25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ ನಿಂದ ಕ್ರಿಸ್ಮಸ್ ಆಚರಣೆ

ಬೆಳ್ತಂಗಡಿ : ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆ ಡಿ. 20 ರಂದು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪರಾಜ್ ವಹಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ|ಫಾ| ಬಿನೋಯಿ ಎ ಜೆ ಪ್ರಾಸ್ತಾವಿಕ ನುಡಿಯನ್ನಾಡಿದರು. ಮುಖ್ಯ ಅತಿಥಿಯಾಗಿ ಸೈಂಟ್ ಮೇರಿ ಚರ್ಚ್ ಇದರ ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಎಬಿನ್ ಕುರಿಯನ್ ಕ್ರಿಸ್ಮಸ್ ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂದೇಶ ನೀಡಿದರು.

ಸಿಸ್ಟರ್ ಲೀನಾ ಮದರ್ ಸುಪಿರಿಯರ್ ಕುಟ್ರುಪ್ಪಾಡಿ ಕಾನ್ವೆಂಟ್, ಮಾತೃವೇದಿ ಸಂಘಟನೆಯ ಸಂಯೋಜಕರು ಮತ್ತು ಬೆಳ್ತಂಗಡಿ ಧರ್ಮಪ್ರಾಂತ್ಯದ ಪಿ.ಆರ್.ಒ ಹಾಗೂ ಮೀಡಿಯಾ ಅಪೋಸ್ಟೆಲೆಟ್ ಇದರ ನಿರ್ದೇಶಕರಾದ ವಂದನೀಯ ಫಾದರ್ ಮ್ಯಾಥ್ಯೂ ತಾಯೆ ಕಾಟೀಲ್ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮಾತೃವೇದಿ ಸಂಘಟನೆಯ ಅಧ್ಯಕ್ಷರು , ಅತಿಥಿ ಗಣ್ಯರು ಹಾಗೂ ಪದಾಧಿಕಾರಿಗಳು ನವಜೀವನ ಆರೈಕೆ ಬೆಂಬಲ ಕೇಂದ್ರದ ಸದಸ್ಯರಿಗೆ ಕ್ರಿಸ್ಮಸ್ ಕೇಕ್ ಮತ್ತು ಧನಸಹಾಯ ನೀಡಿದರು. ಮಾತೃವೇದಿ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ವಲ್ಸಮ್ಮ ಎ ಜೆ ಇವರು ನವಜೀವನ ಲಕ್ಕಿ ಪರ್ಸನ್ ಆಫ್ ದಿ ಇಯರ್ 2025 ವಿಜೇತರಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮಾತೃವೇದಿ ಸಂಘಟನೆ ಸದಸ್ಯರು ಮತ್ತು ನವಜೀವನ ಆರೈಕೆ ಬೆಂಬಲ ಕೆಂದ್ರದ ಸದಸ್ಯರು ಹಾಡನ್ನು ಹಾಡಿದರು.
ಡಿ.ಕೆ.ಆರ್.ಡಿ.ಎಸ್.ಸಂಸ್ಥೆಯ ವಿದ್ಯಾನಿಧಿ ಯೋಜನೆಯ ಸಂಯೋಜಕಿಯಾದ ಶ್ರೀಮತಿ ಜಿನಿ ಪಿಜೆ ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್.ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿ ಸೋಜ ವಂದಿಸಿದರು. ಯೋಜನೆಯ ಸಂಯೋಜಕಿ ಕುಮಾರಿ ಶ್ರೇಯರವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಪೆರೋಡಿತ್ತಾಯಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಪುಸ್ತಕ ವಿತರಣೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನ ಪ್ರಶಸ್ತಿಯ ಗೌರವ

Suddi Udaya

ಇಳ0ತಿಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಸುರೇಶ್ ಗೌಡ ಆಯ್ಕೆ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾರದೋತ್ಸವ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮತದಾನದ ಜಾಗೃತಿ

Suddi Udaya
error: Content is protected !!