September 24, 2026
ಚಿತ್ರ ವರದಿತಾಲೂಕು ಸುದ್ದಿ

ಡಿ.20-21: ಮಡಂತ್ಯಾರ್ ನಲ್ಲಿ ಕ್ಯಾಂಪೋರಿ 2025- 26

ಮಡಂತ್ಯಾರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ನಿರ್ದೇಶನದಡಿಯಲ್ಲಿ, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರ್ ಇದರ ನೇತೃತ್ವದಲ್ಲಿ ಡಿ.20 ಮತ್ತು 21ರಂದು ಮಡಂತ್ಯಾರು “ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ( ಕ್ಯಾಂಪೋರಿ 2025- 26)2025 26 ನೇ ಸಾಲಿನ ರೋವರ್ಸ್ ರೇಂಜರ್ಸ್ ಸಮಾಗಮ, ಸೈಟ್ಸ್ – ಗೈಡ್ಸ್ ಮೇಳ ಮತ್ತು ಕಬ್- ಬುಲ್ ಬುಲ್ಸ್ ಉತ್ಸವ ನಡೆಯಲಿದೆ.

ಈ ಕ್ಯಾಂಪೋರಿಯಲ್ಲಿ ಧ್ವಜಾರೋಹಣ, ಧ್ವಜ ಸ್ಥಂಭ ರಚನೆ, ಸುಧಾರಿತ ಗುಡಾರ ರಚನೆ, ಗ್ಯಾಡ್ಜ್ಟ್ ತಯಾರಿ, ಬೆಂಕಿ ಬಳಸದೆ ಅಡುಗೆ ತಯಾರಿ, ಕರಕುಶಲ ವಸ್ತುಗಳ ತಯಾರಿ, ಗ್ರೀಟಿಂಗ್ ಕಾರ್ಡ್ ತಯಾರಿ, 2026 ನೇ ಸಾಲಿನ ಕ್ಯಾಲೆಂಡರ್ ತಯಾರಿ, ಗಾಳಿಪಟ ತಯಾರಿ, ಕಬ್ ವಂದನೆ, ಬುಲ್ ಬುಲ್ಸ್ ರಿಂಗ್, ಪೇಪರ್ ಕ್ರಾಪ್ಟ್, ಧಾನ್ಯದಿಂದ ಆಕೃತಿ ತಯಾರಿ, ಚಿತ್ರ ರಚನೆ, ಮುಂತಾದ ವಿವಿಧ ಕೌಶಲ್ಯ ಚಟುವಟಿಕೆಗಳು, ಸಾಹಸಮಯ ಚಟುವಟಿಕೆಗಳು, ಬೈಂಡ್ ಗೇಮ್, ಪಥಸಂಚಲನ, ನಗರ ಮೆರವಣಿಗೆ, ಶಿಬಿರಾಗ್ನಿ, ಸರ್ವಧರ್ಮ ಪ್ರಾರ್ಥನೆ, ಹೊರ ಸಂಚಾರ, ಈ ರೀತಿ ಹತ್ತು ಹಲವಾರು ಕಾರ್ಯಕ್ರಮಗಳು ನಡೆಯಲಿವೆ.

ಈ ಕಾರ್ಯಕ್ರಮಗಳಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಸೌಟ್ -ಗೈಡ್ ಮುಖ್ಯ ಆಯುಕ್ತರಾದ ಡಾ| ಎಂ ಮೋಹನ ಆಳ್ವ, ಶ್ರೀ ಕ್ಷೇತ್ರ ಬಳ್ಳಮಂಜದ ಆಡಳಿತ ಮೊಕೇಸರರಾದ ಡಾಕ್ಟರ ಹರ್ಷ ಸಂಪಿಗೆತ್ತಾಯಾ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಮಡಂತ್ಯಾರ್‌ನ ಉದ್ಯಮಿ ಪ್ರಶಾಂತ ಶೆಟ್ಟಿ, ಮಡಂತ್ಯಾರ್ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶ್ರೀಮತಿ ರೂಪಾ ನವೀನ್ ಕೊಡ್ಲಕ್ಕೆ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಸೈಟ್- ಗೈಡ್ ಮಡಂತ್ಯಾರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್‌ರವರು ಮತ್ತು ರ್ಯಾಲಿ ನಿರ್ದೇಶಕರಾದ ಚಿದಾನಂದರವರು ಪತ್ರಿಕ ಹೇಳಿಕೆಯಲ್ಲಿ ತಿಳಿಸಿರುತ್ತಾರೆ

Related posts

ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಜೈನ ಮತ್ತು ಹಿಂದೂ ಸಮುದಾಯಗಳ ನಡುವೆ ಅಶಾಂತಿಯನ್ನು ಪ್ರೇರೇಪಿಸುವ ಭಾಷಣ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಜಿರೆಯ ಅಜಿತ್ ಹೆಗ್ಡೆಯವರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಎಂ. ಗಂಗಾಧರ ಮಿತ್ತಮಾರ್, ಪ್ರಧಾನ ಸಂಚಾಲಕರಾಗಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೇಮಕ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನಿಯೋಗದಿಂದ ಹೈಕೋರ್ಟ್ ರಿಜಿಸ್ಟ್ರಾರ್ ರಾಧಾ ರವರ ಭೇಟಿ; ನೂತನ ನ್ಯಾಯಾಲಯ ಸಂಕೀರ್ಣ ಶಂಕು ಸ್ಥಾಪನೆಯ ರೂಪುರೇಷೆಗಳ ಬಗ್ಗೆ ಚರ್ಚೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಬಂಟ ಕ್ರೀಡೋತ್ಸವ

Suddi Udaya

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ‘ಶ್ರೀಮುಖ ಪತ್ರಿಕೆ’ ಬಿಡುಗಡೆ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಸ್ತ್ರೀ ಆರೋಗ್ಯ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!