25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೋಮಂತ್ತಡ್ಕದಲ್ಲಿ ಶ್ರೀಮತಿ ಪುಷ್ಪ ಮತ್ತು ಪುರುಷೋತ್ತಮ ಆಚಾರ್ಯ ಮಾಲಕತ್ವದ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್-ಫರ್ನಿಚರ್ಸ್ ಪ್ರಾರಂಭೋತ್ಸವ, ಅದೃಷ್ಟ ಯೋಜನೆ ಪ್ರಾರಂಭ

ಮುಂಡಾಜೆ: ನಿಡಿಗಲ್ ಕಲ್ಮಂಜ ಗ್ರಾಮ ಪಂಚಾಯತ್ ಬಳಿ ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿರುವ ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್ ಇದರ ಸಹಸಂಸ್ಥೆ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್‌ನ ನೂತನ ಶೋರೂಂನ ಪ್ರಾರಂಭೋತ್ಸವವು ಮುಂಡಾಜೆ ಸೋಮಂತಡ್ಕದಲ್ಲಿ ಡಿ.21 ರಂದು ಉದ್ಘಾಟನೆಗೊಂಡಿದೆ.

ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರಾದ ಶರತ್‌ಕೃಷ್ಣ ಪಡ್ವೆಟ್ನಾಯ ಅವರು ಉದ್ಘಾಟಿಸಿ ಭಗವಂತನ ಅನುಗ್ರಹದಿಂದ ಈ ಉದ್ಯಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್ ಮಾತನಾಡಿ ನಗುಮೊಗದ ಸೇವೆಯಿಂದ ಉದ್ಯಮದಲ್ಲಿ ಗೆಲುವು ಸಾಧಿಸಲು ಸಾಧ್ಯವಿದೆ ಎಂದರು.

ಮುಖ್ಯ ಅಥಿತಿಗಳಾಗಿ ಉಜಿರೆ ಶ್ರೀ ಶಾರದಾ ಜುವೆಲ್ಲರ್ಸ್ ನ ಆನಂದ ಆಚಾರ್ಯ, ಚಂದ್ರಾವತಿ ಸೋಮಂತ್ತಡ್ಕ, ಪಂಚಶ್ರೀ ಎಂಟರ್ಪ್ರೈಸಸ್ ಮಾಲಕಿ ಚಂದ್ರಾವತಿ ನಾರಾಯಣ ಗೌಡ, ಬ್ಯಾಂಕ್ ಆಫ್ ಬರೋಡ ಮುಂಡಾಜೆ ಮ್ಯಾನೇಜರ್ ಜೆಗತ ಎ., ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ, ಉಜಿರೆ ಹಳ್ಳಿಮನೆ ಮಾಲಕ ಪ್ರವೀಣ್‌ ಫೆರ್ನಾಂಡೀಸ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ದೆಹಲಿ ಉದ್ಯಮಿ ಪ್ರಭಾಕರ ಶೆಟ್ಟಿ, ಗುತ್ತಿಗೆದಾರ ಚೆನ್ನಕೇಶವ, ಸೋಮಂತಡ್ಕ, ಮುಂಡಾಜೆ ಹಾ.ಉ.ಸ ಸಂಘದ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ,ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್, ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಉದ್ಯಮಿಗಳಾದ ವಿಜಯ್ ನಿಡಿಗಲ್,ಜಯಂತ್ ಉಜಿರೆ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿ ಶುಭ ಕೋರಿದರು.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಶ್ರೀಮತಿ ಪುಷ್ಪ ಮತ್ತು ಪುರುಷೋತ್ತಮ ಆಚಾರ್ಯ ಸ್ವಾಗತಿಸಿ ,ಸತ್ಕರಿಸಿದರು.ಯುವ ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ ಅದೃಷ್ಟ ಯೋಜನೆ ಪ್ರಾರಂಭಿಸಿದ್ದು ಸದಸ್ಯರಾಗಲು ಸುವರ್ಣ ಅವಕಾಶವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.

ಶೋ ರೂಮ್ ನ ವೈಶಿಷ್ಟ್ಯಗಳು: ಇಲ್ಲಿ ಎಲ್ಲ ಕಂಪನಿಗಳ ಟಿವಿ, ಫ್ರಿಡ್ಜ್,ವಾಷಿಂಗ್ ಮೆಸಿನ್, ಮಿಕ್ಸಿ, ಡ್ರೈಂಡರ್, ಕಾಟ್, ಡೈನಿಂಗ್ ಟೇಬಲ್, ಕಪಾಟು, ಫ್ಯಾನ್, ಇನ್ನಿತರ ಗ್ರಹೋಪಯೋಗಿ ಉತ್ಪನ್ನಗಳು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ಪುಷ್ಪ ಮತ್ತು ಪುರುಷೋತ್ತಮ ಆಚಾರ್ಯ, ವೈಶಾಖ್ ಆಚಾರ್ಯ, ವೈದಿಕ್ ಆಚಾರ್ಯ ತಿಳಿಸಿದರು.

Related posts

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ಜಾಗತಿಕ ಔಷಧ ತಜ್ಞರ ದಿನಾಚರಣೆ

Suddi Udaya

ಭಾರೀ ಮಳೆ ಹಿನ್ನೆಲೆ: ಇಂದು (ಮೇ 30) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆಘೋಷಣೆ

Suddi Udaya

ದಯಾ ವಿಶೇಷ ಶಾಲೆಯಲ್ಲಿ ದಿ.ಕೆ. ವಸಂತ ಬಂಗೇರರವರ 80ನೇ ವರ್ಷದ ಹುಟ್ಟುಹಬ್ಬ ಆಚರಣೆ

Suddi Udaya

ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ತೋಟತ್ತಾಡಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ನೆರಿಯ: ಗಂಡಿಬಾಗಿಲು ಸಂತ ತೋಮಸರ ಸಭಾಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ

Suddi Udaya

ನಾಳೆ(ಜು.6): ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ : ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ: ದಿತಿ ಸಾಂತ್ವನ ನಿಧಿ ವಿತರಣೆ

Suddi Udaya
error: Content is protected !!