ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕುವೆಟ್ಟು ಜನಸ್ಪಂದನ ಸಭೆ

ಕುವೆಟ್ಟು: ಜನರ ಬಳಿಗೆ ತಾಲೂಕು ಆಡಳಿತ ಎಂಬ ಕಲ್ಪನೆಯ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಮಟ್ಟದ 29ನೇ ಜನಸ್ಪಂದನ ಸಭೆ ಡಿ.23 ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ನಡೆಯಿತು.

ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ , ಸದಸ್ಯರು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಸಭೆ ಉದ್ಘಾಟಿಸಿ ಮಾತನಾಡಿ ಶಾಸಕ ಹರೀಶ್ ಪೂಂಜ ಜನರೆಡೆಗೆ ತಾಲೂಕು ಆಡಳಿತ ಎಂಬ ವಿನೂತನ ರೀತಿಯಲ್ಲಿ ಜನಸ್ಪಂದನ ಸಭೆ ರಾಜ್ಯದಲ್ಲಿ ಮೊದಲ ಬಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಗಮನಾರ್ಹ. ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು‌ ಎಂದರು.

ಗ್ರಾಮದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಸಮಸ್ಯೆಯ ಸರಮಲೆಯಾಗಿದೆ. ಯಂತ್ರೋಪಕರಣ ಸಹಿತ ನಾನಾ ಸಮಸ್ಯೆಗಳಿಂದ ಗ್ರಾಹಕರ ವಾಹಿವಾಟುಗೆ ತೊಂದರೆ ಉಂಟಾಗುತ್ತಿದೆ , ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರ ಕಡಿಮೆ ಸಂಖ್ಯೆಯಲ್ಲಿದ್ದು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದಾಗ ಬ್ಯಾಂಕ್ ವಿಚಾರವಾಗಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು, ಆರೋಗ್ಯ ಸಹಾಯಕಿಯರ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಮತ್ತು ಡಿಹೆಚ್ಓ ಬಳಿ ಸಮಸ್ಯೆ ಬಗ್ಗೆ ಮಾತನಾಡುವುದಾಗಿ ಶಾಸಕರು ತಿಳಿಸಿದರು.

94ಸಿ ಹಾಗೂ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗದೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದಾಗ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಕುವೆಟ್ಟು, ಓಡಿಲ್ನಾಳ, ಕೊಯ್ಯೂರು, ಕಳಿಯ, ಲಾಯಿಲ ಹಾಗೂ ಪಡಂಗಂಡಿ ಭಾಗದಲ್ಲಿ ಅಕ್ರಮ ಸಕ್ರಮ ಮಂಜೂರಾತಿ ಅವಕಾಶ ಇಲ್ಲ ಇದು ರಾಜ್ಯದ ಎಲ್ಲಾ ಕಡೆಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ ಎಂದು ಶಾಸಕರು ತಿಳಿಸಿದರು.

ಮಂಗಳೂರು ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಮದ್ದಡ್ಕ, ಕುವೆಟ್ಟು, ಕಿನ್ನಿಗೋಳಿ, ಗುರುವಾಯನಕೆರೆ ಶಾಲಾ ವಠಾರದಲ್ಲಿ ಸಮಸ್ಯೆಯಾಗುತ್ತಿದ್ದು ಅಲ್ಲಿ ಬ್ಯಾರೀಕೆಡ್ ಅಳವಡಿಸಬೇಕು. ತೆರವುಗೊಳಿಸಿದ ಬಸ್ಸು ತಂಗುದಾಣಗಳನ್ನು ನಿರ್ಮಿಸಬೇಕು. ಮದ್ದಡ್ಕದಲ್ಲಿ ಆರೋಗ್ಯ ಕೇಂದ್ರ ಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ಬೇಡಿಕೆಯನ್ನು ಇಟ್ಟರು. ರಸ್ತೆ ಕಾಮಗಾರಿ ಪೂರ್ಣಗೊಂಡ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ತೆರವಾದ ಎಲ್ಲಾ ಬಸ್ಸು ತಂಗುದಾಣಗಳು ಪುನರ್ ನಿರ್ಮಾಣವಾಗಲಿದೆ, ಗುರುವಾಯನಕೆರೆಯಲ್ಲಿ ಅಧಿಕ ಜನ ಸಂಖ್ಯೆಯಿದ್ದು ಆರೋಗ್ಯ ಕೇಂದ್ರ ತೆರೆಯುವ ಕುರಿತು ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕರು ತಿಳಿಸಿದರು.

Related posts

ಬೆಳ್ತಂಗಡಿ: ನಿವೃತ್ತ ಶಿಕ್ಷಕ, ಯಕ್ಷಗಾನದ ಹಿರಿಯ ಅರ್ಥಧಾರಿ ಕೆ.ವಿ. ಗಣಪಯ್ಯ ನಿಧನ

Suddi Udaya

ವೇಣೂರು: ಅಕ್ರಮ ಗೋ ಸಾಗಾಟ: ಆರೋಪಿಗಳು ಪೊಲೀಸರ ವಶ

Suddi Udaya

ಎಸ್ ಡಿ ಎಂ ಪಪೂ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂವಾದ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ಉಸ್ತುವಾರಿ ವಿ.ಹಿಂ.ಪ. ಸಮಿತಿ ಪ್ರಧಾನಕಾರ್ಯದರ್ಶಿ ಗೋಪಾಲ್ ಜಿ. ಭೇಟಿ

Suddi Udaya

ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕಲೋತ್ಸವದಲ್ಲಿ ಎಲ್ . ಸಿ. ಆರ್ ವಿದ್ಯಾ ಸಂಸ್ಥೆಗೆ ಸಮಗ್ರ ಪ್ರಶಸ್ತಿ

Suddi Udaya

ಕಡಿರುದ್ಯಾವರ: ಕುಚ್ಚೂರು ಬೈಲು ನಲ್ಲಿ ದ್ವಿತೀಯ ವರ್ಷದ ನಾಗಪ್ರತಿಷ್ಠೆ ವರ್ಷಾಚರಣೆ

Suddi Udaya
error: Content is protected !!