ಬೆಳ್ತಂಗಡಿ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಬೆಳ್ತಂಗಡಿ ವತಿಯಿಂದ ಕೊಯ್ಯೂರಿನಲ್ಲಿ ಡಿ.28 ರಂದು ನಡೆಯಲಿದ್ದು ಸಾಹಿತ್ಯ ಸಮ್ಮೇಳನದ ಜನಪ್ರತಿನಿಧಿ ನೆಲೆಯಲ್ಲಿ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ ಅವರು ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಸಂಪೂರ್ಣ ಸಹಕಾರ ಘೋಷಿಸಿದರು.
ಈ ವೇಳೆ ಕ.ಸಾ. ಪ ತಾ. ಅಧ್ಯಕ್ಷ ಡಿ ಯದುಪತಿ ಗೌಡ, ಬೆಳ್ತಂಗಡಿ ಹೋಬಳಿ ಅಧ್ಯಕ್ಷ ಡಾ. ದಿವ ಕೊಕ್ಕಡ, ಸಂಘ ಸಂಸ್ಥೆಗಳ ಪ್ರತಿನಿಧಿ ಅಚ್ಚು ಮುಂಡಾಜೆ, ಸಂಯೋಜನಾ ಸಮಿತಿ ಅಧ್ಯಕ್ಷ ಅಶೋಕ ಭಟ್ ಅಗ್ರಸಾಲೆ, ಕಾರ್ಯಾಧ್ಯಕ್ಷರುಗಳಾದ ಮೋಹನ ಗೌಡ ಕೊಯ್ಯೂರು ಮತ್ತು ರಾಧಾಕೃಷ್ಣ ತಚ್ಚಮೆ, ಸಂಘಟನಾ ಕಾರ್ಯದರ್ಶಿ ಕೇಶವ ಗೌಡ ಕೋಂಗುಜೆ, ಸಂಯೋಜಕ ರಾಮಚಂದ್ರ ದೊಡಮನಿ, ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ, ಸಂಚಾಲಕ ದಾಮೋಧರ ಗೌಡ ಬೆರ್ಕೆ, ಕೋಶಾಧಿಕಾರಿ ಸುಧಾಕರ ಶೆಟ್ಟಿ, ಸಂಘಟಕ ನವೀನ್ ಗೌಡ ವಾದ್ಯಕೋಡಿ, ಮುಂತಾದವರು ಉಪಸ್ಥಿತರಿದ್ದರು.











