಸಿದ್ದತೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ತಾಲೂಕು ಮಟ್ಟದ ಮೂರು ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ವೇಣೂರು, ಉಜಿರೆ, ಬೆಳ್ತಂಗಡಿ ವಲಯವಾರು ಕಾರ್ಯನಿರ್ವಹಿಸಲಿವೆ.

ಈ ಹಿನ್ನಲೆಯಲ್ಲಿ ನಾವೂರು, ಮುಂಡಾಜೆ, ಉಜಿರೆ, ನಿಡ್ಲೆ, ಚಾರ್ಮಾಡಿ, ಧರ್ಮಸ್ಥಳ, ಕೊಕ್ಕಡ ಅರಸಿನಮಕ್ಕಿಯಲ್ಲಿ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದ ತಾಲೂಕು ಗೌರವಾಧ್ಯಕ್ಷರಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯರು ಕಾರ್ಯನಿರ್ವಹಿಸಲಿದ್ದು, ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ ಶ್ರೀನಿವಾಸ ಗೌಡ ಬೆಳಾಲು, ಕಾರ್ಯದರ್ಶಿಯಾಗಿ ಪ್ರಸಾದ್ ಬಿ.ಎಸ್ ಮತ್ತು ಸಹಕಾರ್ಯದರ್ಶಿಯಾಗಿ ಬಾಲಕೃಷ್ಣ ನೈಮಿಷ ಮತ್ತು ಜಯಶ್ರೀ ಅಪ್ರಮೇಯ, ಸಂಯೋಜಕರಾಗಿ ವಿ.ಹಿಂಪ ದಿನೇಶ್ ಚಾರ್ಮಾಡಿ, ಸಹಸಂಯೋಜಕರಾಗಿ ಕೆ. ಪ್ರಶಾಂತ್ ಉಜಿರೆ, ಕೋಶಾಧಿಕಾರಿಯಾಗಿ ಗಣೇಶ್ ಚಾರ್ಮಾಡಿ, ಸಹಕೋಶಾಧಿಕಾರಿಯಾಗಿ ಜನಾರ್ದನ ಕಜೆ ಮತ್ತು ಪ್ರಕಾಶ್ ದೊಂಪದಪಲ್ಕೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಅರ್ಚನಾ ರಾಜೇಶ್ ಪೈ, ಡಾ. ವಂದನಾ ಇರ್ವತ್ರಾಯ ಕಕ್ಕಿಂಜೆ, ಡಾ, ತಾರಾಗಣೇಶ್ ಕೊಕ್ಕಡ, ಸುಬ್ರಾಯ ನಿಡಿಗಲ್, ವೃಷಾಂಕ್ ಖಾಡಿಲ್ಕರ್ ಅರಸಿನಮಕ್ಕಿ, ರೇಣುಕಾಸುಧೀರ್ ಅರಸಿನಮಕ್ಕಿ, ಪವಿತ್ರ ಗುರುಪ್ರಸಾದ್ ಕೊಕ್ಕಡ, ಪ್ರಶಾಂತ್ ಪಟ್ರಮೆ, ಅವಿನಾಶ್ ಧರ್ಮಸ್ಥಳ, ಪ್ರಶಾಂತ್ ಜೈನ್ ಉಜಿರೆ, ಮಚ್ಚೇಂದ್ರನಾಯಕ್ ಕಡಿರುದ್ಯಾವರ, ನಾರಾಯಣ ಮಲೆಯಡ್ಕ, ರಜನಿ ಸೋಮಂತಡ್ಕ, ನರೇಂದ್ರ ಕೋಲೋಡಿ, ವಿಜಯಾ ನಿಡಿಗಲ್, ವಸಂತ ಕಲ್ಲಾಜೆ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘಚಾಲಕರಾದ ಕೆ. ವಿನಯಚಂದ್ರ ಸಮಿತಿಯನ್ನು ವಿದ್ಯುಕ್ತವಾಗಿ ಘೋಷಿಸಿದರು. ಮಂಗಳೂರು ವಿಭಾಗ ಸಹಸೇವಾ ಪ್ರಮುಖರಾದ ಡಾ. ಮನೋಜ್ ಸುಳ್ಯ ಹಿಂದೂ ಸಂಗಮದ ಆಶಯ ಮತ್ತು ಕಾರ್ಯಕ್ರಮ ಯೋಜನೆಯ ಕುರಿತು ಪ್ರಸ್ತಾವನೆಗೈದು ಮಂಡಲವಾರು ಸಮಿತಿಗಳ ರಚನೆ, ಶೋಭಾಯಾತ್ರೆಯ ಆಯೋಜನೆ, ಕಾರ್ಯಕ್ರಮದ ಸ್ವರೂಪಗಳ ಕುರಿತಾಗಿ ಮಾಹಿತಿ ನೀಡಿದರು. ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ, ಕೆ. ಪ್ರಶಾಂತ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ವಿಭಾಗ ಘುಮಂತು ಸಹಸಂಯೋಜಕ್ ಸುದರ್ಶನ್ ವಿ ಕನ್ಯಾಡಿ, ಸೇವಾ ಪ್ರಮುಖ್ ವಿಜಯ್ ಅರಳಿ ತಾಲೂಕು ಕಾರ್ಯವಾಹಕ ರಾಜೇಶ್ ತೋಟತ್ತಾಡಿ, ಸಹಕಾರ್ಯವಾಹಕ ತಿಲಕ್ ಅನಾರು, ಸೇವಾಭಾರತಿಯ ವಿನಾಯಕ ರಾವ್ ಕನ್ಯಾಡಿ, ಸೀತಾರಾಮ್ ಬೆಳಾಲ್, ವಿಹಿಂಪ ನವೀನ್ ನೆರಿಯ, ರಾಷ್ಟç ಸೇವಿಕಾ ಸಮಿತಿ ಜಿಲ್ಲಾ ಕಾರ್ಯವಾಹಿಕಾ ವೇದಾವತಿ ಜನಾರ್ದನ ಕಜೆ, ಬಿ.ಎಂ.ಎಸ್ ಜಯರಾಜ್ ಸಾಲ್ಯಾನ್, ಕುಮಾರನಾಥ್ ಸಂತೋಷ್ ಅತ್ತಾಜೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Related posts

