25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆಯ ವಾರ್ಷಿಕ ಮಹಾಸಭೆ

ಉಜಿರೆ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಇದರ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆಯು ಎಸ್. ಪಿ ಆಯಿಲ್ ಮಿಲ್ ವಠಾರದಲ್ಲಿ ಡಿ. 21ರಂದು ಜರಗಿತು.

ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಅಧ್ಯಕ್ಷತೆ ವಹಿಸಿ ಮಾತನಾಡಿ ಯುವ ಜನರು ನಾಯಕತ್ವ ವಹಿಸಿ ಸಂಘವನ್ನು ಮುಂದಕ್ಕೆ ಬೆಳೆಸಬೇಕು ಮತ್ತು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂದು ಹೇಳಿದರು.

ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ರಂಜನ್ ಜಿ ಗೌಡ, ಯುವ ವೇದಿಕೆಯ ಅಧ್ಯಕ್ಷರಾದ ಅನಿಲ್ ಗೌಡ ಅಂತರ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಅಪರ್ಣ ಶಿವಕಾಂತ ಗೌಡ ಸಭೆಯನ್ನುದ್ದೆಶಿಸಿ ಮಾತನಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ ವರದಿ ವಾಚಿಸಿದರು. ಸಂಘದ ಕೋಶಾಧಿಕಾರಿ ರಾಘವೇಂದ್ರ ಗೌಡ ಪೊದುoಬಿಲ ಲೆಕ್ಕಪತ್ರ ಮಂಡನೆ ಮಾಡಿದರು.
ಯುವ ವೇದಿಕೆಯ ಕಾರ್ಯದರ್ಶಿಯಾದ ನಿರಂಜನ್ ಗೌಡ ಸುರುಳಿ, ಮಹಿಳಾ ಯುವ ವೇದಿಕೆಯ ಅಧ್ಯಕ್ಷೆ ಅನುಪಮಾ ಸತೀಶ್ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಫೆಬ್ರವರಿ 1-2026 ರಂದು ನೀರಚಿಲುಮೆಯಲ್ಲಿ ನಡೆಯಲಿರುವ ಧರ್ಮಸ್ಥಳ ಗ್ರಾಮ ಸಮಿತಿಯ ವಾಲಿಬಾಲ್ ಟೂರ್ನಮೆಂಟ್ ನ ಕಾಗದ ಬಿಡುಗಡೆ ಮಾಡಲಾಯಿತು.

ಮಮತ ಶಿವರಾಮ ಗೌಡ ಪ್ರಾರ್ಥಿಸಿದರು. ಸಹಕಾರಿಯ ನಿರ್ದೇಶಕರಾದ ಭರತ್ ಗೌಡ ಹಾನಿಬೆಟ್ಟು ಸ್ವಾಗತಿಸಿ, ಸಂಘದ ಉಪಾಧ್ಯಕ್ಷರಾದ ಸುರೇಶ್ ಗೌಡ ಕೂಡಿಗೆ ವಂದಿಸಿದರು.ಯಶೋಧ ರಾಘವೇಂದ್ರ ಗೌಡ ಪೊದುoಬಿಲ ಮತ್ತು ಸಿಬ್ಬಂದಿಯಾದ ಗೀತಾ ಚಿದಾನಂದ ಗೌಡ ಕಾರ್ಯಕ್ರಮ ನಿರೂಪಿಸಿದರು.

Related posts

ಚಾರ್ಮಾಡಿ ಪಂಚಾಯತ್ ನಲ್ಲಿ ಉಚಿತ ದಂತ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Suddi Udaya

ವಿದ್ಯಾರ್ಥಿ ಕೀರ್ತನ್ ಕೈಚಳಕದಿಂದ ಸಾಸಿವೆಯಲ್ಲಿ ಮೂಡಿದ`ಭಗತ್ ಸಿಂಗ್’ ಚಿತ್ರ :ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ

Suddi Udaya

ರಾಜ್ಯಮಟ್ಟದ ಸ್ಪೆಲ್ ಬಿ ಪರೀಕ್ಷೆ: ಸೈಂಟ್ ಮೇರಿಸ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ನೀರಚಿಲುಮೆ ಬಳಿ ಬೈಕ್ ಕಾರು ಅಪಘಾತ

Suddi Udaya

ಮೊರಾರ್ಜಿ ದೇಸಾಯಿ/ಇಂದಿರಾಗಾಂಧಿ/ ಡಾ. ಬಿಆರ್ ಅಂಬೇಡ್ಕರ್/ನಾರಾಯಣ ಗುರು ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya
error: Content is protected !!