38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಡಿ.26-27: ಕುದ್ಕೋಳಿಕಟ್ಟೆ ಗರಡಿ ವರ್ಷಾವಧಿ ಜಾತ್ರೋತ್ಸವ

ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಮತ್ತು ಪುತ್ತಿಲ ಗ್ರಾಮದ ಕುದ್ಕೋಳಿಕಟ್ಟೆ ಧರ್ಮರಸು, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಗರಡಿ ಮತ್ತು ಸಹಪರಿವಾರಗಳ ಕೇತ್ರದ ವರ್ಷಾವಧಿ ಜಾತ್ರೋತ್ಸವ ಡಿ.26ರಿಂದ 27ರವರೆಗೆ ಜರುಗಲಿದೆ.

ಡಿ.26 ರಂದು ಕೊಳಿಗುಂಟ, ಗೊನೆಮೂಹರ್ತ, ಗಣಪತಿ ಹವನ, ಸ್ಥಳ ಶುದ್ಧಿ, ಭಂಡಾರ ಇಳಿದು ತೋರಣ ಮೂಹರ್ತ, ಧ್ವಜಾರೋಹಣ, ಸಾನಿಧ್ಯಗಳಿಗೆ ಪರ್ವ ಸೇವೆ, ಕೊಡಮಣಿತ್ತಾಯ ದೈವಕ್ಕೆ ಹೂವಿನ ಪೂಜೆ, ಬಲಿ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಡಿ.27ರಂದು ಬ್ರಹ್ಮಬೈದರ್ಕಳ ಗರಿಯಕೆ ಭಕ್ತ ಹಾಕುವುದು, ಬಲಿ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಡಿ.26ರಂದು ಕೊಡಿಮರದ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಡಿ.26: ಕೊಡಿಮರದ ಭವ್ಯ ಮೆರವಣಿಗೆ, ಧರ್ಮರಸು, ಕೊಡಮಣಿತ್ತಾಯ ದೈವದ ನೇಮೋತ್ಸವ.
ಡಿ.27: ಬ್ರಹ್ಮಬೈದರ್ಕಳ ಗರಡಿ ಇಳಿಯುವುದು, ಮಾಣಿಬಾಲೆ ನೇಮೋತ್ಸವ.
ಜ.1: ಗರಡಿ ವಠಾರದಲ್ಲಿ ಗೆಜ್ಜೆಗಿರಿ ಮೇಳದದಿಂದ ಕೋಟಿ-ಚೆನ್ನಯ ಯಕ್ಷಗಾನ ಬಯಲಾಟ.

Related posts

ಹದಗೆಟ್ಟಿರುವ ಮಲ್ಲೊಟ್ಟು – ಹರ್ಪಳ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಮೊಗ್ರು: ಶ್ರೀರಾಮ ಶಿಶು ಮಂದಿರದಲ್ಲಿ ವನಮಹೋತ್ಸವ

Suddi Udaya

ಕೊಕ್ಕಡ ಸರಕಾರಿ ಪ್ರೌಢಶಾಲೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘ ರಚನೆ

Suddi Udaya

ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ಎಂಬಲ್ಲಿ ನಡೆದ ದುರ್ಘಟನೆ ವಿದ್ಯುತ್ ತಂತಿ ಸ್ಪರ್ಶಿಸಿ ವೀರಪ್ಪ ಎಂಬವರು ಮೃತ್ಯು

Suddi Udaya

ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ಜೇಸಿಐ ಭಾರತ ವಿದ್ಯಾರ್ಥಿವೇತನ

Suddi Udaya

ನೆರಿಯ ಬಾಲಕ್ಕ ಶೆಟ್ಟಿ ನಿಧನ

Suddi Udaya
error: Content is protected !!