September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಳದಂಗಡಿ ಸ.ಪ.ಪೂ. ಕಾಲೇಜಿನಲ್ಲಿ ಪ್ರಯೋಗಾಲಯ ಉಪಕರಣಗಳ ಹಸ್ತಾಂತರ ಮತ್ತು ಪ್ರತಿಭಾ ಪುರಸ್ಕಾರ

ಅಳದಂಗಡಿ : ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಮಂಗಳೂರು ಇವರು ನೀಡಿರುವ ರೂ. 2.5 ಲಕ್ಷ ಮೊತ್ತದ ಪ್ರಯೋಗಾಲಯ ಉಪಕರಣಗಳ ಹಸ್ತಾಂತರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಕಾಲೇಜು ಸಭಾಂಗಣದಲ್ಲಿ ಜರಗಿತು.

ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಮಂಗಳೂರು ಇದರ ಮೆಡಿಕಲ್ ಸರ್ವಿಸಸ್ ಜನರಲ್ ಮ್ಯಾನೇಜರ್ ಡಾ. ಯೋಗೀಶ್ ಇವರು ಪ್ರಯೋಗಾಲಯ ಉಪಕರಣಗಳನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸನ್ನಿ ಕೆ ಎಂ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಇವರು ವಿದ್ಯಾರ್ಥಿಗಳು ವಿಜ್ಞಾನ ಉಪಕರಣಗಳ ಸದುಪಯೋಗ ಪಡೆದು ಕಲಿಕೆಯಲ್ಲಿ ಉನ್ನತ ಸಾಧನೆ ಮಾಡಿ ಪೋಷಕರಿಗೆ ಸಮಾಜಕ್ಕೆ ಕೀರ್ತಿವಂತರಾಗಬೇಕು ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಮಂಗಳೂರು ಇದರ ಸಿ ಎಸ್ ಆರ್ ಸಂಚಾಲಕರಾದ ವಿವೇಕ್ ಕೋಟ್ಯಾನ್, ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್, ಹಿರಿಯ ಉಪನ್ಯಾಸಕಿ ಭಾರತಿ, ವಿದ್ಯಾರ್ಥಿ ನಾಯಕರಾದ ಸುದರ್ಶನ್ ಮತ್ತು ಶ್ರೇಯಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಳೆದ ವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರದಲ್ಲಿ ಕ್ರೀಡಾ ಸ್ಪರ್ಧೆಗಳ ಪಟ್ಟಿಯನ್ನು ರಾಜ್ಯಶಾಸ್ತ್ರ ಉಪನ್ಯಾಸಕರಾದ ಸಂದೀಪ್ ಮತ್ತು ಸಮಾಜಶಾಸ್ತ್ರ ಉಪನ್ಯಾಸಕಿ ತುಳಸಿ ವಾಚಿಸಿದರು. ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಪಟ್ಟಿಯನ್ನು ರಸಾಯನಶಾಸ್ತ್ರ ಉಪನ್ಯಾಸಕ ರಾಮಚಂದ್ರ ಎ ಜಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಯನ್ನು ಭೌತಶಾಸ್ತ್ರ ಉಪನ್ಯಾಸಕಿ ಪಲ್ಲವಿ ವಾಚಿಸಿದರು. ಗಣಿತಶಾಸ್ತ್ರ ಉಪನ್ಯಾಸಕ ಸದಾನಂದ ಕುಲಾಲ್ ಸ್ವಾಗತಿಸಿದರು. ಪ್ರಶಾಂತ್ ಕುಮಾರ್ ಜೀವಶಾಸ್ತ್ರ ಉಪನ್ಯಾಸಕರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರಾದ ಗಾಯತ್ರಿ ಧನ್ಯವಾದವಿತ್ತರು.

Related posts

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ

Suddi Udaya

ಮೇ 10 : ಸ್ಪಂದನ ಬಂಟರ ಸೇವಾ ತಂಡದಿಂದ 50ನೇ ಸೇವಾ ಕಾರ್ಯಕ್ರಮ: ನೂತನ ಸ್ಪಂದನ ಮನೆ ಹಸ್ತಾಂತರ

Suddi Udaya

ಕರಂಬಾರು:ವಿಪರೀತ ಮಳೆಯಿಂದ ಅಣೆಕಟ್ಟಿನಲ್ಲಿ ಮರಗಳ ರಾಶಿ, ಪಕ್ಕದ ತೋಟಕ್ಕೆ ಹರಿದ ನೀರು, ಕೃಷಿಗೆ ಹಾನಿ

Suddi Udaya

ಎಲ್‌.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಿಂದ ತಣ್ಣೀರುಬಾವಿ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ವಕ್ಫ್‌ ಕಾಯ್ದೆಯನ್ನು ಶೀಘ್ರವಾಗಿ ತಿದ್ದುಪಡಿ ಮಾಡಬೇಕು ಮತ್ತು ಎಚ್.ಡಿ. ಕುಮಾರಸ್ವಾಮಿಯನ್ನು ವರ್ಣದ ವಿಚಾರವಾಗಿ ನಿಂದಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಷಮೆಯಾಚಿಸಬೇಕೆಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಗ್ರಹ

Suddi Udaya

ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Suddi Udaya
error: Content is protected !!