ಉಜಿರೆ : ಇಲ್ಲಿಯ ಆದಿಗುರು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಒಂದು ವರ್ಷದ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳಿಗೆ ಸಿದ್ದ ಉಡುಪು ಉದ್ಯಮ ಕ್ಷೇತ್ರದ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ತರಭೇತಿ ಕೇಂದ್ರದ ಮಾಲಕರಾದ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ಇವರ ಸಹಕಾರದಲ್ಲಿ ಡಿ. 19ರಂದು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಬೆಳ್ತಂಗಡಿ ಇಲ್ಲಿಗೆ ಭೇಟಿ ನೀಡಲಾಯಿತು.
ಸಿರಿ ಗ್ರಾಮೋದ್ಯೋಗ ಸಂಸ್ಥೆಯು, ಆಧುನಿಕ ಯಂತ್ರೋಪಕರಣಗಳು ಮತ್ತು ಕಾರ್ಮಿಕರ ಅರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿರುವ ಹಾಗೂ ಗ್ರಾಮೀಣ ಮಹಿಳೆಯರಿಗೆ ಅತ್ಯಧಿಕ ಉದ್ಯೋಗಾವಕಾಶ ನೀಡಿದ ಸುಸಜ್ಜಿತ ಸಂಸ್ಥೆಯಾಗಿದೆ.
ಸಂಸ್ಥೆಯ ಪ್ರತಿಯೊಂದು ಯಂತ್ರೋಪಕರಣ ಹಾಗೂ ಉತ್ಪಾದನೆಯ ಬಗ್ಗೆ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಜನಾರ್ಧನ್ ಹಾಗೂ ಜನರಲ್ ಮ್ಯಾನೇಜರ್ ಜೀವನ್ ಇವರು ಮಾಹಿತಿ ನೀಡಿದರು.
ಆದಿಗುರು ಕೌಶಲ್ಯಾಭಿವೃದ್ಧಿ ತರಭೇತಿ ಕೇಂದ್ರವು ಸತತ ಮೂರು ವರ್ಷದಿಂದ ಉಜಿರೆಯಲ್ಲಿ ಫ್ಯಾಷನ್ ಡಿಸೈನಿಂಗ್, ಎಂಬ್ರಾಯ್ ಡರಿ, ಮೆಹಂದಿ, ಆರ್ಟ್ ಮತ್ತು ಕ್ರಾಫ್ಟ್ ಮೊದಲಾದ ತರಭೇತಿ ಗಳನ್ನು ನೀಡುತ್ತಾ ಬಂದಿರುವ ಸಂಸ್ಥೆಯಾಗಿರುತ್ತದೆ.











