September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿರಾಜಕೀಯವರದಿ

ಶಾಸಕ ಹರೀಶ್ ಪೂಂಜರಿಂದ ಮ್ಯಾರಥನ್ ಜನಸ್ಪಂದನ ಸಭೆ

ಬೆಳ್ತಂಗಡಿ: ಗ್ರಾಮ ಮಟ್ಟಕ್ಕೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜನಸ್ಪಂದನ ಸಭೆ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಸಂಪೂರ್ಣಗೊಳ್ಳುವ ಹೊಸ್ತಿಲಿನಲ್ಲಿದೆ. ಕಳೆದ ಡಿಸೆಂಬರ್‌ನಲ್ಲಿ ಆರಂಭಗೊಂಡ ಸಭೆ ದಿವಸಕ್ಕೆ ನಾಲ್ಕರಂತೆ ಈಗಾಗಲೇ ೩೬ ಗ್ರಾಮ ಪಂಚಾಯತ್‌ಗಳಲ್ಲಿ ನಡೆದಿದೆ. ಶಾಸಕರೊಂದಿಗೆ, ೨೦ಕ್ಕೂ ಮಿಕ್ಕಿ ಇಲಾಖೆಯ ವಾಹನಗಳಲ್ಲಿ ಅಧಿಕಾರಿಗಳು ಮುಂದಿನ ಮೂರು ದಿನ ನಿರಂತರ ಮ್ಯಾರಥನ್ ನಡೆಸಲಿದ್ದಾರೆ.

ಜನರೆಡೆಗೆ ತಾಲೂಕು ಆಡಳಿತ ಎಂಬ ಕಲ್ಪನೆಯೊಂದಿಗೆ ಗ್ರಾಮ ಮಟ್ಟಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಜೊತೆ ಆಗಮಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸುವ ಪ್ರಯತ್ನ ಜಸಸ್ಪಂದನ ಮೂಲಕ ನಡೆಸಲಾಗುವುದು. ಈ ಸಭೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೆಳ್ತಂಗಡಿ ವಿಧಾನಾ ಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಕುಕ್ಕೇಡಿ, ಆರಂಬೋಡಿ, ಹೊಸಂಗಡಿ ಹಾಗೂ ಮರೋಡಿಯಲ್ಲಿ ಡಿ.೨೪ರಂದು ನಡೆದ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಭೆ ಉದ್ಘಾಟಿಸಿ ಮಾತನಾಡಿದರು. ೯/೧೧ ಸಮಸ್ಯೆ ಸರಳೀಕರಣ, ಅಕ್ರಮ-ಸಕ್ರಮ ಕಡತ ವಿಲೇ ಪ್ಲಾಟಿಂಗ್, ಅಪಾಯಕಾರಿ ಮರ ತೆರವು, ರಸ್ತೆ ದುರಸ್ತಿ, ನ್ಯಾಯಬೆಲೆ ಅಂಗಡಿ, ಕಾಡು ಪ್ರಾಣಿ ಉಪಟಳ, ಹಳೆಯ ವಿದ್ಯುತ್ ತಂತಿ ಬದಲಾವಣೆ, ಸಾರಿಗೆ ಬಸ್ ಸೌಲಭ್ಯ, ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ಸಹಿತ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರ ಗಮನಕ್ಕೆ ತಂದರು. ವಿವಿಧ ಬೇಡಿಕೆಗಳ ಅಹವಾಲುನ್ನು ಶಾಸಕರು ನಾಗರೀಕರಿಂದ ಪಡೆದುಕೊಂಡರು.

ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿಶಂಕರ್ ಎನ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇಲಾಖಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಮ್ಯಾರಥನ್ ಜನಸ್ಪಂದನ ಸಭೆ:ಡಿ.೨೬ ರಂದು ಲಾಯಿಲ, ನಾವೂರು, ಮಲವಂತಿಗೆ ಹಾಗೂ ಕಡಿರುದ್ಯಾವರ, ಡಿ.೩೦ ರಂದು ನಿಡ್ಲೆ, ಅರಸಿನಮಕ್ಕಿ, ಶಿಶಿಲ ಹಾಗೂ ಶಿಬಾಜೆ, ಡಿ.೩೧ ರಂದು ತೆಕ್ಕಾರು, ತಣ್ಣೀರುಪಂತ, ಕಣಿಯೂರು ಹಾಗೂ ಕೊಯ್ಯುರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆರ ನಡೆಯಲಿದೆ.

Related posts

ಬಜಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಜ.28 ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ: ಫೆ.2 ರಂದು ದೈವಗಳ ನರ್ತನ ಸೇವೆ

Suddi Udaya

ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕವ್ವಾಲಿಯಲ್ಲಿ ತೃತೀಯ ಸ್ಥಾನವನ್ನು ಮುಡಿಗೇರಿಸಿಕೊಂಡ ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ವತಿಯಿಂದ “ವೈದ್ಯರೊಂದಿಗೆ ಸಂವಾದ” ಕಾರ್ಯಕ್ರಮ

Suddi Udaya

ರಾಜ್ಯದ ಜನತೆಗೆ ಸಮಸ್ಯೆಗಳು ಎದುರಾಗದ್ದಂತೆ ಆಡಳಿತ ನಡೆಸಬೇಕು: ಕುಶಾಲಪ್ಪ ಗೌಡ ಪೂವಾಜೆ

Suddi Udaya

ಕೊಕ್ರಾಡಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya
error: Content is protected !!