23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುಲ್ಕೇರಿಮೊಗ್ರು : ಗುರು ಪೂಜೆ ಮತ್ತು ದೀಕ್ಷಾ ಗ್ರಂಥಿದಾರಣೆ ಕಾರ್ಯಕ್ರಮ

ಸುಲ್ಕೇರಿಮೊಗ್ರು: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಸುಲ್ಕೇರಿಮೊಗ್ರು, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ, ಸುಲ್ಕೇರಿಮೊಗ್ರು, ಇದರ ಆಶ್ರಯದಲ್ಲಿ 3 ನೇ ವರ್ಷದ ಗುರು ಪೂಜೆ ಮತ್ತು ದೀಕ್ಷಾ ಗ್ರಂಥಿ ದಾರಣೆ. ಹಾಗೂ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿ.21ರಂದು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ನಿರಂಜನ ಶಾಂತಿಯವರ ಪೌರೋಹಿತ್ಯದಲ್ಲಿ ಗುರು ಪೂಜೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಸುಲ್ಕೇರಿಮೊಗ್ರು ಇದರ ಅಧ್ಯಕ್ಷ ಸಂಕೇತ್ ಬಂಗೇರ, ವಹಿಸಿದ್ದರು.
ಧಾರ್ಮಿಕ ಭಾಷಣ ಮಹೇಶ್ ಶಾಂತಿ, ಹೆಜಮಾಡಿ ಇವರು ಮಾಡಿ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.


ಮೂಲ್ಕಿ, ಮೂಡಬಿದ್ರೆ. ಶಾಸಕ ಉಮಾನಾಥ್ ಕೋಟ್ಯಾನ್, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿಧ್ಯಾಬ್ಯಾಸದ ಜೊತೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿಲ್ಲಾ ಪ್ರಶಸ್ತಿ ಪಡೆದ ಸತೀಶ್ ದೇವಾಡಿಗ ಸುಲ್ಕೇರಿಮೊಗ್ರು, ಹಾಗೂ ಯುವ ಪ್ರತಿಭೆ ಹಾಗೂ ಬಡ ರೋಗಿಗಳಿಗೆ ತನ್ನ ವೀಡಿಯೋ ಮೂಲಕ ಸಹಾಯ ಮಾಡುತ್ತಿರುವ ಜಯಂತ್ ಮಡಿವಾಳ ಹಾಗೂ ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಸುಧೀರ್ ಆರ್ ಸುವರ್ಣ, ನಿರ್ದೇಶಕರಾದ ಅಶೋಕ ಕಾಡಂಗೆ, ಅಶೋಕ ನಲ್ಲಾರು ಇವರಿಗೆ ಸನ್ಮಾನಿಸಲಾಯಿತು. ಗ್ರಾಮದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ವೇದಿಕೆಯಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಪ್ರಗತಿಪರ ಕೃಷಿಕರಾದ ಎಂ. ಗಂಗಾಧರ ಮಿತ್ತಮಾರು, ಸೋಮನಾಥ ಬಂಗೇರ ವರ್ಪಾಳೆ, ಯುವ ಬಿಲ್ಲವ ವೇದಿಕೆ, ಬೆಳ್ತಂಗಡಿಯ ಅಧ್ಯಕ್ಷರಾದ ಎಂ. ಕೆ. ಪ್ರಸಾದ್, ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿಯ ಅಧ್ಯಕ್ಷೆ ಶ್ರೀಮತಿ ಸುಮತಿ ಪ್ರಮೋದ್, ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತಿನ ಸಹಕಾರಿ ಸಂಘ ನಿಯಮಿತ ಶಿರ್ಲಾಲು ಇದರ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಬೇಬಿ ಬಂಗೇರ ಹುಂಬೆದಡ್ಕ., ಗುರುವಪ್ಪ ಪೂಜಾರಿ ಪಟ್ಲ, ವಿಜಯಕುಮಾರ್, ನಂದನ್ ಕುಮಾರ್, ಸಚಿನ್ ಮಾಂತ್ಯೋಲು, ಶ್ರೀಮತಿ ಶಕುಂತಳ, ಶ್ರೀಮತಿ ಮಮತ ಎಸ್.ಎಂ. ಉಪಸ್ಥಿತರಿದ್ದರು.

ಕುಮಾರಿ ಲಾಸ್ಯ ಪ್ರಾರ್ಥನೆ ಮಾಡಿದರು. ಸಂಘದ ಕಾರ್ಯದರ್ಶಿ ವಿಜಯಕುಮಾರ್ ಸ್ವಾಗತಿಸಿ. ಸುಧಾಕರ ಪೂಜಾರಿ ಅಳಿಯೂರು ಕಾರ್ಯಕ್ರಮದ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಂದನ್ ಕುಮಾರ್ ಧನ್ಯವಾದವಿತ್ತರು.
ಚಿತ್ರ, ವರದಿ : ಜ್ಯೋತಿಕಾ ಅಳದಂಗಡಿ.

Related posts

ವಾಣಿ ಕಾಲೇಜಿನಲ್ಲಿ ಅಕ್ಷರ ವಾಣಿ ಬಿತ್ತಿಪತ್ರಿಕೆ ಅನಾವರಣ

Suddi Udaya

ಉಜಿರೆ: 1ವರ್ಷ 8 ತಿಂಗಳಿನ ವೇದ್ಯ ಶ್ರೀಶಾಸ್ತ ರವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್

Suddi Udaya

ಬೆಳ್ತಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಗಿಫ್ಟ್ ಗಳು

Suddi Udaya

ಸುಂದರ ಭಾರತ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ಸರಕಾರಿ ಶಾಲೆಗಳಿಗೆ ನೀಡಲಾಗುವ ಉಚಿತ ನೋಟ್ ಪುಸ್ತಕ ಗಳ ವಿತರಣೆ

Suddi Udaya

ಜೆ ಇ ಇ ಮೈನ್ಸ್ – 2: ಎಕ್ಸೆಲ್ ಗುರುವಾಯನಕೆರೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!