32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳೆಂಜ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾ ಮಂಡಳಿ ಸಭೆ

ಕಳೆಂಜ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾ ಮಂಡಳಿ ಸಭೆ ಉಮಾಮಹೇಶ್ವರ ದೇವಸ್ಥಾನದ ಶಿವಪಾರ್ವತಿ ಸಭಾಭವನದಲ್ಲಿ ನಡೆಯಿತು.

ವೇದಿಕೆಯಲ್ಲಿ ಪಶು ವೈದ್ಯಾಧಿಕಾರಿ, ಕಳೆಂಜ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಯತೀಶ್ ಎಮ್ ಎಸ್ ದೀಪ ಪ್ರಜ್ವಾಲನೆಗೊಳಿಸಿದರು. ಅಧ್ಯಕ್ಷತೆಯನ್ನು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ವಹಿಸಿದರು.

ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಹೆಚ್ ಪಿ ಇವರು ಅರಣ್ಯದ ಮಹತ್ವದ ಬಗ್ಗೆ ವಿವರಿಸಿದರು.
ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಅನಂದ ಗೌಡ ಮರಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆ ಕೈ ಜೋಡಿಸಿದ ಮೋಹನ್ ಮಿಯಾರು ಇವರನ್ನು ಸನ್ಮಾನಿಸಲಾಯಿತು. ಅರಣ್ಯ ಸಮಿತಿ ಕಾರ್ಯದರ್ಶಿ ಹಾಗೂ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್ ವರದಿ ಮಂಡಿಸಿದರು.

ಸಚಿನ್ ಅರಣ್ಯ ರಕ್ಷಕರು ಹಾಗೂ ಮಾಜಿ ಪಂಚಾಯತ್ ಸದಸ್ಯರಾದ ಹರೀಶ್ ಕೊಯಿಲ, ಮಾಜಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಕುಲಾಡಿ, ಕಾರ್ಯಕಾರಿಣಿ ಸದಸ್ಯರಾದ ಪುಷ್ಪ ಬೊಟ್ಟು, ಪ್ರಸನ್ನ ಮಣಿಗೆರಿ, ಗಿರಿಜ ನಿಡ್ಡಾಜೆ, ಸುಶೀಲಾ ಮುಡ್ಯಲಗುರಿ, ವಿಶ್ವನಾಥ ಕುಂಟ್ಯಾನ ಉಪಸ್ಥಿತರಿದ್ದರು.

ನಿತ್ಯಾನಂದ ರೈ ಗುತ್ತಿಮಾರ್ ಸ್ವಾಗತಿಸಿ, ಶ್ರೀಧರ್ ಉದ್ರಜೆ ನಿರೂಪಿಸಿ, ಜನಾರ್ಧನ ಕಲ್ಕಟ ವಂದಿಸಿದರು.

Related posts

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ “ಮಕ್ಕಳಿಗಾಗಿ ಕಥೆ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಶಾಲೆಯ ವಿದ್ಯಾರ್ಥಿಗಳು ಬುಲ್ ಬುಲ್ಸ್ ಗೀತಾ ಗಾಯನದಲ್ಲಿ ದ್ವಿತೀಯ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಐತಿಹಾಸಿಕ “ಧರ್ಮಯಾನ” ಶೋಭಾಯಾತ್ರೆ: ಉಜಿರೆ ಉದ್ಯಮಿ ಕೆ. ಮೋಹನ್ ಕುಮಾರ್ ಅವರಿಗೆ “ಶ್ರೀ ಜನಾರ್ಧನ ವಿಭೂಷಣ ಗೌರವ”

Suddi Udaya

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹುಟ್ಟುಹಬ್ಬ: ನಾಗೇಶ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊಕ್ಕಡ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ ಅಂಗನವಾಡಿ ಕೇಂದ್ರದಲ್ಲಿ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ರಂಜಿತ್ ಹೆಚ್ ಡಿ ಬಳಂಜ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ

Suddi Udaya
error: Content is protected !!