September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬದನಾಜೆ ಶಾಲಾ ಅಮೃತ ಮಹೋತ್ಸವ: ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

ಉಜಿರೆ: ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲಾ ಅಮೃತ ಮಹೋತ್ಸವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಡಿ. 21ರಂದು ಸಂಜೆ ನಡೆಯಿತು.

ಅಧ್ಯಕ್ಷತೆಯನ್ನು ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಯ್ಯ ಗೌಡ ಮಾಚಾರು ವಹಿಸಿದ್ದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಪ್ರಧಾನ ಭಾಷಣ ಗೈದರು. ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಹಿರಿಯ ವಿದ್ಯಾರ್ಥಿ ನಿವೃತ್ತಿ ಶಿಕ್ಷಕ ಬಾಬು ಗೌಡ ಬಾಜಿಮಾರು, ಮಂಗಳೂರು ಸತೀಶ್ ಪೈ ಸ. ಪ್ರದ ಕಾಲೇಜು ಮುಖ್ಯ ಸ್ಥ ಮಹಮ್ಮದ್ ಇಟ್ಬಾಲ್, ಉಜಿರೆ ವಿಶಾಲ್ ಸೇವಾ ಟ್ರಸ್ಟ್ ಮ್ಯಾನೇನಿಂಗ್ ಟ್ರಷ್ಟಿ ವಲೇರಿಯನ್ ಡಿಸೋಜ, ಕುಂದಾಪುರ ಸ. ಪ್ರ. ದ. ಕಾಲೇಜು ಸಹಾಯಕ ಉಪನ್ಯಾಸಕಿ ರೋಹಿಣಿ ಗುರುಪ್ರಸಾದ್, ಶಾಲಾ ಎಸ್ ಡಿ ಎಂ ಸಿ ಮಾಜಿ ಉಪಾಧ್ಯಕ್ಷೆ ಬಾಬಿತಾ ಮೋರಸ್, ಉಜಿರೆ ಎಸ್ ಡಿ ಎಂ. ಕಾಲೇಜು ಉಪನ್ಯಾಸಕ ಮಹೇಶ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.

ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಗಿರಿರಾಜ ಬಾರಿತ್ತಾಯ, ಪ್ರಧಾನ ಕಾರ್ಯದರ್ಶಿ ಮುಖ್ಯ ಶಿಕ್ಷಕ ನಿರಂಜನ್, ಶಾಲಾ ಎಸ್ ಡಿ ಎಂ. ಸಿ ಅಧ್ಯಕ್ಷ ಅನಿಲ್‌ ಡಿಸೋಜ, ಪ್ರೌಢ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಅರುಣಾಕ್ಷಿ, ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಪೀತಾಂಬರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕರಿಸಿದ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್, ಎಸ್. ಡಿ. ಎಂ. ಸಿ ಅಧ್ಯಕ್ಷ ಅನಿಲ್‌ ಡಿಸೋಜ, ಮಾಜಿ ಅಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯ ಇಲಿಯಾಸ್ ಬಿ. ಎಂ, ಸುಜ್ಞಾನ ನಿಧಿ ಯೋಜನೆ ಸಂಚಾಲಕ ಸುಂದರ ಬಂಗೇರ, ಸಹ ಸಂಚಾಲಕ ಸೋಮಶೇಖರ್ ಗೌಡ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕಿ ರಾಜೇಶ್ವರಿ ಪ್ರಾರ್ಥನೆ ಗೈದರು. ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಸುರೇಶ್ ಮಾಚಾರು, ಮೋಹನ್ ಪರಂಗಾಜೆ ಸನ್ಮಾನಿತರನ್ನು ಪರಿಚಯಿಸಿದರು. ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗೌರವ ಶಿಕ್ಷಕಿ ಅರುಣಾಕ್ಷಿ ವಿವರ ನೀಡಿದರು. ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಉಜಿರೆ ಎಸ್. ಡಿ. ಎಂ. ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಎಸ್. ಡಿ. ಎಂ. ಕಲಾ ವೈಭವ ನಡೆಯಿತು. ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಸುರೇಶ್ ಮಾಚಾರು ಸ್ವಾಗತಿಸಿ, ಶಿಕ್ಷಕ ರಾಮಕೃಷ್ಣ ಭಟ್, ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಎಸ್‌.ಡಿ.ಎಂ.ಸಿ ಅಧ್ಯಕ್ಷ ಅನಿಲ್ ಡಿಸೋಜ ವಂದಿಸಿದರು.

Related posts

ಆರಂಬೋಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ: 500ಕ್ಕಿಂತ ಹೆಚ್ಚು ಜನರು ವಿವಿಧ ರೀತಿಯ ಆರೋಗ್ಯ ತಪಾಸಣೆ ಮಾಡಿದ್ದು ವಿಶೇಷವಾಗಿತ್ತು

Suddi Udaya

ನಿಡ್ಲೆ ಗ್ರಾ.ಪಂ. ವ್ಯಾಪ್ತಿಯ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ

Suddi Udaya

ಪಡ್ಡಂದಡ್ಕದಲ್ಲಿ ಶ್ರೀ ಮಂಜುನಾಥೇಶ್ವರ ಕುಣಿತ ಭಜನಾ ಮಂಡಳಿಗೆ ಚಾಲನೆ

Suddi Udaya

ರಾಜ್ಯ ಮಟ್ಟದ ಕರಾಟೆ: ಉಜಿರೆ ಅನುಗ್ರಹ ಆಂ.ಮಾ. ಶಾಲೆಯ ಮೊಹಮ್ಮದ್ ರಈಸ್ ರಿಗೆ ಚಿನ್ನದ ಪದಕ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya

ಉಜಿರೆ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ ; ಸರ್ವಧರ್ಮ ಸಮನ್ವಯ ಸಭೆ

Suddi Udaya
error: Content is protected !!