25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಸಭೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಸಭೆಯನ್ನು ಶ್ರೀ ಮಂಜುನಾಥ ಸ್ವಾಮಿ ಸಭಾಭವನ ಬೆಳ್ತಂಗಡಿಯಲ್ಲಿ ಆಯೋಜಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಕರಾವಳಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಗೊಂಡು ಇಂದು ಕರ್ನಾಟಕ ರಾಜ್ಯದ್ಯಂತ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಪ್ರತಿಯೊಬ್ಬರ ಕಷ್ಟದ ಬದುಕಿಗೆ ನೆರವಾಗಿ,ಇಂದು ಪ್ರತಿಯೊಬ್ಬರ ಬದುಕಿನ ಆಧಾರ ಕಂಬವಾಗಿದೆ.

ಈ ಸಂದರ್ಭ ಯೋಜನೆಯ ವತಿಯಿಂದ ಪ್ರಥಮದಿಂದ ಅನುಷ್ಠಾನಿಸಿದ ಕಾರ್ಯಕ್ರಮಗಳು, ಇಂದು ಪ್ರತಿಯೊಂದು ಸಂಘದ ಸದಸ್ಯರ ಹಾಗೂ ಒಕ್ಕೂಟದವರ ಸಹಕಾರದೊಂದಿಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮದ ಹಾಗೂ ಜನರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರವನ್ನು ನೀಡುತ್ತಿದ್ದು,ಇಂದು ಅನೇಕ ಕುಟುಂಬದ ಬದುಕಿಗೆ ಯೋಜನೆಯು ಬೆಳಕಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತನ್ನ ನಿಸ್ವಾರ್ಥವಾದ ಸೇವೆಯನ್ನು ನೀಡಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ಶಕ್ತಿಯಾಗಿ ನಿಂತು ಇಂದು ಗ್ರಾಮ ಮಟ್ಟದಲ್ಲಿ ಯೋಜನೆಯ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಿಸಲು ನೀಡುತ್ತಿರುವ ಸಹಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿಯವರು, ಒಕ್ಕೂಟದ ವತಿಯಿಂದ ಮುಂದಕ್ಕೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಯಾವ ರೀತಿಯಲ್ಲಿ ಅನುಷ್ಠಾನವನ್ನು ಮಾಡಬಹುದು ಎನ್ನುವ ಬಗ್ಗೆ ಪದಾಧಿಕಾರಿಗಳೊಂದಿಗೆ ಸಂವಾದವನ್ನು ಮಾಡಿಕೊಂಡು ಮಾಹಿತಿಯನ್ನು ನೀಡಿದರು,
ಯೋಜನಾಧಿಕಾರಿಗಳಾದ ಯಶೋಧರ್ ರವರು ತಾಲೂಕಿನಲ್ಲಿ ಕಾರ್ಯಕ್ರಮದ ಅನುಷ್ಠಾನದ ಸಾಧನೆಯ ಬಗ್ಗೆ ವರದಿಯನ್ನು ಮಂಡಿಸಿದರು.

ಕೇಂದ್ರ ಸಮಿತಿಯ ಅಧ್ಯಕ್ಷರಾದ ಸೀತಾರಾಮ್ ಆರ್ ಬೆಳ್ತಂಗಡಿ ಇವರು ಯೋಜನೆಯು ಕೇವಲ ಸಂಘದ ಮೂಲಕ ಬ್ಯಾಂಕಿನಿಂದ ಆರ್ಥಿಕ ವ್ಯವಹಾರಗಳನ್ನು ಸದಸ್ಯರಿಗೆ ಮಾಡಿಸದೆ, ಸದಸ್ಯರ ಪ್ರತಿ ಕಷ್ಟಗಳಿಗೆ ಬೆನ್ನೆಲುಬಾಗಿ ನಿಂತು ಅನೇಕ ಸಮುದಾಯದ ಕಾರ್ಯಕ್ರಮಗಳನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದರಿಂದ ಅನೇಕ ಕುಟುಂಬದ ಬದುಕಿಗೆ ಬೆಳಕಾಗಿದ್ದು,ಈ ಕಾರ್ಯಕ್ರಮದ ಯಶಸ್ವಿಗೆ ಶಕ್ತಿಯಾಗಿ ನಿಂತಿರುವ ಯೋಜನೆಯ ಅಧ್ಯಕ್ಷರು ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನಿಸದು ಸಹಕಾರವನ್ನು ನೀಡುತ್ತಿರುವ ಎಲ್ಲ ಒಕ್ಕೂಟದ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭ ತಾಲೂಕಿನ 9 ಒಕ್ಕೂಟದ ವಲಯದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ತಾಲೂಕಿನ ಎಲ್ಲ ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಯುವ ವಕೀಲರ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಂಡಿಗ ಗುತ್ತು ಶ್ರೀ ನಾಗಬ್ರಹ್ಮ ಸನ್ನಿದಿ ಹಾಗೂ ರಕ್ತೇಶ್ವರಿ ಕೊಡಮಣಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಚಾವಡಿ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಅಪಾಯಕಾರಿ ಸ್ಥಳಗಳಲ್ಲಿರುವ ಮನೆಗಳಲ್ಲಿರುವವರಿಗೆ ಗ್ರಾಮ ಪಂಚಾಯತಿನಿಂದ ನೋಟೀಸು

Suddi Udaya

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಶಾಸಕ ಹರೀಶ್ ಪೂಂಜರವರ ಪ್ರಯತ್ನದಿಂದ ಮಾಲಾಡಿ ಗ್ರಾಮದ ಊರ್ಲ ರಸ್ತೆಯ ಕಾಂಕ್ರೀಟಿಕರಣ

Suddi Udaya

ಉಜಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುನರ್ ನಿರ್ಮಾಣ ಯಶೋನಮನ ಶೀರ್ಷಿಕೆಯಡಿಅಭಿವೃದ್ಧಿ ಕಾರ್ಯಗಳ ಹಸ್ತಾಂತರ

Suddi Udaya
error: Content is protected !!