37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡಲು ಪಡಂಗಡಿ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆಗ್ರಹ

ಪಡಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಮಟ್ಟದ 26ನೇ ಜನಸ್ಪಂದನ ಸಭೆ ಡಿ. 23 ರಂದು ಗ್ರಾಮ ಗಣಪತಿ ಭವನ ಪಡಂಗಡಿಯಲ್ಲಿ ನಡೆಯಿತು.

ಜಾತ್ರೆ ನೇಮೋತ್ಸವದ ಅಂಗವಾಗಿ ನಡೆಯುವ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದರು.
ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡುತ್ತಿಲ್ಲ, ಕೇಪುವಿನಲ್ಲಿ ಕೇಸ್ ದಾಖಲಿಸಿದ್ದಾರೆ. ಎರಡು ವರ್ಷದ ಹಿಂದೆ ಕೆಡಿಪಿ ಸಭೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡುವಂತೆ ವಿಷಯ ಪ್ರಸ್ತಾಪಿಸಿದ್ದೆ ಆದರೆ ಅಂದು ನನ್ನ ಟ್ರೋಲ್ ಮಾಡಿದರು ಇವಾಗ ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ದೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕರು ಹೇಳಿದರು.

ಗ್ರಾಮ ವ್ಯಾಪ್ತಿಯಲ್ಲಿ ತಂತಿಗಳ ಮೇಲೆ ಅಪಾಯಕಾರಿ ಮರಗಳು ಬಾಗಿಕೊಂಡಿದೆ ಸಂಬಂಧ ಪಟ್ಟ ಇಲಾಖೆಗಳು ಕ್ರಮ ವಹಿಸುತ್ತಿಲ್ಲ, ನಾನಾ ಕಡೆಗಳಲ್ಲಿ ಹಳೆಯ ತಂತಿ ಕಂಬ ಗಳನ್ನು ಬದಲಾಯಿಸಬೇಕು ಹೆಚ್ಚುವರಿ ಸಾಮಾರ್ಥ್ಯದ ವಿದ್ಯುತ್ ಪರಿವರ್ತಕ ಬೇಕು ಎಂದು ನಾಗರೀಕರು ಶಾಸಕರಲ್ಲಿ ಬೇಡಿಕೆಯನ್ನು ಇಟ್ಟರು. ತಕ್ಷಣವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಪಡಂಗಡಿಯಲ್ಲಿ ಸಾರ್ವಜನಿಕ ಆಟ ಮೈದಾನ ನಿರ್ಮಾಣಕ್ಕೆ ಸಾರ್ವಜನಿಕರು ಆಗ್ರಹಿಸಿದರು. ನಂದಿಬೆಟ್ಟ 5ಸೆಂಟ್ಸ್ ಕಾಲೋನಿ ತಂತಿ ಮೇಲೆವಿರುವ ಮರಗಳನ್ನು ಕುಡಿಯಬೇಕು.

ತಹಶೀಲ್ದಾರ್ ಪ್ರಥ್ವಿ ಸಾನಿಕಂ ತಾಲೂಕು ಪಂಚಾಯತ್, ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ಅಧ್ಯಕ್ಷ ವಸಂತ್,
ಉಪಾಧ್ಯಕ್ಷೆ ವಸಂತಿ ಪಂಚಾಯತ್, ಪಡಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಂತೋನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಫಾನ, ಅಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ನಡ: ಪುತ್ಯೆಯಲ್ಲಿ ಗುಡ್ಡ ಜರಿದು ಮನೆಗೆ ಹಾನಿ

Suddi Udaya

ಉಜಿರೆ ಸೈoಟ್ ಜಾರ್ಜ್ ಚರ್ಚಿನಲ್ಲಿ ಯುವಜನ ಸಮ್ಮೇಳನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Suddi Udaya

ಮುಂಡಾಜೆ ಶ್ರೀ ಪರಶುರಾಮ ಭಜನಾ ಸಂಘದಿಂದ ಕೊಡ್ಯಡ್ಕ ಹೊಸನಾಡು ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಮಹಿಳಾ ವೇದಿಕೆಯ ಸದಸ್ಯರಿಂದ ವಿವಿಧ ಕ್ಷೇತ್ರಕ್ಕೆ ಭೇಟಿ

Suddi Udaya

ಕಾಯರ್ತಡ್ಕ: ಭಾರತ್ ಸ್ಟೋರ್ಸ್ ಗೆ ನುಗ್ಗಿದ ಕಳ್ಳರು: ನಗದು ಜೊತೆಗೆ ಇನ್ನಿತರ ವಸ್ತುಗಳನ್ನು ದೋಚಿ ಪರಾರಿ

Suddi Udaya
error: Content is protected !!