32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸ್ಟಾರ್ ಲೈನ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಗಣಿತ ಲೋಕದ ಪ್ರದರ್ಶನ

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ಗಣಿತ ಲೋಕದ ಪಿತಾಮಹ ಶ್ರೀನಿವಾಸ್ ರಾಮಾನುಜನ್ ಇವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರೀಯ ಗಣಿತ ದಿನಾಚರಣೆ ಹಾಗೂ ಗಣಿತ ವಸ್ತು ಪ್ರದರ್ಶನದ ಬಹಳ ಅರ್ಥಪೂರ್ಣವಾಗಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಆಡಳಿತ ಟ್ರಸ್ಟಿನ ಕಾರ್ಯದರ್ಶಿ ಸಯ್ಯದ್ ಅಯ್ಯುಬ್ ನೆರವೇರಿಸಿ ಮಾತನಾಡಿ “ಜೀವನದಲ್ಲಿ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ ಹಾಗೂ ರಾಮಾನುಜನ್ ಅವರು ಅಲ್ಪ ಆಯುಷ್ಯದಲ್ಲಿ ಮಾಡಿದ ಸಾಧನೆ ನಮಗೆ ಪ್ರೇರಣೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಮಾತನಾಡಿ “ವಿದ್ಯಾರ್ಥಿಗಳು ರಾಮಾನುಜನ್ ಅವರ ಜೀವನದ ಸಾಧನೆಯನ್ನು ತಿಳಿದುಕೊಳ್ಳಬೇಕು. ಜೀವನದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ರಾಮಾನುಜರಂತೆ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಗಣಿತ ಪ್ರಾತ್ಯಕ್ಷಿಕೆಗಳು ಅತಿಥಿಗಳ ಪ್ರಶಂಸೆಗೆ ಪಾತ್ರವಾಯಿತು. ಶಾಲಾ ವಿದ್ಯಾರ್ಥಿಗಳು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 9ನೇ ತರಗತಿಯ ವಿದ್ಯಾರ್ಥಿ ಕುಮಾರಿ ಹಿಫ್ಝ ಬೇಗಂ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಕನ್ಯಾಡಿ II ಸ. ಉ. ಹಿ.ಪ್ರಾ. ಶಾಲೆಯಲ್ಲಿ ನೂತನ ಎಲ್‌ಕೆಜಿ ತರಗತಿ ಶುಭಾರಂಭ

Suddi Udaya

ನಾಳೆ(ಮಾ.22): ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ, ಅಭಿನಂದನಾ ಕಾರ್ಯಕ್ರಮ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಳದಂಗಡಿ ಶಾಖೆಯ 3ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿ ಸ್ವಚ್ಛತಾ ಕಾರ್ಯ

Suddi Udaya

ಮುಂಡಾಜೆ ಕೀರ್ತನಾ ಕಲಾ ತಂಡದ ವತಿಯಿಂದ ನಿವೃತ್ತ ಚಂದ್ರಕಾಂತ ಪ್ರಭು ರಿಗೆ ಅಭಿನಂದನೆ ಕಾರ್ಯಕ್ರಮ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ್ ರೈ ಹೃದಯಾಘಾತದಿಂದ ನಿಧನ

Suddi Udaya
error: Content is protected !!