ಮುಂಡಾಜೆ: ನಿವೃತ್ತ ಉಪನ್ಯಾಸಕ ಗೋಪಾಲಕೃಷ್ಣ ಡೋಂಗ್ರೆ ನಿಧನ 

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ರಾಣೆಬೆನ್ನೂರಿನ ಚೈತ್ರಾರಿಗೆ ಗಾಲಿಕುರ್ಚಿ ವಿತರಣೆ

Suddi Udaya

ಸಬ್ ಸ್ಟೇಷನ್ಗಳನ್ನು ನಿರ್ಮಿಸಿ ಬೆಳ್ತಂಗಡಿ ತಾಲೂಕಿನ ಜನರಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಅಭಿವೃದ್ದಿ ಪಡಿಸಬೇಕೆಂದು ಶಾಸಕ ಹರೀಶ್ ಪೂಂಜರಿಂದ ಇಂಧನ ಸಚಿವರಿಗೆ ಮನವಿ

Suddi Udaya

ಮಾ.10: ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವ: ಹುಣ್ಸೆಕಟ್ಟೆಯಲ್ಲಿ ಪೂರ್ವಭಾವಿ ಸಭೆ

Suddi Udaya

ವಾಲಿಬಾಲ್ ಪಂದ್ಯಾಟ; ಯಕ್ಷಿತ ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಜಯವಿಕ್ರಮ್ ಕಲ್ಲಾಪು

Suddi Udaya
error: Content is protected !!